ಡ್ರೆಸ್ಸಿಂಗ್ ರೂಮ್‌ಗೆ ಕರೆದು ಲೇಖಕಿ ಮೇಲೆ ಟ್ರಂಪ್ ಅತ್ಯಾಚಾರ: ಕೋರ್ಟ್ ಮುಂದೆ ಘಟನೆ ವಿವರಿಸಿದ ಸಂತ್ರಸ್ತೆ
ಅಮೆರಿಕಾ ಅಧ್ಯಕ್ಷನಾಗಿದ್ದ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದ ಅಮೆರಿಕಾದ ಲೇಖಕಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.
ನ್ಯೂಯಾರ್ಕ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದ ಅಮೆರಿಕಾದ ಲೇಖಕಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ. ಅಮೆರಿಕನ್ ಲೇಖಕಿ, ಪತ್ರಕರ್ತೆ ಹಾಗೂ ಇಲ್ಲೆ ಮ್ಯಾಗಝೀನ್‌ನ ಅಡ್ವೈಸ್ ಕಾಲಂ ಬರೆಯುತ್ತಿದ್ದ ಜೇನ್ ಕರೋಲ್ ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದು, ಡೋನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದೇ ಕಾರಣಕ್ಕೆ ನಾನಿಲ್ಲಿಗೆ ಬರುವಂತಾಗಿದೆ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ನ್ಯೂಯಾರ್ಕ್‌ನ ಲೇಖಕಿಯಾಗಿರುವ ಜೇನ್ ಕರೋಲ್, 1990ರಲ್ಲಿ ಡೊನಾಲ್ಡ್ ಟ್ರಂಪ್, ನನ್ನ ಮೇಲೆ ಬರ್ಗ್‌ಡಾರ್ಫ್ ಗುಡ್ಮನ್‌ಗೆ ಸೇರಿದ ಡ್ರೆಸ್ಸಿಂಗ್ ರೂಮ್‌ನಲ್ಲಿ (Bergdorf Goodman dressing room) ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದರು. ಈ ಆರೋಪ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಅವರು ಗ್ರಾಫಿಕ್ ಡಿಟೇಲ್‌ಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಬೆಳದಿಂಗಳ ಬಾಲೆಯರ ಜೊತೆ ಸೆಕ್ಸ್, ಟ್ರಂಪ್ ರಾಜಕೀಯ ಜೀವನವೀಗ ರಿಸ್ಕ್!
ಮೂರು ದಶಕಗಳ ಹಿಂದೆ ನಡೆದ ಈ ಪ್ರಕರಣವನ್ನು ಇಷ್ಟು ದಿನ ಮುಚ್ಚಿಟ್ಟಿದ್ದ ಬಗ್ಗೆ ಪ್ರತಿಕ್ರಿಯಿಸಿದ ಆಕೆ, ಒಂದು ವೇಳೆ ಈ ಬಗ್ಗೆ ಬಾಯ್ಬಿಟ್ಟಲ್ಲಿ ಟ್ರಂಪ್ ನನ್ನ ಬದುಕನ್ನು ಸರ್ವನಾಶ ಗೊಳಿಸುತ್ತಾರೆ ಎಂಬ ಭಯವಿತ್ತು ಎಂದು ಮ್ಯಾನ್‌ಹಟನ್ ಫೆಡರಲ್ ಕೋರ್ಟ್ (Manhattan federal court) ಮುಂದೆ ಹೇಳಿದ್ದಾರೆ. ದಾಖಲೆಯನ್ನು ನೇರವಾಗಿ ಹೊಂದಿಸುವ ಸಲುವಾಗಿ ಅವರು ಮೊಕದ್ದಮೆ ಹೂಡಿದ್ದ ಹಿನ್ನೆಲೆಯಲ್ಲಿ ಅವರು ಕೋರ್ಟ್‌ಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ.
ನಾನು ಇಲ್ಲಿದ್ದೇನೆ ಏಕೆಂದರೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ರೇಪ್ ಮಾಡಿದ್ದಾನೆ. ನಾನು ಈ ಬಗ್ಗೆ ಬರೆದುಕೊಂಡಾಗ ಆತ ಇದು ನಡೆದಿಲ್ಲ ಎಂದು ಹೇಳಿದ, ನನ್ನ ಘನತೆಯನ್ನು ಹಾಳು ಮಾಡಿದ್ದ ನಾನು ನನ್ನ ಬದುಕನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು 79 ವರ್ಷದ ಕರೋಲ್ ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
ಆರು ಪುರುಷರು ಹಾಗೂ ಮೂವರು ಮಹಿಳೆಯರಿರುವ ನ್ಯಾಯಪೀಠವೂ 76 ವರ್ಷದ ಟ್ರಂಪ್ ನಿಜವಾಗಿಯೂ ಎರಡು ದಶಕಗಳ ಹಿಂದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ. ಕಳೆದ ವರ್ಷ ಲೇಖಕಿ ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದಾಗ ಟ್ರಂಪ್ ಈ ಆರೋಪವನ್ನು ನಿರಾಕರಿಸಿದ್ದರು. ಆಕೆಯ ಪುಸ್ತಕ ಮಾರಾಟವಾಗುವುದಕ್ಕಾಗಿ ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸುತ್ತಿದ್ದಾಳೆ. ಆಕೆಯ ಈ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಟ್ರಂಪ್ ಆರೋಪಿಸಿದ್ದರು.
ಇನ್ನು ಟ್ರಂಪ್ ಪರ ವಾದ ಮಂಡಿಸಿದ ಅವರ ಪರ ವಕೀಲರು, ಅತ್ಯಾಚಾರದ ಆರೋಪ ಮಾಡುತ್ತಿರುವ ಲೇಖಕಿ ರಾಜಕೀಯವಾಗಿ ಪ್ರೇರಿತಳಾಗಿದ್ದಾಳೆ. ಟ್ರಂಪ್ ವಿರುದ್ಧ ದೂರು ನೀಡಲು ಅನಾಮಧೇಯ ವ್ಯಕ್ತಿಗಳಿಂದ ಕುಮ್ಮಕ್ಕು ಪಡೆದಿದ್ದಾರೆ. ಈ ಪ್ರಕರಣ ನಿಜವಾಗಿದ್ದರೆ ಕಾನೂನಿನ ಮುಂದೆ ಬರಲು ಇಷ್ಟ ಸಮಯ ಕಾಯಬೇಕಿತ್ತೆ ಎಂದು ಕೇಳಿದ್ದಾರೆ.
ಐಷಾರಾಮಿ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಶಾಪಿಂಗ್ ಮಾಡುವ ವೇಳೆ ಹೇಗೆ ಘಟನೆ ನಡೆಯಿತು ಎಂದು ವಿವರಿಸುವಂತೆ ನ್ಯಾಯಾಲಯ ಲೇಖಕಿ ಕಾರೋಲ್‌ಗೆ ಕೇಳಿದ್ದು, ಈ ವೇಳೆ ಪ್ರತಿಕ್ರಿಯಿಸಿದ ಆಕೆ ಟ್ರಂಪ್ ಮಹಿಳೆಯೊಬ್ಬರಿಗೆ ಉಡುಗೊರೆ ಆಯ್ಕೆ ಮಾಡಲು ಸಹಾಯ ಮಾಡುವಂತೆ ಕೇಳಿದರು. ಅದರಂತೆ ಒಪ್ಪಿಕೊಂಡು ಶಾಪಿಂಗ್‌ಗೆ ಹೋದಾಗ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಐಷಾರಾಮಿ ಶೋ ರೂಮ್‌ನ ಆರನೇ ಮಹಡಿಯಲ್ಲಿರುವ ಒಳ ಉಡುಪುಗಳಿರುವ ವಿಭಾಗಕ್ಕೆ ಹೋಗುವಂತೆ ಟ್ರಂಪ್ ಹೇಳಿದ್ದರು. ಅಲ್ಲಿ ಲ್ಯಾಸಿ ಬಾಡಿಶೂಟ್ ನೋಡಿದ ಅವರು ಅದನ್ನು ಪ್ರಯತ್ನಿಸಲು ಹೇಳಿದ್ದಾರೆ. ಇದನ್ನು ತಮಾಷೆ ಎಂದು ಭಾವಿಸಿ ಟ್ರಂಪ್ ಪ್ಯಾಂಟ್ ಮೇಲೆ ಬಾಡಿಸೂಟ್ ಹಾಕುತ್ತಾರೆ ಎಂದು ಭಾವಿಸಿದ ಆಕೆ ಅದನ್ನು ಪ್ರಯತ್ನಿಸುವಂತೆ ಆತನಿಗೆ ಹೇಳಿದ್ದಾರೆ. ಹೀಗೆ ಟ್ರಂಪ್ ಜೊತೆ ಡ್ರೆಸ್ಸಿಂಗ್ ರೂಮ್‌ಗೆ ಹೋದಾಗ ಟ್ರಂಪ್ ಡ್ರೆಸ್ಸಿಂಗ್ ರೂಮ್‌ನ ಬಾಗಿಲು ಹಾಕಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಮ್ಮೆಲೆ ಗೊಂದಲಕ್ಕೊಳಗಾದ ನನಗೆ ಏನಾಯ್ತೋ ಅದು ಆಗಬಾರದಿತ್ತು ಎಂಬುದರ ಅರಿವಾಯ್ತು ಎಂದು 79 ವರ್ಷದ ಲೇಖಕಿ ನ್ಯಾಯಾಲಯದ ಮುಂದೆ ಹೇಳಿದ್ದಾರೆ.