ಅಮೆರಿಕಾ ಅಧ್ಯಕ್ಷರ ಭಧ್ರತಾ ವೈಫಲ್ಯ: ಕಂಬಿ ಸೆರೆಯಲ್ಲಿ ನುಗ್ಗಿ ಶ್ವೇತಭವನ ಪ್ರವೇಶಿಸಿದ ಪುಟಾಣಿ
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಭದ್ರತೆಯಲ್ಲಿ ಲೋಪವಾಗಿದೆ., ಭದ್ರತಾ ಪ್ರದೇಶವನ್ನು ಬೇಧಿಸಿ ಒಳನುಗ್ಗಿದ್ದ ಪುಟಾಣಿಯನ್ನು ಅಮೆರಿಕಾದ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಭದ್ರತೆಯಲ್ಲಿ ಲೋಪವಾಗಿದೆ., ಭದ್ರತಾ ಪ್ರದೇಶವನ್ನು ಬೇಧಿಸಿ ಒಳನುಗ್ಗಿದ್ದ ಪುಟಾಣಿಯನ್ನು ಅಮೆರಿಕಾದ ಸಿಕ್ರೇಟ್ ಸರ್ವೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕೈಕಾಲು ಹುಟ್ಟಿದ್ದ ಅಥವಾ ಹರಿದಾಡಲು ಆರಂಭಿಸಿದ ಮಕ್ಕಳು ನಿಂತಲ್ಲಿ ನಿಲ್ಲುವುದಿಲ್ಲ. ಪೋಷಕರು ಒಂದು ಕ್ಷಣ ಕಣ್ತಪ್ಪಿದರು ಅಲ್ಲಿ ಏನಾದರೊಂದು ಅನಾಹುತ ಗ್ಯಾರಂಟಿ, ಅಂಬೆಗಾಲಿಡುತ್ತಲೇ ಮಕ್ಕಳು ಕಣ್ಚುಚ್ಚಿ ಬಿಡುವಷ್ಟರಲ್ಲಿ ಇನ್ನೆಲ್ಲೋ ಇರುತ್ತಾರೆ. ಹೊಸದನ್ನು ಕಲಿತ ಖುಷಿ ಮಕ್ಕಳಲ್ಲಾದರೆ ಪೋಷಕರಿಗೆ ಎಲ್ಲಿ ಹೋಗಿ ಏನು ಮಾಡಿಕೊಳ್ಳುತ್ತಾರೋ ಎಂಬ ಭಯ ಇದೇ ಕಾರಣಕ್ಕೆ ಅಂಬೆಗಾಲಿಡುವ ಮಕ್ಕಳ ಜೊತೆ ಜೊತೆಯೇ ಪೋಷಕರು ಇರುತ್ತಾರೆ. ಹಾಗೆಯೇ ಈಗ ಅಮೆರಿಕಾದಲ್ಲಿ ಮಗುವೊಂದರ ಹರಿದಾಟದ ಕಾರಣಕ್ಕೆ ಅಧ್ಯಕ್ಷರ ಭದ್ರತೆಯಲ್ಲಿ ಲೋಪವಾಗಿದೆ.
ಹೌದು ಅಚ್ಚರಿ ಎನಿಸಿದರು ಇದು ಸತ್ಯ, ಮಗುವೊಂದು ಅಂಬೆಗಾಲಿಡುತ್ತಲೇ. ಕಬ್ಬಿಣದ ಸರಳುಗಳ ನಡುವೆ ನುಗ್ಗಿಕೊಂಡು ಸೀದಾ ಅಮೆರಿಕಾ ಅಧ್ಯಕ್ಷರಿದ್ದ ಶ್ವೇತಭವನದತ್ತ ಹೋಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅಲ್ಲಿನ ರಹಸ್ಯ ಸೇವೆಯ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು ಪೋಷಕರಿಗೆ ನೀಡಿದ್ದಾರೆ. ಅಮೆರಿಕಾದ ಶ್ವೇತಭವನದ ಉತ್ತರ ಭಾಗದ ಲಾನ್‌ನಲ್ಲಿ ಈ ಘಟನೆ ನಡೆದಿದೆ.
ಜೂನ್‌ನಲ್ಲಿ ಅಮೆರಿಕಕ್ಕೆ ಮೋದಿ ಮೊದಲ ಅಧಿಕೃತ ಭೇಟಿ..! ಪ್ರಧಾನಿ ಮೋದಿಗೆ ಅಮೆರಿಕದ ವಿಶೇಷ ಗೌರವ
ಈ ಘಟನೆ ನಡೆಯುವ ವೇಳೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಶ್ವೇತಭವನದಲ್ಲೇ ಇದ್ದರು ಎಂದು ಬಿಬಿಸಿ ವರದಿ ಮಾಡಿದೆ. ಮಗು ಶ್ವೇತಭವನದ ಹೊರಭಾಗದಲ್ಲಿರುವ ಕಬ್ಬಿಣದ ಬೇಲಿಗೆ ಹಾಕಿದ್ದ ಸರಳುಗಳ ನಡುವೆ ನುಗ್ಗಿಕೊಂಡು ಶ್ವೇತಭವನದ ಆವರಣ ತಲುಪಿದೆ. ಕೂಡಲೇ ಶ್ವೇತ ಭವನದ ಅಧಿಕಾರಿಗಳು ಜಾಗೃತರಾಗಿದ್ದು, ಮಗುವನ್ನು ವಶಕ್ಕೆ ಪಡೆದು ಪೆನ್ಸಿಲ್ವೇನಿಯಾದಲ್ಲಿರುವ ಅವರ ಪೋಷಕರಿಗೆ ನೀಡಿದ್ದಾರೆ. ನಂತರ ಪೋಷಕರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶ್ವೇತ ಭವನದ ವಕ್ತಾರ ಅಂಥೋನಿ ಗುಗ್ಲೆಯೆಲ್ಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಒಬ್ಬ ಕುತೂಹಲಿಗ ಯಂಗ್ ವಿಸಿಟರ್ ಓರ್ವ ವೈಟ್ ಹೌಸ್‌ನ ಉತ್ತರ ಭಾಗದಲ್ಲಿ ಅಳವಡಿಸಲಾಗಿದ್ದ ಬೇಲಿಯ ಸರಳುಗಳ ನಡುವೆ ನುಗ್ಗಿ ಶ್ವೇತಭವನದ ಆವರಣ ಪ್ರವೇಶಿಸಿದ್ದ. ಈ ವೇಳೆ ವೈಟ್ ಹೌಸ್ ಭದ್ರತಾ ವ್ಯವಸ್ಥೆಯೂ ಕೂಡಲೇ ಅಲ್ಲಿನ ರಹಸ್ಯ ಸೇವೆಯ ಅಧಿಕಾರಿಗಳಿಗೆ ಈ ಬಗ್ಗೆ ಸಂದೇಶ ಕಳುಹಿಸಿತು. ನಂತರ ಕೂಡಲೇ ಮಗುವನ್ನು ವಶಕ್ಕೆ ಪಡೆದು ಅದರ ಪೋಷಕರ ಸುಪರ್ದಿಗೆ ನೀಡಲಾಯಿತು ಎಂದು ಹೇಳಿದರು.
ಭಾರತ ಅಮೆರಿಕಾಗೆ ಕೇವಲ ಮಿತ್ರನಲ್ಲ, ಬದಲಿಗೆ ಪ್ರಬಲ ಶಕ್ತಿ: ಶ್ವೇತ ಭವನ
ಸುದ್ದಿ ಸಂಸ್ಥೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಶ್ವೇತಭವನದ ಬೇಲಿಯನ್ನು ಸುಮಾರು 13 ಅಡಿ (3.96 ಮೀಟರ್) ಎತ್ತರಕ್ಕೆ ದ್ವಿಗುಣಗೊಳಿಸಲಾಗಿತ್ತು. ಎತ್ತರದ ಜೊತೆ ಸರಳುಗಳ ನಡುವಿನ ಅಂತರವನ್ನು ಕೂಡ ಹೆಚ್ಚಿಸಲಾಗಿತ್ತು. ಇದಾದ ಬಳಿಕ ಹೀಗೆ ಮಗುವೊಂದು ಸರಳುಗಳ ಮಧ್ಯೆ ನುಗ್ಗಿ ಶ್ವೇತಭವನದ ಆವರಣ ಪ್ರವೇಶಿಸಿದ ಮೊದಲ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಸುಮಾರು 10 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಸರಳುಗಳ ಮಧ್ಯೆ ಮಗುವೊಂದು ನುಗ್ಗಿ ಶ್ವೇತಭವನದ ಆವರಣ ಪ್ರವೇಶಿಸಿತ್ತು.