ಗಣರಾಜ್ಯೋತ್ಸವ: ರಾಮ ಮಂದಿರ ಸ್ಥಬ್ಧಚಿತ್ರ ಪ್ರದರ್ಶನದ ವೇಳೆ ಭಕ್ತಿಯಿಂದ ಎದ್ದು ನಿಂತ ಜನ!

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ವಿಜಯನಗರ ಕಲಾ ಸಂಸ್ಕೃತಿ ಶ್ರೀಮಂತಿಕೆಯ ಟ್ಯಾಬ್ಲೋ ಸೇರಿದಂತೆ ಆಯಾ ದೇಶಗಳ ಸ್ಥಬ್ಧಚಿತ್ರ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಆದರೆ ಈ ಸ್ಥಬ್ಧ ಚಿತ್ರ ಪ್ರದರ್ಶನದ ವೇಳೆ ರಾಮ ಮಂದಿರ ಟ್ಯಾಬ್ಲೋ ಎಲ್ಲರನ್ನು ಆಕರ್ಷಿಸಿತ್ತು. 

Republics day many among spectators including ministers stand and applaud Ram Mandir tableau ckm

ನವ ದೆಹಲಿ(ಜ.26):ಉಪವಾಸ, ಪೈಸೆ ಪೈಸೆ ಕೂಡಿಟ್ಟ ಘಟನೆ, ಕಾಲ್ನಡಿಗೆ, ಕಾರಸೇಕರಿಗೆ ನೆರವು ಸೇರಿದಂತೆ ದೇಶದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಕೋಟ್ಯಾಂತರ ಜನರು ಭಕ್ತಿಯಿಂದ ತಮ್ಮನ್ನು ತಾವು ಸರ್ಪಪಿಸಿಕೊಂಡಿದ್ದಾರೆ. ಭಾರತೀಯರಿಗೆ ಶ್ರೀ ರಾಮ ಹೆಸರಿನಲ್ಲಿ ಆ ಶಕ್ತಿ ಹಾಗೂ ಭಕ್ತಿ ಇದೆ. ಇದಕ್ಕೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶ್ರೀ ರಾಮ ಮಂದಿರ ಸ್ಥಬ್ಧಚಿತ್ರ ಪ್ರದರ್ಶನವೇ ಸಾಕ್ಷಿ.

ಈ ಸಲದ ಗಣರಾಜ್ಯೋತ್ಸವದ ಪ್ರಥಮಗಳು..!..

ಶ್ರೀ ರಾಮನ ಮೇಲೆ ಭಾರತೀಯರಿಗಿರುವ ಭಕ್ತಿ, ನಂಬಿಕೆ ಅಳೆಯಲು ಸಾಧ್ಯವಿಲ್ಲ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ರಾಮ ಮಂದಿರ ಟ್ಯಾಬ್ಲೋ ಪ್ರದರ್ಶಿಸಿತ್ತು. ಶ್ರೀ ರಾಮ ಮಂದಿರ ಸ್ಥಬ್ಧಚಿತ್ರ ಹಾದು ಹೋಗುತ್ತಿದ್ದಂತೆ, ಬಹುತೇಕರು ಭಕ್ತಿಯಿಂದ ಎದ್ದು ನಿಂತು ನಮನ ಸಲ್ಲಿಸಿದ್ದಾರೆ.

 

ಪ್ರೇಕ್ಷಕ ಗಣ, ರಾಜಕಾರಣಿಗಳು ಮಂತ್ರಿಗಳು ಎದ್ದುನಿಂತು ಗೌರವ ಸೂಚಿಸಿದ್ದಾರೆ. ಇದು ಶ್ರೀ ರಾಮನ ಮೇಲಿರುವ ಭಾರತೀಯರ ನಂಬಿಕೆಯಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ್ದರು. ಇದೀಗ ದೇಶದೆಲ್ಲೆಡೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭವಾಗಿದೆ.

Latest Videos
Follow Us:
Download App:
  • android
  • ios