ರಿಲಯನ್ಸ್ ಟೆಂಡರ್ ತಿರಸ್ಕರಿಸಿದ್ದ ಸಚಿವ ನಿತಿನ್ ಗಡ್ಕರಿ ರಸ್ತೆ ನಿರ್ಮಾಣಕ್ಕೆ 3,600 ಕೋಟಿ ರೂಪಾಯಿ ಕೇಳಿದ್ದ ರಿಲಯನ್ಸ್ 1600 ಕೋಟಿ ರೂಗೆ ಕಾಮಗಾರಿ ಪೂರ್ಣಗೊಳಿಸಿದ್ದ ಗಡ್ಕರಿ

ಮುಂಬೈ(ಡಿ.19): 1990ರಲ್ಲಿ ಮಹಾರಾಷ್ಟ್ರದಲ್ಲಿ ತಾವು ಲೋಕೋಪಯೋಗಿ ಸಚಿವರಾಗಿದ್ದಾಗ ರಿಲಯನ್ಸ್‌ ಟೆಂಡರ್‌ ಅನ್ನು ತಿರಸ್ಕರಿಸಿದ್ದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಬಹಿರಂಗಪಡಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಹೂಡಿಕೆದಾರರ ಶೃಂಗವನ್ನುದ್ದೇಶಿಸಿ ಶನಿವಾರ ಮಾತನಾಡಿದ ಗಡ್ಕರಿ ಅವರು, ‘ರಸ್ತೆ ಯೋಜನೆಗಳು ಆರ್ಥಿಕವಾಗಿ ಎಷ್ಟುಕಾರ್ಯಸಾಧು ಎಂಬ ಚಿಂತೆ ಬೇಡ. ರಸ್ತೆ ನಿರ್ಮಾಣ ಎಷ್ಟುಲಾಭದಾಯ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. 1990ರಲ್ಲಿ ನಾನು ಮಹಾರಾಷ್ಟ್ರ ಲೋಕೋಪಯೋಗಿ ಸಚಿವನಾಗಿದ್ದಾಗ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕಾಗಿ ರಿಲಯನ್ಸ್‌ ಸಲ್ಲಿಸಿದ್ದ ಟೆಂಡರ್‌ ತಿರಸ್ಕರಿಸಿದ್ದೆ. ಇದು ಧೀರುಭಾಯ್‌ ಅಂಬಾನಿಗೆ ಮಾತ್ರವಲ್ಲದೇ, ಆಗಿನ ಮಹಾ ಸಿಎಂ ಮನೋಹರ್‌ ಜೋಶಿ, ಹಲವು ಸಚಿವರ ಸಿಟ್ಟಿಗೆ ಕಾರಣವಾಗಿತ್ತು. ಜೊತೆಗೆ ಬಾಳಾ ಸಾಹೇಬ್‌ ಠಾಕ್ರೆ ಅವರೇ ಟೆಂಡರ್‌ ಏಕೆ ತಿರಸ್ಕರಿಸಿದೆ ಎಂದು ನನ್ನ ಪ್ರಶ್ನಿಸಿದ್ದರು.

ನನ್ನ ಲೆಕ್ಕಾಚಾರದಲ್ಲಿ ಟೆಂಡರ್‌ಗೆ ನಿಗದಿ ಪಡಿಸಿದ ಮೊತ್ತ ಹೆಚ್ಚಾಗಿತ್ತು. ಹೀಗಾಗಿ ಹೀಗಾಗಿ ನಮ್ಮ ಇಲಾಖೆ ಮೂಲಕ ಾರ್ವಜನಿಕರಿಂದಲೇ ಹಣ ಸಂಗ್ರಹಿಸಿ ಎಕ್ಸ್‌ಪ್ರೆಸ್‌ ಹೆದ್ದಾರಿ, ನಗರದಲ್ಲಿನ ವರ್ಲಿ-ಬಾಂದ್ರಾ ಸೀಲಿಂಕ್‌ ಮತ್ತು ಇತರೆ 52 ಮೇಲ್ಸೇತುವೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದೆ. ಇದಕ್ಕೆ ಅವರೆಲ್ಲಾ ನಕ್ಕಿದ್ದರು. ಜತೆಗೆ ರಿಲಯನ್ಸ್‌ ಎಕ್ಸ್‌ಪ್ರೆಸ್‌ ಹೆದ್ದಾರಿಗೆ 3600 ಕೋಟಿ ರು. ಬೇಡಿಕೆ ಇಟ್ಟಿತ್ತು. ಆದರೆ ಸರ್ಕಾರಿ ಸ್ವಾಮ್ಯದ ಎಂಎಸ್‌ಆರ್‌ಡಿಸಿ ಈ ಯೋಜನೆಯನ್ನು ರಿಲಯನ್ಸ್‌ ಕೋಟ್‌ ಮಾಡಿದ್ದ ಅರ್ಧ ಹಣಕ್ಕಿಂತ ಕಡಿಮೆ ಮೊತ್ತಕ್ಕೆ .1600 ಕೋಟಿಗೆ ಪೂರ್ಣಗೊಳಿಸಿತ್ತು ಎಂದರು.

Hydrogen Fuel:ಸವಾರರಿಗೆ ಸಿಹಿ ಸುದ್ದಿ, ಪೆಟ್ರೋಲ್ ಡೀಸೆಲ್ ಬೇಕಿಲ್ಲ, ಬಂದಿದೆ ಘನತ್ಯಾಜ್ಯ, ಕೊಳಚೆ ನೀರಿನಿಂದ ಓಡುವ ವಾಹನ!

ನವದೆಹಲಿ: ಶೇ.6ರಷ್ಟುಬಡ್ಡಿ ದರಕ್ಕೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ರಸ್ತೆ ಮೂಲಸೌಕರ‍್ಯ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಶನಿವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಯಲ್ಲಿ ತಿಳಿಸಿದರು. ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತ ಹೆಚ್ಚು, ಅಂದರೆ ಶೇ.6ರಷ್ಟುಬಡ್ಡಿ ದರ ನೀಡಿ ಬಡವರು ಮತ್ತು ಸಾಮಾನ್ಯ ಜನರಿಂದ ನಿಧಿ ಸಂಗ್ರಹಿಸಿ ರಸ್ತೆ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳುವ ಯೋಚನೆ ಇದೆ. ಇದರಿಂದ ಸಾರ್ವಜನಿಕರಿಗೂ ನೆರವಾಗುತ್ತದೆ. ಅವರು ಕೊಟ್ಟಹಣ ಬಡ್ಡಿಯೊಂದಿಗೆ ವಾಪಸ್‌ ಪಡೆಯುತ್ತಾರೆ ಎಂದು ತಿಳಿಸಿದರು.

ಜನವರಿ 10ಕ್ಕೆ ಮಂಗಳೂರಿಗೆ ಗಡ್ಕರಿ:
ದ.ಕ. ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಇತ್ತೀಚೆಗೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ದ.ಕ.ದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜ.10ರಂದು ಮಂಗಳೂರಿಗೆ ಆಗಮಿಸಿ ದ.ಕ. ಜಿಲ್ಲೆಯ ಸುಮಾರು 2,555.88 ಕೋಟಿ ರು. ವೆಚ್ಚದ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಕಾಮಗಾರಿಗಳ ಪುನರ್‌ ಚಾಲನೆ ನೀಡಲಿರುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.

Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!

ಇದೇ ವೇಳೆ ಮಂಗಳೂರು ಬೆಂಗಳೂರು ನಡುವಿನ ಶಿರಾಡಿ ಘಾಟ್‌ ಸುರಂಗ ಮಾರ್ಗದ ಯೋಜನೆಯನ್ನು ಆದಷ್ಟುಶೀಘ್ರದಲ್ಲಿ ಕೈಗೆತ್ತಿಕೊಳ್ಳುವಂತೆ ವಿನಂತಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಿಲ್ಲೆಗೆ ಅನುಕೂಲವಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದಷ್ಟುಬೇಗನೆ ಪೂರ್ಣಗೊಳಿಸಲು ಸಂಬಂಧಪಟ್ಟಇಲಾಖೆಗೆ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪ್ರಕಟಣೆ ತಿಳಿಸಿದೆ.

ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಆಗ್ರಹ
ಕರ್ನಾಟಕಕ್ಕೆ ಸೇರಿರುವ ಹಾಗೂ ಕಲಬುರಗಿ ಜಿಲ್ಲೆಯ ಮೂಲಕ ಸಾಗುವಂತಹ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿಗೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜು ಖರ್ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.