ಯುಪಿಐನಿಂದ ಹಣಪಾವತಿ ಮಾತ್ರವಲ್ಲ, ಕಳೆದುಹೋದ ಪತ್ನಿ ಫೋನ್ ಪತ್ತೆ ಹಚ್ಚಿದ ಪತಿ, ಇದು ಅಚ್ಚರಿಯಾದರೂ ಸತ್ಯ, ಶಾಪಿಂಗ್ ತೆರಳಿದಾಗ ಫೋನ್ ಕಳೆದುಕೊಂಡಿದ್ದಾರೆ. ಆದರೆ ಯುಪಿಐನಿಂದ ಕಳೆದುಕೊಂಡ ಫೋನ್ ಮರಳಿ ಸಿಕ್ಕಿದ್ದು ಹೇಗೆ?
ಡಿಜಿಟಲ್ ಇಂಡಿಯಾ ಮೂಲಕ ಭಾರತದಲ್ಲಿ ಕ್ರಾಂತಿಯಾಗಿದೆ. ಪ್ರಮುಖವಾಗಿ ಯುಪಿಐ ಪಾವತಿ ಮೇಲೆ ಬಹುತೇಕರು ಅವಲಂಬಿತರಾಗಿದ್ದಾರೆ. ಸಣ್ಣ ವ್ಯಾಪಾರಿ, ಬೀದಿ ಬದಿ ವ್ಯಾಪಾರಿಯಿಂದ ಹಿಡಿದು ಶಾಪಿಂಗ್ ಮಾಲ್ ವರೆಗೂ ಎಲ್ಲೆಡೆ ಯುಪಿಐ ಪಾವತಿ ಲಭ್ಯವಿದೆ. ಯುಪಿಐ ಪೇಮೆಂಟ್ ಆ್ಯಪ್ ಮೂಲಕ ಹಲವು ಸೌಲಭ್ಯಗಳಿವೆ. ಮೊಬೈಲ್ ರೀಚಾರ್ಜ್, ಬಿಲ್ ಪಾವತಿ ಸೇರಿದಂತೆ ಹಲವು ಪ್ರಯೋಜನಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆದರೆ ಇದೇ ಮೊದಲ ಬಾರಿಗೆ ಯುಪಿಐ ಮೂಲಕ ಕಳೆದುಹೋದು ಮೊಬೈಲ್ ಫೋನ್ ಪತ್ತೆಯಾದ ಘಟನೆ ನಡೆದಿದೆ. ರೆಡ್ಡಿಟ್ ಬಳಕೆದಾರ ಈ ಕುರಿತು ರೋಚಕ ಘಟನೆ ಬಿಚ್ಚಿಟ್ಟಿದ್ದಾರೆ.
ದಂಪತಿ ಬಹಿರಂಗಪಡಿಸಿದ ರೋಚಕ ಘಟನೆ
ನಮಗೂ ಅಚ್ಚರಿಯಾಗಿದೆ. ನಂಬಲು ಸಾಧ್ಯವಾಗುತ್ತಿಲ್ಲ. ಪತ್ನಿ ಕಳೆದುಕೊಂಡ ಪೋನ್ ಯುಪಿಐ ಪಾವತಿ ಮೂಲಕ ಮರಳಿ ಪಡೆದಿದ್ದೇವೆ. ನಾವಿಂದ ಶಾಪಿಂಗ್ ಮಾಡಲು ತೆರಳಿದ್ದೆವು, ಹೀಗಾಗಿ ಆಟೋ ಬುಕ್ ಮಾಡಿ ತೆರಳಿದ್ದೇವೆ. ಆಟೋ ಶಾಪಿಂಗ್ ಮಾಲ್ ಬಳಿ ತೆರಳಿತ್ತು. ನಾವು ಆಟೋದಿಂದ ಇಳಿದೆವು. ನಾನು ಆಟೋ ಚಾಲಕನಿಗೆ ಯುಪಿಐ ಮೂಲಕ ಪಾವತಿ ಮಾಡಿದ್ದೆ. ಇದೆ ವೇಳೆ ನನ್ನ ಪತ್ನಿ ಆಟೋದಿಂದ ಇಳಿಯುವಾಗ ಆಕೆಯ ಹೊಸ ಮೊಬೈಲ್ ಫೋನ್ ಆಟೋದಲ್ಲಿ ಬಿದ್ದಿದೆ. ಯಾರೂ ಇದನ್ನು ಗಮನಿಸಲಿಲ್ಲ.
ಬಳಿಕ ಶಾಪಿಂಗ್ ಮಾಡುತ್ತಿದ್ದಾಗ ಪತ್ನಿಗೆ ಹೊಸದಾಗಿ ಖರೀದಿಸಿದ ಮೊಬೈಲ್ ಫೋನ್ ನಾಪತ್ತೆಯಾಗಿದೆ ಅನ್ನೋದು ಪತ್ತೆಯಾಗಿದೆ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಎಲ್ಲಿ ಕಳದುಹೋಗಿದೆ ಅನ್ನೋದು ಗೊತ್ತಿಲ್ಲ. ಹೊಸ ಫೋನ್ ಆಗಿದ್ದ ಕಾರಣ ಇನ್ನೂ ಕೂಡ ಸಿಮ್ ಹಾಕಿರಲಿಲ್ಲ. ಹೀಗಾಗಿ ಫೋನ್ ಮಾಡಿ ಪತ್ತೆ ಮಾಡುವ, ಲೊಕೇಶನ್ ಟ್ರಾಕ್ ಮಾಡುವ ಅವಕಾಶವೂ ಇರಲಿಲ್ಲ. ತುಂಬಾ ಯೋಚಿಸಿದೆವು. ಕೊನೆಗೆ ಆಟೋದಲ್ಲಿ ಬಿಟ್ಟಿರುವ ಸಾಧ್ಯತೆ ಇದೆ. ಆದರೆ ಖಚಿತವಲ್ಲ ಎಂದು ನಿರ್ಧರಿಸಿದೆವು.
ಆಟೋ ಚಾಲಕನ ಸಂಪರ್ಕಿಸಲು ಯಾವುದೇ ದಾರಿ ಇರಲಿಲ್ಲ
ಆಟೋ ಚಾಲಕನ ನಂಬರ್ ಇರಲಿಲ್ಲ. ಆತನ ಸಂಪರ್ಕಿಸಲು ದಾರಿ ಇರಲಿಲ್ಲ. ನಾನು ಯುಪಿಐ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಿದ್ದೆ. ಯುಪಿಐ ಆ್ಯಪ್ ಮೂಲಕ ಪರಿಶೀಲಿಸಿದರೆ ಆತನ ಯುಪಿಐ ಐಡಿ ಮಾತ್ರ ಲಭ್ಯವಿದೆ. ಫೋನ್ ನಂಬರ್ ಸೇರಿದಂತೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಆಟೋ ಚಾಲಕನ ಸಂಪರ್ಕ ಅಸಾಧ್ಯವಾಗಿತ್ತು. ಹೀಗಾಗಿ ಪತ್ನಿ ಫೋನ್ ಮರಳಿ ಸಿಗುವುದಿಲ್ಲ ಎಂದು ನಾವು ನಿರ್ಧರಿಸಿದೆವು. ಫೋನ್ ಯೋಚಿಸಿ ಫಲವಿಲ್ಲ ಎಂದುಕೊಂಡು ಮುಂದೆ ಸಾಗಿದೆವು.
ಬೇಸರದಿಂದ ಮರಳಿದಾಗ ಯುಪಿಐನಿಂದ ಅಚ್ಚರಿ
ಮನೆಗೆ ಮರಳುತ್ತಿದ್ದಂತೆ ನನ್ನ ಯುಪಿಐ ಲಿಂಕ್ ಖಾತೆಗೆ 1 ರೂಪಾಯಿ ಹಣ ವರ್ಗಾವಣೆಯಾಗಿದೆ. ನಾನು ಯಾವ ಅಟೋ ಚಾಲನಿಗೆ ಯುಪಿಐ ಮೂಲಕ ಪಾವತಿ ಮಾಡಿದ್ದೇನೋ ಆದೆ ಆಟೋ ಚಾಲಕನ ನನಗೆ 1 ರೂಪಾಯಿ ಪಾವತಿ ಮಾಡಿ, ಒಂದು ಸಂದೇಶವನ್ನೂ ನೀಡಿದ್ದ. ತಕ್ಷಣ ಸಂಪರ್ಕ ಮಾಡಿ ಎಂದು ಆಟೋ ಚಾಲಕನ ಆತನ ಫೋನ್ ನಂಬರ್ ಮೆಸೇಜ್ ಮಾಡಿದ್ದ. ನಮಗೆ ನಂಬಲು ಸಾಧ್ಯವಾಗಲಿಲ್ಲ. ತಕ್ಷಣ ಫೋನ್ ನಂಬರ್‌ಗೆ ಕರೆ ಮಾಡಿದಾಗ ಆಟೋ ಚಾಲಕನ, ನಿಮ್ಮ ಫೋನ್ ಆಟೋದಲ್ಲಿ ಬಿದ್ದಿತ್ತು. ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆ ಸಾಧ್ಯವಾಗಲಿಲ್ಲ, ಕೊನೆಗೆ ಈ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸಿದೆ ಎಂದು ಆಟೋ ಚಾಲಕನ ಹೇಳಿದ್ದಾನೆ. ನೀವು ಎಲ್ಲಿದ್ದೀರಿ ಎಂದು ಹೇಳಿ, ಅಲ್ಲಿಗೆ ಬರುತ್ತೇನೆ ಎಂದು ಆಟೋ ಚಾಲಕ ಹೇಳಿದ್ದೆ. ನಮ್ಮ ಲೋಕೋಶನ್ ಹಂಚಿಕೊಂಡ ಕೆಲ ಹೊತ್ತಲ್ಲಿ ಆಟೋ ಚಾಲಕ ಮರಳಿದ್ದ. ನಮ್ಮ ಹೊಸ ಫೋನ್ ಮರಳಿ ನೀಡಿದ್ದಾನೆ. ನಮಗೆ ನಂಬರು ಸಾಧ್ಯವಾಗಲಿಲ್ಲ. ಯುಪಿಐ ಮೂಲಕ ಪತ್ನಿಯ ಕಳೆದು ಹೋದ ಫೋನ್ ಮತ್ತೆ ಸಿಕ್ಕಿದೆ. ಫೋನ್ ಮರಳಿಸಿದ ಆಟೋ ಚಾಲಕನಿಗೆ ನಮ್ಮ ಕಡೆಯಿಂದ ಸಣ್ಣ ಉಡುಗೊರೆ ನೀಡಿದ್ದೇವೆ ಎಂದು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾನೆ.
