ದೇಶದಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್| ರೆಮ್‌ಡಿಸಿವಿರ್‌ ಬೆಲೆ ಭಾರೀ ಪ್ರಮಾಣ ಇಳಿಕೆ!

ನವದೆಹಲಿ: ದೇಶದಲ್ಲಿ ಕೊರೋನಾ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಬೆಲೆಯನ್ನು ಹಲವು ಔಷದ ತಯಾರಿಕಾ ಕಂಪನಿಗಳು ತಗ್ಗಿಸಿವೆ. ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್‌ಪಿಪಿಎ)ಗಳ ಮಧ್ಯಪ್ರವೇಶದ ಬಳಿಕ ಶನಿವಾರ ಕ್ಯಾಡಿಲಾ ಹೆಲ್ತ್‌ಕೇರ್‌, ಡಾ

ರೆಡ್ಡೀಸ್‌ ಲ್ಯಾಬೋರೇಟರಿ, ಸಿಪ್ಲಾ ಮತ್ತಿತರ ಕಂಪನಿಗಳು ಬೆಲೆ ತಗ್ಗಿಸುವ ನಿರ್ಧಾರ ತೆಗೆದುಕೊಂಡಿವೆ. ಈ ನಿರ್ಧಾರವನ್ನು ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ, ಡಿ.ವಿ.ಸದಾನಂದ ಗೌಡ ಮತ್ತಿತರರು ಸ್ವಾಗತಿಸಿದ್ದಾರೆ.

ಕಂಪನಿ| ಹಿಂದಿನ ಬೆಲೆ| ಪರಿಷ್ಕೃತ ಬೆಲೆ

1.ಕ್ಯಾಡಿಲಾ ಹೆಲ್ತ್‌ಕೇರ್‌ 2800| 899

2.ಸಿಂಜಿನ್‌ ಇಂಟರ್‌ನ್ಯಾಷನಲ್‌ 3950| 2450

3.ರೆಡ್ಡೀಸ್‌ ಲ್ಯಾಬೋರೇಟರಿ 5400| 2700

4.ಸಿಪ್ಲಾ 4000| 3400

5.ಮೈಲಾನ್‌ 4800| 3400

6.ಜುಬ್ಲಿಲ್ಯಾಂಟ್‌ 4700| 3400

7.ಹೆಟೆರೋ ಹೆಲ್ತ್‌ಕೇರ್‌ 5400| 3490