ಛತ್ತೀಸ್‌ಗಢ (ಅ.25): ಹಲವು ಪಕ್ಷಾಂತರಿಗಳು ಹಾಗೂ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಹರ್ಯಾಣದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆಯುವ ಅವಕಾಶವನ್ನು ಕೈಚೆಲ್ಲಿದೆ.

ಅ.21ರಂದು ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿದ್ದಾಗ ಇಂಡಿಯನ್‌ ನ್ಯಾಷನಲ್‌ ಲೋಕ ದಳದ ಹಾಲಿ ಶಾಸಕರು ಮತ್ತು ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹಿಗಾಗಿ ಬಿಜೆಪಿ ಹಾಲಿ ತನ್ನ ಹಾಲಿ 12 ಶಾಸಕರಿಗೆ ಟಿಕೆಟ್‌ ನೀಡದೇ ಪಕ್ಷಾಂತರಿಗಳಿಗೆ ಮಣೆ ಹಾಕಿತ್ತು.

ಕೆಲವೆಡೆ ಕಾಂಗ್ರೆಸ್ ಕಮಾಲ್, ಹಲವೆಡೆ ಬಿಜೆಪಿ ಧಮಾಲ್: ಬೈ ಎಲೆಕ್ಷನ್ ರಿಸಲ್ಟ್!

ಇದರಿಂದ ಬೇಸರಗೊಂಡ ನಿಷ್ಟಾಷವಂತ ಕಾರ್ಯಕರ್ತರು ಹಾಗೂ ಬಂಡಾಯಗಾರರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಇದು ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಒಡೆದು ಜನನಾಯಕ್‌ ಜನತಾ ಪಕ್ಷ (ಜೆಜೆಪಿ) ಮತ್ತು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದೆ.

ಉದಾಹರಣೆಗೆ ರೆವಾರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ರಣಭೀರ್‌ ಕಾಪ್ರಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಈ ಕ್ಷೇತ್ರದಲ್ಲಿ ರಣಭೀರ್‌ ಇಲ್ಲವೇ ಬಿಜೆಪಿ ಅಭ್ಯರ್ಥಿ ಗೆಲ್ಲುವ ಬದಲು ಕಾಂಗ್ರೆಸ್‌ ಅಭ್ಯರ್ಥಿ ಅನಾಯಾಸದ ಗೆಲುವು ದಾಖಲಿಸಿದ್ದಾರೆ. ಬೇರೆ ಕ್ಷೇತ್ರಗಳಲ್ಲೂ ಬಂಡಾಯ ಅಭ್ಯರ್ಥಿಗಳು ಬಿಜೆಪಿಗೆ ಭರ್ಜರಿ ಹೊಡೆತ ನೀಡಿದ್ದಾರೆ.