ಮಾಜಿ ಲವರ್ ಪತ್ನಿಗೆ ಅಪಘಾತ ಮಾಡಿಸಿ ಏಡ್ಸ್ ರಕ್ತ ಇಂಜೆಕ್ಟ್ ಮಾಡಿದ ಮಹಿಳಾ ನರ್ಸ್, ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ತನ್ನ ಮಾಜಿ ಗೆಳೆಯ ಬೇರೆ ಮದುವೆಯಾಗಿರುವುದು ಸಹಿಸಲು ಸಾಧ್ಯವಾಗದೆ ಮೂವರ ನೆರವು ಪಡೆದು ಈ ಕೃತ್ಯ ಎಸಗಲಾಗಿದೆ.
ಕರ್ನೂಲ್ (ಜ.25) ಬ್ರೇಕ್ ಅಪ್ ಆದ ಬಳಿಕ ಸೇಡು ತೀರಿಸಿಕೊಂಡ ಹಲವು ಘಟನೆಗಳು ನಡೆದಿದೆ. ಆದರೆ ಇದೀಗ ನಡೆದ ಘಟನೆ ಬೆಚ್ಚಿ ಬೀಳಿಸುವಂತಿದೆ. ಪ್ರೀತಿಯಲ್ಲಿದ್ದ ಜೋಡಿ ಬ್ರೇಕ್ ಅಪ್ ಆಗಿದೆ. ಗೆಳೆಯ ಬೇರೊಂದು ಮದುವೆಯಾಗಿದ್ದಾನೆ. ಆದರೆ ಈಕೆಗೆ ಸಹಿಸಲು ಸಾಧ್ಯವಾಗಿಲ್ಲ. ಸೇಡು ತೀರಿಸಲು ವರ್ಷಗಳ ಕಾಲ ಕಾದು ಕುಳಿತ ಈಕೆ, ಗೆಳೆಯನ ಪತ್ನಿಗೆ ಅಪಘಾತ ಮಾಡಿಸಿದ್ದಾರೆ. ಬಳಿಕ ಗೆಳೆಯನ ಪತ್ನಿಯನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಏಡ್ಸ್ ರಕ್ತವನ್ನು ಇಂಜೆಕ್ಟ್ ಮಾಡಿದ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ.
ಘಟನೆ ಸಂಬಂಧ ಪೊಲೀಸರ ಆರೋಪಿಗಳಾದ 34 ವರ್ಷದ ಬೋಯಾ ವಸುಂದರ, 40 ವರ್ಷದ ಕೊಂಗೆ ಜ್ಯೋತಿ ಸೇರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಈ ಆರೋಪಿಗಳು ಭಾರಿ ಪ್ಲಾನ್ ಮಾಡಿ ಕೃತ್ಯ ಎಸಗಿದ್ದಾರೆ.
ಘಟನೆ ವಿವರ
ವಸುಂದರ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಪ್ರೀತಿ ಶುರುವಾಗಿದೆ. ಆದರೆ ವಸುಂದ ಪ್ರೀತಿಯಲ್ಲಿ ಸಮಸ್ಯೆಗಳು ಎದುರಾಗಿ ಬ್ರೇಕ್ ಅಪ್ ಆಗಿದೆ. ತನ್ನಿಂದ ಬ್ರೇಕ್ ಅಪ್ ಮಾಡಿಕೊಂಡ ಮಾಜಿ ಗೆಳೆಯ ವೈದ್ಯೆಯೊಬ್ಬಳನ್ನು ಮದುವೆಯಾಗಿದ್ದಾನೆ. ಇದು ವಸುಂದರಗೆ ಸಹಿಸಲು ಸಾಧ್ಯವಾಗಿಲ್ಲ. ಮಾಜಿ ಗೆಳೆಯನ ಮದುವೆಯಾಗಿ ವರ್ಷಗಳು ಉರುಳಿದೆ. ಆದರೆ ವಸುಂದರ ಸೇಡು ಮಾತ್ರ ತಣಿದಿರಲಿಲ್ಲ. ಬ್ರೇಕ್ ಮಾಡಿ ಬೇರೊಂದ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಗೆಳೆಯನನ್ನು ಹೇಗಾದರು ಮಾಡಿ ಮರಳಿ ಪಡೆಯಲು ಪ್ಲಾನ್ ಮಾಡಿದ್ದಾಳೆ.
ಮಾಜಿ ಗೆಳೆಯ ಹಾಗೂ ಆತನ ಪತ್ನಿಯನ್ನು ದೂರ ಮಾಡಲು ಪ್ರಯತ್ನಗಳು ಮಾಡಿದ್ದಾಳೆ. ಈ ಪ್ರಯತ್ನಗಳು ಸರಿಸುಮಾರು ವರ್ಷಗಳ ಕಾಲ ನಡೆದಿದೆ. ಆದರೆ ಪ್ರಯೋಜನವಾಗಲಿಲ್ಲ. ಹೀಗಾಗಿ ಪ್ಲಾನ್ ಬದಲಿಸಿದ್ದಾಳೆ. ಹೊಸ ಪ್ಲಾನ್‌ಗೆ ತನ್ನ ಮತ್ತೊಬ್ಬ ನರ್ಸ್ ಗೆಳತಿ ಜ್ಯೋತಿ ಹಾಗೂ ಮತ್ತಿಬ್ಬರ ನೆರವು ಪಡೆದಿದ್ದಾಳೆ. ಮಾಜಿ ಗೆಳೆಯನ ಪತ್ನಿ ವೈದ್ಯೆ. ಈ ವೈದ್ಯೆಗೆ ಖೆಡ್ಡಾ ತೋಡಿದ್ದಾರೆ. ವೈದ್ಯೆ ಕರ್ತವ್ಯಕ್ಕೆ ಬರುವಾಗ ಅಪಘಾತ ಮಾಡಿಸಲಾಗಿದೆ.
ಆಸ್ಪತ್ರೆಯಲ್ಲಿನ ಮಾದರಿ ಹೆಚ್‌ಐವಿ ರಕ್ತ ಬಳಕೆ
ಆಸ್ಪತ್ರೆಯಲ್ಲಿ ರೋಗಿಗಳು ನೀಡಿದ ಹೆಚ್ಐವಿ ರಕ್ತದ ಸ್ಯಾಂಪಲ್‌ನ್ನು ಎಗರಿಸಿದ ನರ್ಸ್ ವಸುಂದರ, ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಗೆಳೆಯ ಪತ್ನಿ ದೇಹಕ್ಕೆ ಇಂಜೆಕ್ಟ್ ಮಾಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ವೈದ್ಯೆಗೆ ಇದೇ ವಸುಂದರ ಹಾಗೂ ಜ್ಯೋತಿ ನೆರವು ನೀಡುವ ನೆಪದಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದ ವೈದ್ಯೆಯನ್ನು ಆಟೋ ರಿಕ್ಷಾಗೆ ಸ್ಥಳಾಂತರ ಮಾಡುವಾಗ ವಸುಂದರ ಆಸ್ಪತ್ರೆಯಿಂದ ಎಗರಿಸಿದ್ದ ಏಡ್ಸ್ ರಕ್ತವನ್ನು ವೈದ್ಯೆ ದೆಹಕ್ಕೆ ಇಂಜೆಕ್ಟ್ ಮಾಡಿದ್ದಾರೆ. ಬಳಿಕ ವಸುಂದರ ಹಾಗೂ ಜ್ಯೋತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇತರರ ನೆರವಿನಿಂದ ಆಸ್ಪತ್ರೆ ದಾಖಾಲದ ವೈದ್ಯೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಇತ್ತ ವೈದ್ಯರು ರಕ್ತ ಪರಿಶೀಲಿಸಿದಾಗ ಎಡ್ಸ್ ಇಂಜೆಕ್ಟ್ ಮಾಡಿರುವುದು ಪತ್ತೆಯಾಗಿದೆ. ಸ್ಥಳಿಂದ ಸಿರಿಂಜಿ ಹಾಗೂ ಆಸ್ಪತ್ರೆಯ ಕೋಲ್ಡ್ ಸ್ಟೋರೇಜ್‌ನಿಂದ ಹೆಚ್ಐವಿ ಸ್ಯಾಂಪಲ್ ಎಗರಿಸಿರುವುದು ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಇತ್ತ ವೈದ್ಯೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಒಂದೆಡೆ ಅಘಾತದ ಗಾಯ, ಮತ್ತೊಂದೆಡೆ ರಕ್ತದಲ್ಲಿ ಹೆಚ್ಐವಿ ಸೋಂಕು ಸೇರಿಕೊಂಡಿದ್ದು, ಇಡೀ ಕುಟುಂಬವೇ ಕಂಗಾಲಾಗಿದೆ.


