Asianet Suvarna News Asianet Suvarna News

Hydrogen Fuel:ಸವಾರರಿಗೆ ಸಿಹಿ ಸುದ್ದಿ, ಪೆಟ್ರೋಲ್ ಡೀಸೆಲ್ ಬೇಕಿಲ್ಲ, ಬಂದಿದೆ ಘನತ್ಯಾಜ್ಯ, ಕೊಳಚೆ ನೀರಿನಿಂದ ಓಡುವ ವಾಹನ!

  • ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬಿತ ಕುಗ್ಗಿಸಲು ಹೈಡ್ರೋಜನ್ ವಾಹನ
  • ಜನರಲ್ಲಿ ವಿಶ್ವಾಸ ಹೆಚ್ಚಿಸಲು ಹೈಡ್ರೋಜನ್ ಚಾಲಿತ ವಾಹನ ಖರಿದಿಸಿದ ಗಡ್ಕರಿ
  • ಕೊಳಚೆ ನೀರು, ಘನ ತ್ಯಾಜ್ಯದಿಂದ ಉತ್ಪಾದಿಸಿದ ಹೈಡ್ರೋನ್ ಚಾಲಿತ ಕಾರು
  • ಭಾರತದಲ್ಲಿ ಹೊಸ ಸಂಚಲನ, ಸಾರಿಗೆ, ಪ್ರಯಾಣ ಇನ್ನು ಅಗ್ಗ
Nitin Gadkari planning to use green hydrogen to run buses trucks cars and trying to create value from waste ckm
Author
Bengaluru, First Published Dec 3, 2021, 4:45 PM IST

ನವದೆಹಲಿ(ಡಿ.03):  ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ, ಸಚಿವರು ದುಡ್ಡಿದೆ ಖರೀದಿಸುತ್ತಾರೆ ಎಂದು ಸುಮ್ಮನಾಗಬೇಡಿ. ಗಡ್ಕರಿ ಖರೀದಿಸಿದ ಕಾರು ಸಾಮಾನ್ಯ ಕಾರಲ್ಲ. ಹಾಗಂತ ದುಬಾರಿ ಕಾರಲ್ಲ. ಇದು ಘನ ತ್ಯಾಜ್ಯ, ಚರಂಡಿಯ ಕೊಳಚೆ ನೀರಿನಿಂದ ಉತ್ಪಾದಿಸುವ ಗ್ರೀನ್ ಹೈಡ್ರೋಜನ್‌ನಿಂದ(Green Hydrogen) ಚಲಿಸುವ ಕಾರು.  ಈ ಕಾರಿಗೆ(Car) ಪೆಟ್ರೋಲ್, ಡೀಸೆಲ್ ಬೇಕಿಲ್ಲ. ಅತೀ ಕಡಿಮೆ ಬೆಲೆಯಲ್ಲಿ ಉತ್ಪಾದಿಸಲಾಗುವ ಹಾಗೂ ಪರಿಸರಕ್ಕೂ ಪೂರಕವಾಗಿರುವ ಗ್ರೀನ್ ಹೈಡ್ರೋಜನ್ ಇಂಧನ ಸಾಕು. ಗ್ರೀನ್ ಹೈಡ್ರೋಜನ್ ಮೂಲಕ ವಾಹನ(Vehicle) ಓಡಲಿದೆ. ಈ ಕುರಿತು ಜನರಲ್ಲಿರುವ ಹಲವು ಆತಂಕ, ಅನುಮಾನಗಳನ್ನು ಹೋಗಲಾಡಿಸಲು ಸ್ವತಃ ನಿತಿನ್ ಗಡ್ಕರಿ ಗ್ರೀನ್ ಹೈಡ್ರೋಜನ್ ಕಾರು ಖರೀದಿಸಿದ್ದಾರೆ. 

ಗ್ರೀನ್ ಹೈಡ್ರೋಜನ್ ಚಾಲಿತ ಕಾರು ಖರೀದಿಸಿದ ಗಡ್ಕರಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಪೆಟ್ರೋಲ್, ಡೀಸೆಲ್(Petrol Diesel) ಮೇಲೆ ಅವಲಂಬಿತವಾಗುವ ಅವಶ್ಯಕತೆ ಇಲ್ಲ. ಸುಲಭವಾಗಿ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಹೈಡ್ರೋಜನ್ ವಾಹನ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಬಹುದೊಡ್ಡ ಯೋಜನೆ ಜಾರಿಗೆ ತಂದಿದೆ ಎಂದಿದ್ದಾರೆ.

Good News: ಶೀಘ್ರವೇ ಪೆಟ್ರೋಲ್, ಡಿಸೇಲ್ ವಾಹನಗಳ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರದ ಅಬಕಾರಿ ಸುಂಕ(Tax), ರಾಜ್ಯದ ಸುಂಕ ಕಡಿತಗೊಳಿಸಿದರೂ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಯಿಂದ ಕೆಳಗಿಳಿದಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತ ಇಂಧನಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಆದರೆ ಇವುಗಳ ಬೆಲೆ ಜನಸಾಮಾನ್ಯರ ಕೈಗೆಟುವಂತಿಲ್ಲ. ಇದರ ನಡುವೆ ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಮೂಲಕ ಸಾಗುವ ವಾಹನ ಉತ್ಪಾದನೆ ಆರಂಭಗೊಂಡಿದೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಗ್ರೀನ್ ಹೈಡ್ರೋಜನ್ ಚಾಲಿತ ಕಾರು, ಟ್ರಕ್ ಹಾಗೂ ಬಸ್‌ಗಳ ಉತ್ಪಾದನೆಗೆ ಉತ್ತೇಜನ ನೀಡಿದ್ದಾರೆ.

ಫರಿದಾಬಾದ್ ಸಂಶೋಧನಾ ಸಂಸ್ಥೆ ನಿರ್ಮಿಸಿದ ಗ್ರೀನ್ ಹೈಡ್ರೋಜನ್ ಚಾಲಿತ ಕಾರನ್ನು ನಿತಿನ್ ಗಡ್ಕರಿ ಖರೀದಿಸಿದ್ದಾರೆ. ಇದು ಪ್ರಾಯೋಗಿಕ ಹಂತದ ಕಾರಾಗಿದೆ. ಆದರೆ ಉದರ ಉಪಯೋಗ ಇತರ ಎಲ್ಲಾ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಈ ಕಾರು ಘನ ತ್ಯಾಜ್ಯಗಳಿಂದ, ಚರಂಡಿಯಲ್ಲಿನ ಕೊಳಚೆ ನೀರಿನಿಂದ ಉತ್ಪಾದಿಸುವ ಗ್ರೀನ್ ಹೈಡ್ರೋಜನ್‌ನಿಂದ ಚಲಿಸಲಿದೆ. ತ್ಯಾಜ್ಯ ನಿರ್ವಹಣೆ ಸವಾಲಾಗಿರುವ ಪ್ರಸ್ತುತ ಸಂದರ್ಭದಲ್ಲಿ ಇದೀಗ ಇದೇ ತ್ಯಾಜ್ಯವನ್ನು ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಬಳಲಾಗುತ್ತಿದೆ. ಈ ಕುರಿತು ನಿತಿನ್ ಗಡ್ಕರಿ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. 

Vehicle Scrapping Centre: ದೇಶದ ಮೊದಲ ಸುಸಜ್ಜಿತ ವಾಹನ ಗುಜರಿ ಘಟಕಕ್ಕೆ ಚಾಲನೆ!

ಹಣಕಾಸು ಸೇರ್ಪಡೆ ಕುರಿತು 6ನೇ ರಾಷ್ಟ್ರೀಯ ಶೃಂಗಸಭೆಯಲ್ಲಿ(National Summit on Financial Inclusion ) ನಿತಿನ್ ಗಡ್ಕರಿ ಭಾರತದ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಹೈಡ್ರೋಜನ್ ಚಾಲಿತ ಬಸ್, ಟ್ರಕ್ ಕಾರು ಉತ್ಪಾದನೆಗೆ ಕೇಂದ್ರ ಒತ್ತು ನೀಡಲಿದೆ. ಫರಿದಾಬಾದ್ ಸಂಶೋಧನಾ ಕೇಂದ್ರದ ಅಧ್ಯಯನ ಯಶಸ್ವಿಯಾದರೆ ಇಂಧನದ ಮೇಲೆ ಅವಲಂಬಿತವಾಗಿರುವ ಭಾರತದ ಬಹುದೊಡ್ಡ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇಂಧನ ಬೆಲೆಯೂ ಕುಸಿತಗೊಳ್ಳಲಿದೆ. ಇತ್ತ ಅದಕ್ಕಿಂತ ಕಡಿಮೆ ಬೆಲೆಗೆ ಗ್ರೀನ್ ಹೈಡ್ರೋಜನ್ ಇಂಧನ ಲಭ್ಯವಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಪೆಟ್ರೋಲ್, ಡೀಸಲ್ ಬೆಲೆ ಏರಿಕೆ, ವಾಯು ಮಾಲಿನ್ಯ(Air pollution) ಕಾರಣದಿಂದ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗ(Electric vehicle) ಹೆಚ್ಚಿನ ಒತ್ತು ನೀಡಿದೆ. ದೇಶದಲ್ಲಿ ಹಲವು ಕಂಪನಿಗಳು ಎಲೆಕ್ಟ್ರಿಕ್ ಕಾರು ಹಾಗೂ ಸ್ಕೋಟರ್ ಬಿಡುಗಡೆ ಮಾಡುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 350 ಕಿ.ಮೀಯಿಂದ 550 ಕಿ.ಮೀ ಪ್ರಯಾಣ ಮಾಡಬಲ್ಲ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿದೆ. ಇನ್ನು 50 ಕಿಲೋಮೀಟರ್‌ನಿಂದ 250 ಕಿಲೋಮೀಟರ್ ವರೆಗೆ ಪ್ರಯಾಣ ಮಾಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಲಭ್ಯವಿದೆ. ಜನರು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಆದರೆ ಬೆಲೆ ಕೊಂಚ ದುಬಾರಿಯಾಗಿರುವ ಕಾರಣ ಜನಸಾಮಾನ್ಯರ ಬಳಿಗೆ ತಲುಪಿಲ್ಲ. ಇದರ ನಡುವೆ ಗ್ರೀನ್ ಹೈಡ್ರೋಜನ್ ಚಾಲಿತ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಕೈಸುಡುವ ಇಂಧನದ ಬೇಡಿಕೆ ಕುಗ್ಗಲಿದೆ. ಇದರಿಂದ ಸಾರಿಗೆ ಸುಲಭವಾಗಲಿದೆ. ಬೆಲೆಗಳ ವಸ್ತುಗಳು ಕಡಿಮೆಯಾಗಲಿದೆ.

Follow Us:
Download App:
  • android
  • ios