Asianet Suvarna News Asianet Suvarna News

1 ವಾರ​ದಲ್ಲಿ ಅಶ್ಲೀಲ ವಿಡಿ​ಯೋ​ ತೆಗೆ​ದು​ಹಾ​ಕಿ: ಟ್ವೀಟ​ರ್‌ಗೆ ಮಹಿಳಾ ಆಯೋ​ಗ ಸೂಚನೆ!

* ಎಲ್ಲಾ ಅಶ್ಲೀಲ ಮತ್ತು ಅಸಭ್ಯ ವಿಚಾ​ರ​ಗ​ಳನ್ನು ಒಳ​ಗೊಂಡಿ​ರುವ ವಿಷ​ಯ​ಗ​ಳನ್ನು 1 ವಾರ​ದಲ್ಲಿ ತೆಗೆದು ಹಾಕಿ

* ಟ್ವೀಟರ್‌ ಇಂಡಿ​ಯಾದ ವ್ಯವ​ಸ್ಥಾ​ಪಕ ನಿರ್ದೇ​ಶ​ಕ​ರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ 

 * 10 ದಿನ​ಗಳ ಒಳ​ಗಾಗಿ ಮಾಹಿತಿ ಸಲ್ಲಿ​ಸು​ವಂತೆಯೂ ಸೂಚನೆ

Remove All Pornographic Obscene Content In 1 Week NCW To Twitter pod
Author
Bangalore, First Published Jul 1, 2021, 10:58 AM IST | Last Updated Jul 1, 2021, 10:58 AM IST

 

ನವ​ದೆ​ಹ​ಲಿ(ಜು.01): ಟ್ವೀಟರ್‌ ವೇದಿ​ಕೆ​ಯ​ಲ್ಲಿ​ರುವ ಎಲ್ಲಾ ಅಶ್ಲೀಲ ಮತ್ತು ಅಸಭ್ಯ ವಿಚಾ​ರ​ಗ​ಳನ್ನು ಒಳ​ಗೊಂಡಿ​ರುವ ವಿಷ​ಯ​ಗ​ಳನ್ನು ಮುಂದಿನ ಒಂದು ವಾರ​ದಲ್ಲಿ ತೆಗೆ​ದು ಹಾಕು​ವಂತೆ ಟ್ವೀಟರ್‌ ಇಂಡಿ​ಯಾದ ವ್ಯವ​ಸ್ಥಾ​ಪಕ ನಿರ್ದೇ​ಶ​ಕ​ರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ.

ಲ್ಲದೆ ಈ ಕುರಿ​ತಾಗಿ ಟ್ವೀಟರ್‌ ಕೈಗೊಂಡಿ​ರುವ ಕ್ರಮದ ಬಗ್ಗೆ 10 ದಿನ​ಗಳ ಒಳ​ಗಾಗಿ ಮಾಹಿತಿ ಸಲ್ಲಿ​ಸು​ವಂತೆಯೂ ಸೂಚಿ​ಸಿದೆ. ಜೊತೆಗೆ ಈ ಸಂಬಂಧ ತನಿ​ಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊ​ಳ್ಳು​ವಂತೆ ದೆಹಲಿ ಪೊಲೀಸ್‌ ಆಯು​ಕ್ತ​ರಿಗೆ ರಾಷ್ಟ್ರೀಯ ಮಹಿಳಾ ಆಯೋ​ಗದ ಅಧ್ಯಕ್ಷೆ ರೇಖಾ ಶರ್ಮಾ ಪತ್ರ ಮುಖೇನ ಕೋರಿದ್ದಾರೆ.

ಮತ್ತೊಂದೆಡೆ ಟ್ವೀಟರ್‌ ವೇದಿ​ಕೆ​ಯಲ್ಲಿ ಮಕ್ಕಳ ಅಶ್ಲೀಲ ಅಂಶ​ಗ​ಳನ್ನು ಪ್ರಸಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ವಿವರ ನೀಡು​ವಂತೆ ಟ್ವೀಟರ್‌ ಇಂಡಿ​ಯಾಗೆ ದೆಹಲಿ ಪೊಲೀ​ಸರು ಸಹ ಪ್ರತ್ಯೇಕ ನೋಟಿಸ್‌ ನೀಡಿ​ದ್ದಾರೆ. ಈ ಕುರತು ಮಂಗಳವಾರವೇ ಎಫ್‌ಐಆರ್‌ ದಾಖಲಾಗಿತ್ತು.

Latest Videos
Follow Us:
Download App:
  • android
  • ios