ನವದೆಹಲಿ(ಡಿ. 27) ಭಾರತೀಯ ಜನತಾ ಪಾರ್ಟಿ(ಬಿಜೆಪಿ)  ನೇತೃತ್ವದ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್‌ಗಳು ಮತ್ತು ಮಾಂಸದ ಅಂಗಡಿಗಳಿಗೆ ಆದೇಶವೊಂದನ್ನು ಹೊರಡಿಸಲು ಮುಂದಾಗಿದೆ.  ಬಳಕೆ ಮಾಡುವ ಮಾಂಸ ಹಲಾಲ್ ಅಥವಾ ಝಟ್ಕಾ ಎಂಬುದನ್ನು  ಪ್ರದರ್ಶನ ಮಾಡಬೇಕು ಎಂಬುದು ಈ ಆದೇಶದ ಒಳಸತ್ಯ,

ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದರು  ತಿಳಿಸಿಕೊಟ್ಟ ನಿಯಮಗಳ ಪ್ರಕಾರ  ಪ್ರಾಣಿವಧೆ ಮಾಡುವುದನ್ನು ಹಲಾಲ್ ಎನ್ನುತ್ತಾರೆ. ಒಂದೇ ಏಟಿನಲ್ಲಿ  ಪ್ರಾಣಿಯನ್ನು ವಧಿಸುವುದನ್ನು ಜಟ್ಕಾ ಅನ್ನುತ್ತಾರೆ

ಕೊರೋನಾ ವಾಕ್ಸಿನ್‌ಗೂ ಹಂದಿ ಮಾಂಸಕ್ಕೂ ನಂಟು!

 ಸ್ಥಾಯಿ ಸಮಿತಿ ಈ ಪ್ರಸ್ತಾಪವನ್ನು ಅನುಮೋದನೆ ಮಾಡಿದೆ. ಅಂತಿಮ ಮುದ್ರೆಗೆ ಕಳಿಸಲಾಗಿದ್ದು ದೆಹಲಿ ಕಾರ್ಪೋರೇಶನ್ ನಲ್ಲಿ ಬಿಜೆಪಿ ಬಹುಮತ ಹೊಂದಿದೆ.

ಸಿಖ್ ಮತ್ತು  ಮತ್ತು ಹಿಂದೂ ಧರ್ಮದಲ್ಲಿ ಹಲಾಲ್ ಮಾಂಸ ಸೇವನೆ ನಿಷಿದ್ಧ.  ಹಾಗಾಗಿ ರೆಸ್ಟೋರೆಂಟ್‌ಗಳು ಮತ್ತು ಮಾಂಸದ ಅಂಗಡಿಗಳು ತಮ್ಮಲ್ಲಿ ಯಾವ ವಿಧದ ಮಾಂಸ ಮಾರಾಟಕ್ಕೆ ಲಭ್ಯವಿದೆ ಎಂಬುನ್ನು ಹೇಳಬೇಕಾಗುತ್ತದೆ. 

ದಕ್ಷಿಣ ದೆಹಲಿಯ 104 ವಾರ್ಡ್‌ಗಳಲ್ಲಿ ಶೇ  90 ರೆಸ್ಟೋರೆಂಟ್ ಗಳಲ್ಲಿ  ನಷ್ಟು ಮಾಂಸ ಮಾರಾಟ ಮಾಡುತ್ತಿದ್ದರೂ ವ್ಯತ್ಯಾಸವನ್ನೂ ಎಲ್ಲಿಯೂ ಬರೆದಿಲ್ಲ.

ಸ್ಥಾಯಿ ಸಮಿತಿ ಮುಖ್ಯಸ್ಥ ರಾಜದುತ್ ಗೆಹ್ಲೋಟ್, ಹೇಳುವಂತೆ ಒಬ್ಬ ವ್ಯಕ್ತಿಯು ಝಟ್ಕಾ ಮಾಂಸವನ್ನು ಕೇಳಿದರೆ ಆತನಿಗೆ ಹಲಾಲ್ ಸಿಗುವ ಸಾಧ್ಯತೆಯೂ ಇದೆ. ಇದು ಆತನ ಧರ್ಮಕ್ಕೆ ವಿರೋಧವಾಗುತ್ತದೆ ಎನ್ನುತ್ತಾರೆ.