ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆ: ಅಮೆರಿಕದ ವರದಿ
ಗೋಹತ್ಯೆ, ಮತಾಂತರ, ಹಿಜಾಬ್‌ಗೆ ನಿಷೇಧ ಹೇರುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಗಂಭೀರ ಪ್ರಮಾಣದಲ್ಲಿ ಉಲ್ಲಂಘಿಸಲಾಗಿದೆ ಎಂದು ಅಮೆರಿಕದ ಆಯೋಗವೊಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ವಾಷಿಂಗ್ಟನ್: ಗೋಹತ್ಯೆ, ಮತಾಂತರ, ಹಿಜಾಬ್‌ಗೆ ನಿಷೇಧ ಹೇರುವಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಗಂಭೀರ ಪ್ರಮಾಣದಲ್ಲಿ ಉಲ್ಲಂಘಿಸಲಾಗಿದೆ. ಹೀಗಾಗಿ ಭಾರತದ ಸರ್ಕಾರಿ ಸಂಸ್ಥೆಗಳ ಮೇಲೆ ನಿರ್ದಿಷ್ಟ ದಿಗ್ಬಂಧನಗಳನ್ನು ಹೇರಿ, ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅಮೆರಿಕದ ಆಯೋಗವೊಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್‌ಸಿಐಆರ್‌ಎಫ್)ವು ಈ ವರದಿಯನ್ನು ಸಂಸತ್ತಿಗೆ ಕಳುಹಿಸಿದ್ದು, ಮುಂಬರುವ ಭಾರತ- ಅಮೆರಿಕ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ವರದಿಯಲ್ಲಿನ ವಿಚಾರವನ್ನು ಪ್ರಸ್ತಾಪಿಸಬೇಕು ಎಂದು ಸೂಚನೆ ನೀಡಿದೆ.
ಡ್ರೆಸ್ಸಿಂಗ್ ರೂಮ್‌ಗೆ ಕರೆದು ಲೇಖಕಿ ಮೇಲೆ ಟ್ರಂಪ್ ಅತ್ಯಾಚಾರ: ಕೋರ್ಟ್ ಮುಂದೆ ಘಟನೆ ವಿವರಿಸಿದ ಸಂತ್ರಸ್ತೆ
ಅಂದಹಾಗೆ, ಯುಎಸ್‌ಸಿಐಆರ್‌ಎಫ್ ಇದೇ ರೀತಿಯ ಶಿಫಾರಸುಗಳನ್ನು 2020ರಿಂದಲೂ ಅಮೆರಿಕ ಸರ್ಕಾರಕ್ಕೆ ಸಲ್ಲಿಸುತ್ತಲೇ ಬಂದಿದೆ. ಆದರೆ ಯಾವುದೇ ಶಿಫಾರಸು ಕೂಡ ಅಂಗೀಕಾರವಾಗಿಲ್ಲ. ಹಾಗೆಯೇ ಈ ವರದಿಗಳನ್ನು ಒಪ್ಪಿಕೊಳ್ಳಬೇಕು ಎಂಬ ಬಾಧ್ಯತೆಯೂ ಸರ್ಕಾರಕ್ಕೆ ಇಲ್ಲ. ಈ ಹಿಂದೆ ಕೂಡ ಯುಎಸ್‌ಸಿಐಆರ್‌ಎಫ್‌ನ ವರದಿಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
ಯುಎಸ್‌ಸಿಐಆರ್‌ಎಫ್ ವರದಿಗೆ ಅಮೆರಿಕ ಮೂಲದ ಸ್ವಯಂ ಸೇವಾ ಸಂಘಟನೆಯಾಗಿರುವ ಭಾರತೀಯ ಹಾಗೂ ಭಾರತೀಯರ ಅಧ್ಯಯನ ಪ್ರತಿಷ್ಠಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಪಕ್ಷಪಾತದಿಂದ ಕೂಡಿದ ವರದಿಯಾಗಿದೆ ಎಂದು ಹೇಳಿದೆ.
ಅಮೆರಿಕಾ ಅಧ್ಯಕ್ಷರ ಭಧ್ರತಾ ವೈಫಲ್ಯ: ಕಂಬಿ ಸೆರೆಯಲ್ಲಿ ನುಗ್ಗಿ ಶ್ವೇತಭವನ ಪ್ರವೇಶಿಸಿದ ಪುಟಾಣಿ