Asianet Suvarna News Asianet Suvarna News

ಬೀಟಿಂಗ್‌ ರೀಟ್ರೀಟ್‌: ವಂದೇ ಮಾತರಂ ಹಾಡಿನೊಂದಿಗೆ ಮುಕ್ತಾಯ?

ಈ ಬಾರಿ ವಂದೇ ಮಾತರಂ ಹಾಡಿನೊಂದಿಗೆ ಬೀಟಿಂಗ್‌ ರೀಟ್ರೀಟ್‌ ಮುಕ್ತಾಯ?|  ಮಹಾತ್ಮ ಗಾಂಧೀಜಿಗೆ ಇಷ್ಟವಾದ ‘ಅಬೈಟ್‌ ವಿತ್‌ ಮಿ’ ಎಂಬ ಹಾಡಿನೊಂದಿಗೆ ಮುಕ್ತಾಯವಾಗುತ್ತಿತ್ತು

Republic Day Beating Retreat Likely To End With Vande Mataram This Year
Author
Bangalore, First Published Jan 14, 2020, 8:59 AM IST

ನವದೆಹಲಿ[ಜ.14]: ಜ.29ರಂದು ವಿಜಯ್‌ ಚೌಕ್‌ನಲ್ಲಿ ನಡೆಯಲಿರುವ ಬೀಟಿಂಗ್‌ ರೀಟ್ರೀಟ್‌ (ಗಣರಾಜ್ಯೋತ್ಸವಕ್ಕೆ ಆಗಮಿಸಿದ ಸೇನಾ ಪಡೆಗಳಿಗೆ ಬೀಳ್ಕೊಡುಗೆ) ಸಮಾರಂಭವನ್ನು ಈ ಬಾರಿ ‘ವಂದೇ ಮಾತರಂ’ ಗೀತೆಯೊಂದಿಗೆ ಮುಕ್ತಾಯಗೊಳಿಸುವ ಸಾಧ್ಯತೆ ಇದೆ.

#WelcomeHomeAbhinandan ತಾಯ್ನೆಲಕ್ಕೆ ಮರಳಿದ ವೀರಪುತ್ರ

ಸಾಮಾನ್ಯವಾಗಿ ಮಹಾತ್ಮ ಗಾಂಧೀಜಿಗೆ ಇಷ್ಟವಾದ ‘ಅಬೈಟ್‌ ವಿತ್‌ ಮಿ’ ಎಂಬ ಇಂಗ್ಲಿಷ್‌ ಹಾಡಿನೊಂದಿಗೆ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಗುತ್ತಿತ್ತು. ಕಳೆದ ವರ್ಷದ ಸಮಾರಂಭದಲ್ಲಿ ಕೇವಲ ಪಾಶ್ಚಾತ್ಯ ಸಂಗೀತ ನುಡಿಸಲಾಗಿತ್ತು.

ಹೀಗಾಗಿ ಈ ಬಾರಿ ದೇಶೀಯ ಸೊಗಡು ಮತ್ತು ದೇಶಭಕ್ತಿಯ ಭಾವನೆ ಮೂಡಿಸಲು ಸಮಾರಂಭವನ್ನು ವಂದೇ ಮಾತರಂ ಹಾಡಿನೊಂದಿಗೆ ಮುಕ್ತಾಯ ಮಾಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭಿನಂದನ್ ಹಸ್ತಾಂತರ ವಿಳಂಬ: ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಭಾರತ!

Follow Us:
Download App:
  • android
  • ios