ಭೋಪಾಲ್[ಜ.18]: ಹೆಲ್ಮೆಟ್‌ ಧರಿಸದ ಬೈಕ್‌ ಸವಾರರನ್ನು ಕಂಡರೆ ಟ್ರಾಫಿಕ್‌ ಪೊಲೀಸರು ದಂಡ ಹಾಕುವುದಕ್ಕೆ ಸದಾ ಸಿದ್ಧರಾಗಿರುತ್ತಾರೆ. ಆದರೆ, ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಹೆಲ್ಮೆಟ್‌ ಇಲ್ಲದೇ ಬೈಕ್‌ ಓಡಿಸುವ ಬೈಕ್‌ ಸವಾರರಿಗೆ ಟ್ರಾಫಿಕ್‌ ಪೊಲೀಸರು ಒಂದು ಪುಟದ ಪ್ರಬಂಧ ಬರೆಯುವ ಶಿಕ್ಷೆ ನೀಡುತ್ತಿದ್ದಾರೆ.

ಮಂಡ್ಯ : ವಾಹನ ಸವಾರರೇ ಗಮನಿಸಿ - ಇನ್ಮುಂದೆ ಕಡ್ಡಾಯ ನಿಯಮ

ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಟ್ರಾಫಿಕ್‌ ಪೊಲೀಸರು ಇಂಥದ್ದೊಂದು ಕ್ರಮ ಕೈಗೊಂಡಿದ್ದಾರೆ. ಹೆಲ್ಮೆಟ್‌ ಧರಿಸದ ವಾಹನ ಸವಾರರು ತಾವು ಏಕೆ ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ ಎಂಬುದನ್ನು ಕಾರಣ ಸಮೇತ 100 ಶಬ್ದಗಳಲ್ಲಿ ವಿವರಿಸಬೇಕು. ಕಳೆದ ಆರು ದಿನಗಳಲ್ಲಿ 150ಕ್ಕೂ ಹೆಚ್ಚು ಮಂದಿ ಪ್ರಬಂಧ ಬರೆದುಕೊಟ್ಟಿದ್ದಾರಂತೆ.

ಹೀಗಾಗಿ ಜನರು ದಂಡ ವಿಧಿಸಿದರೂ ಪರವಾಗಿಲ್ಲ. ಪ್ರಬಂಧ ಬರೆಯುವುದು ಯಾರಿಗೂ ಬೇಡ ಎನ್ನುತ್ತಿದ್ದಾರಂತೆ.

ಬೀದಿ ಪ್ರಾಣಿಗಳಿಂದಾಗುವ ಅಪಘಾತಕ್ಕೆ ಸರ್ಕಾರ ಹೊಣೆಯಲ್ಲ, ಪರಿಹಾರವೂ ಇಲ್ಲ!