2030ರ ವೇಳೆಗೆ ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಲು ಮತ್ತು ನವೀಕರಿಸಬಹುದಾದ ಮೂಲಗಳಿಂದ ಶೇ.50ರಷ್ಟು ಇಂಧನ ಅಗತ್ಯವನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. 

ಜೈಪುರ (ಜ.22): 2030ರ ವೇಳೆಗೆ ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಲು ಮತ್ತು ನವೀಕರಿಸಬಹುದಾದ ಮೂಲಗಳಿಂದ ಶೇ.50ರಷ್ಟು ಇಂಧನ ಅಗತ್ಯವನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮಂಗಳವಾರ ಇಲ್ಲಿ ನಡೆದ ನವೀಕರಿಸಬಹುದಾದ ಇಂಧನದ ಪ್ರಾದೇಶಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, . ಈ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ವೇಗವಾಗಿ ಕೆಲಸ ಮಾಡುತ್ತಿವೆ. 2032ರ ವೇಳೆಗೆ ದೇಶದ ಇಂಧನ ಅಗತ್ಯವು ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂದರು.

’10 ವರ್ಷಗಳ ಹಿಂದೆ ಭಾರತವು ವಿಶ್ವದ 11ನೇ ಆರ್ಥಿಕತೆಯಾಗಿತ್ತು. ಅತ್ಯಂತ ವೇಗದಲ್ಲಿ ಪ್ರಗತಿ ಹೊಂದುತ್ತಿರುವ ದೇಶವು ಇಂದು 5 ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಮತ್ತು 3ನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಶಕ್ತಿಯ ಸ್ವಾವಲಂಬನೆಯತ್ತ ವೇಗವಾಗಿ ಕೆಲಸ ಮಾಡಲಾಗುತ್ತಿದೆ ಇದರಿಂದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳು ಮುಂದುವರಿಯಬಹುದು’ ಎಂದು ಹೇಳಿದರು. ಈ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಹಾಜರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ಸಲ್ಲದು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಅಲಿಮ್ಕೋ ಸಂಸ್ಥೆಯ ಶಾಖೆ ಪ್ರಾರಂಭ: ಅಂಗವಿಕಲರ ಏಳ್ಗೆಗಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲಿಮ್ಕೋ ಸಂಸ್ಥೆಯ ಶಾಖೆಯನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ (ಕಿಮ್ಸ್‌) ಆರಂಭಿಸಿದ್ದು, ಅರ್ಹ ಅಂಗವಿಕಲರು ಈ ಸಂಸ್ಥೆಯ ಲಾಭ ಪಡೆಯಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು. ನಗರದ ಜೆಎಸ್​ಎಸ್​ ಕಾಲೇಜಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ಅಡಿಪ್​ ಯೋಜನೆ ಅಡಿ ದಿವ್ಯಾಂಗ ಜನರಿಗೆ ರಾಷ್ಟ್ರೀಯ ವಯೋಶ್ರಿ ಯೋಜನೆ ಅಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ-ಸಲಕರಣೆ ವಿತರಿಸಿದರು.

ಈ ಸಂಸ್ಥೆಯು ಅನುದಾನದ ಕೊರತೆಯಿಂದ ಬಂದಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಬಳಿಕ ಈ ಸಂಸ್ಥೆಗೆ ಅನುದಾನದ ಬಲ ತುಂಬಿದ್ದು, ಅಂಗವಿಕಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಈ ಸಂಸ್ಥೆಯ ಮೂಲಕ ದೇಶಾದ್ಯಂತ ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಿಸಲಾಗುತ್ತಿದೆ. ಇದೀಗ ಈ ಸಂಸ್ಥೆಯ ಶಾಖೆಯನ್ನು ಕೆಎಂಸಿಆರ್‌ಐನಲ್ಲಿಯೇ ಶುರು ಮಾಡಿದ್ದು, ಯೋಜನೆಯಿಂದ ಕೈ ತಪ್ಪಿ ಹೋಗಿರುವ ಅರ್ಹ ಅಂಗವಿಕಲರು ಈ ಸಂಸ್ಥೆಯನ್ನು ಸಂಪರ್ಕಿಸಿ ತಮಗೆ ಅನುಕೂಲ ಸಾಧನ ಪಡೆದುಕೊಳ್ಳಬಹುದು ಎಂದರು.

ಭಾರತೀಯ ಸಂಸ್ಕೃತಿ, ಸಂಪ್ರದಾಯ ಉಳಿಸುವ ಕಾರ್ಯವಾಗಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಶೇ. 40ಕ್ಕೆ ಪ್ರಮಾಣ ಇಳಿಕೆ: ಈ ಶಿಬಿರದ ಮೂಲಕ ₹ 1.36 ಕೋಟಿ ಮೌಲ್ಯದ ವಿವಿಧ ಸಕಲಕರಣೆಗಳನ್ನು 1627 ಜನರಿಗೆ ವಿತರಿಸಲಾಗುತ್ತಿದೆ. ಈ ಮೊದಲು ಶೇ. 70ರಷ್ಟು ಅಂಗವಿಕಲತೆ ಹೊಂದಿರುವವರಿಗೆ ಪರಿಕರ ನೀಡಲಾಗುತ್ತಿತ್ತು. ಇದೀಗ ಮೋದಿ ಅವರು ಆ ಪ್ರಮಾಣವನ್ನು ಶೇ. 40ಕ್ಕೆ ಇಳಿಸಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ. ಅಂಗವಿಕಲರು ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಅಗತ್ಯ ಸಹಾಯಕ ಉಪಕರಣವನ್ನು ಉಚಿತವಾಗಿ ಇಲ್ಲೇ ಪಡೆಯಬಹುದು ಎಂದರು.