Asianet Suvarna News

ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

* 9 ಬಿಎಸ್ಪಿ ಶಾಸ​ಕರು ಸಮಾ​ಜ​ವಾದಿ ಪಕ್ಷ​ಕ್ಕೆ ಜಿಗಿ​ತ?

* ಚುನಾ​ವ​ಣೆಗೆ 1 ವರ್ಷ ಬಾಕಿ​ಯಿ​ರು​ವಾ​ಗಲೇ ಈ ಬೆಳ​ವ​ಣಿ​ಗೆ

*  ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಸಭೆ​

Rebel BSP leaders to join Samajwadi Party says Akhilesh Yadav pod
Author
Bangalore, First Published Jun 16, 2021, 11:28 AM IST
  • Facebook
  • Twitter
  • Whatsapp

ಲಖ​ನೌ(ಜೂ.16): ಉತ್ತರ ಪ್ರದೇ​ಶ ವಿಧಾ​ನ​ಸಭೆ ಚುನಾ​ವ​ಣೆಗೆ ಇನ್ನೂ ಒಂದು ವರ್ಷ ಬಾಕಿ​ಯಿ​ರು​ವಾ​ಗಲೇ, ಆಡ​ಳಿ​ತಾ​ರೂಢ ಬಿಜೆಪಿ ಸೇರಿ​ದಂತೆ ಎಲ್ಲಾ ಪಕ್ಷ​ಗ​ಳಲ್ಲೂ ರಾಜ​ಕೀಯ ಚಟು​ವ​ಟಿ​ಕೆ​ಗಳು ಗರಿ​ಗೆ​ದ​ರಿವೆ.

ಕಳೆದ ವರ್ಷ​ವಷ್ಟೇ ಬಿಎ​ಸ್‌​ಪಿ​ಯಿಂದ ಅಮಾ​ನತು ಆಗಿದ್ದ ಐವರು ಸೇರಿ​ದಂತೆ ಒಟ್ಟು 9 ಶಾಸ​ಕರು ಸಮಾ​ಜ​ವಾದಿ ಪಕ್ಷ​(​ಎಸ್‌​ಪಿ)ದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವ​ರನ್ನು ಭೇಟಿ​ಯಾ​ಗಿ​ದ್ದಾರೆ. ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಈ ಸಭೆ​ಯಲ್ಲಿ ಮಾತು​ಕ​ತೆ​ ನಡೆ​ದಿದ್ದು, ಈ ಎಲ್ಲಾ ಶಾಸ​ಕರು ಸೈಕಲ್‌ ಪಕ್ಷಕ್ಕೆ ಸೇರುವ ಸಾಧ್ಯತೆ ದಟ್ಟ​ವಾ​ಗಿದೆ.

2017ರ ವಿಧಾ​ನ​ಸಭೆ ಚುನಾ​ವ​ಣೆ​ಯಲ್ಲಿ ಬಿಎ​ಸ್‌ಪಿ 19 ಕ್ಷೇತ್ರ​ಗ​ಳಲ್ಲಿ ಜಯ ಸಾಧಿ​ಸಿತ್ತು. ಈ ಪೈಕಿ 11 ಶಾಸ​ಕ​ರನ್ನು ಬಿಎ​ಸ್‌ಪಿ ಅಧಿ​ನಾ​ಯಕಿ ಮಾಯಾ​ವತಿ ಅವ​ರು ಉಚ್ಚಾ​ಟನೆ ಮಾಡಿ​ದ್ದಾರೆ. ಇನ್ನು ಓರ್ವ ಶಾಸಕ ಲೋಕ​ಸಭೆ ಪ್ರವೇ​ಶಿ​ಸಿ​ದ್ದಾರೆ. ಹೀಗಾಗಿ ಬಿಎ​ಸ್‌​ಪಿ​ಯ ಶಾಸ​ಕರ ಸಂಖ್ಯಾ​ಬಲ ಕೇವಲ 7ಕ್ಕೆ ಸೀಮಿ​ತ​ವಾ​ಗಿದೆ

Follow Us:
Download App:
  • android
  • ios