Asianet Suvarna News Asianet Suvarna News

'ಖಲಿಸ್ತಾನಿ ಅಜೆಂಡಾದ ಪ್ರತಿಭಟನೆ.. ದೆಹಲಿ ಗಡಿಯಲ್ಲಿ ಹೋರಾಟ ಟೀಕಿಸಿದ 'ರಿಯಲ್‌' ರೈತ!

ಖಲಿಸ್ತಾನಿ ಪರ ಪ್ರಚಾರ ಮತ್ತು ವಿದೇಶಿ ಧನಸಹಾಯದೊಂದಿಗೆ ಪ್ರತಿಭಟನಾಕಾರರು ರೈತರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಯಾಣದ ರೈತರೊಬ್ಬರು ಆರೋಪಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Real farmer slams protests near Delhi Borders Khalistani agenda funded from abroad san
Author
First Published Feb 20, 2024, 3:08 PM IST

ನವದೆಹಲಿ (ಫೆ.20): ಎಂಎಸ್‌ಪಿ ಮತ್ತು ಇತರ ವಿಚಾರಗಳ ಕುರಿತು ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಸ್ವತಃ ಆ ಭಾಗದ ರೈತರೇ ಅಸಹನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಳು ತೋಡಿಕೊಂಡಿರುವ ಹಾಗೂ ತಮ್ಮ ಭಾವನೆಗಳೊಂದಿಗೆ ಪ್ರತಿಭಟನಾಕಾರರು ಆಟವಾಡುತ್ತಿದ್ದಾರೆ ಎಂದು ದೂಷಣೆ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ಮಾತನಾಡಿರುವ ಹರಿಯಾಣದ ಮೂಲದ ರೈತ ಜೋಗಿಂದರ್‌ ಸಿಂಗ್‌, ಈ ರೈತರ ಪ್ರತಿಭಟನೆಯ ಹಿಂದೆ ಖಲಿಸ್ತಾನಿ ಪ್ರಚಾರವಿದೆ ಎಂದು ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಜೋಗಿಂದರ್, ಕೆನಡಾ ಮತ್ತು ಪಾಕಿಸ್ತಾನದಿಂದ ವಿದೇಶಿ ಬರುತ್ತಿದೆ ಎನ್ನುವುದು ನೋಡಿದರೆ ಗೊತ್ತಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಉದ್ದೇಶವನ್ನು ಇವರು ಹೊಂದಿದ್ದಾರೆ. ಆದರೆ, ಹೀಗೆ ಮಾಡುವುದರಿಂದ  ಅವರ ಪ್ರಖ್ಯಾತಿ ಗಗನಕ್ಕೇರುತ್ತದೆ ಎಂದು ಹೇಳಿದ್ದಾರೆ. ಅವರ ಕಾರ್ಯಗಳು ಕೇವಲ ರೈತರ ಭಾವನೆಗಳನ್ನು ಕಸಿದುಕೊಳ್ಳುವ ಪ್ರಯತ್ನವಷ್ಟೇ. ನಿಜವಾದ ರೈತರು ಎಂದಿಗೂ ದೇಶದ ಪ್ರಧಾನಿ ವಿರುದ್ಧ ಬೆದರಿಕೆ ಹಾಕುವುದಿಲ್ಲ ಎಂದಿದ್ದಾರೆ. "ಅವರು ದುಬಾರಿ ಕಾರುಗಳನ್ನು ಬಳಸುತ್ತಿದ್ದಾರೆ. ಪ್ರತಿ ರಾತ್ರಿ 4000 ರೂಪಾಯಿಗೂ ಅಧಿಕ ಮೌಲ್ಯದ ಮದ್ಯವನ್ನು ಗುಜರಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾದ ರೈತರ ಬಳಿ ತಮ್ಮ ಟ್ರ್ಯಾಕ್ಟರ್‌ಗಳಿಗೆ ಇಂಧನ ತುಂಬಲು ಸಹ ಹಣವಿಲ್ಲ. ಅವರು ನಿಜವಾದ ರೈತರಲ್ಲ" ಎಂದು ಅವರು ಹೇಳುತ್ತಾರೆ.

ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಐದು ವರ್ಷಗಳ ಕಾಲ ಸರ್ಕಾರಿ ಏಜೆನ್ಸಿಗಳಿಂದ ಎಂಎಸ್‌ಪಿ ದರದಲ್ಲಿ ಖರೀದಿಸುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಬುಧವಾರ (ಫೆಬ್ರವರಿ 21) ದೆಹಲಿ ಕಡೆಗೆ ತಮ್ಮ ಮೆರವಣಿಗೆಯನ್ನು ಮುಂದುವರಿಸುವುದಾಗಿ ರೈತರ ಪ್ರತಿನಿಧಿಗಳು ಸರ್ಕಾರಕ್ಕೆ ತಿಳಿಸುತ್ತಿರುವ ಸಮಯದಲ್ಲಿ ಈ ವೀಡಿಯೊ ಬಂದಿದೆ. ಪ್ರತಿಭಟನಾ ನಿರತ ರೈತರು ಪಂಜಾಬ್-ಹರಿಯಾಣ ಗಡಿಯುದ್ದಕ್ಕೂ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ನೆಲೆಯಾಗಿದ್ದು, ಹಲವಾರು ಬೇಡಿಕೆಗಳನ್ನು ಪರಿಹರಿಸಲು ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಸರ್ಕಾರದ ಪ್ರಸ್ತಾಪವನ್ನು ತಳ್ಳಿಹಾಕಿರುವ ರೈತರು ಬುಧವಾರ ದೆಹಲಿಗೆ ತೆರಳುವ ಇಂಗಿತವನ್ನು ಘೋಷಣೆ ಮಾಡಿದ್ದಾರೆ. ಕಿಸಾನ್ ಮಜ್ದೂರ್ ಮೋರ್ಚಾದ ನಾಯಕ ಸರ್ವಾನ್ ಸಿಂಗ್ ಪಂಧೇರ್, ಪಂಜಾಬ್-ಹರಿಯಾಣ ಗಡಿಯ ಶಂಭು ಪಾಯಿಂಟ್‌ನಲ್ಲಿ ಮಾತನಾಡಿದ್ದು, "ನಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಅಥವಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿ ಮತ್ತು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದಿದ್ದಾರೆ.


ಎಂಎಸ್‌ಪಿ ಕಾನೂನು ಭರವಸೆ ನೀಡುವುದರ ಜೊತೆಗೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ರೈತರಿಗೆ ಸಾಲ ಪರಿಹಾರ, ವಿದ್ಯುತ್ ದರ ಏರಿಕೆ ತಡೆ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ರೈತರು ಬೇಡಿಕೆ ಇಟ್ಟಿದ್ದಾರೆ. 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ. 2013ರ ಭೂಸ್ವಾಧೀನ ಕಾಯಿದೆಯನ್ನು ಮರುಸ್ಥಾಪಿಸಲು ಮತ್ತು 2020-21ರಲ್ಲಿ ಹಿಂದಿನ ಪ್ರತಿಭಟನೆಗಳ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ನೀಡುವಂತೆಯೂ ಅವರು ಒತ್ತಾಯಿಸುತ್ತಿದ್ದಾರೆ.

ರೈತರು- ಕೇಂದ್ರದ ಮಾತುಕತೆ ಅಪೂರ್ಣ, ನಾಳೆ 4ನೇ ಸುತ್ತಿನ ಚರ್ಚೆ, ಪ್ರತಿಭಟನೆ ವೇಳೆ ಅಶ್ರುವಾಯು ಸಿಡಿಸಿದ ಪೊಲೀಸ್‌

ಶುಕ್ರವಾರ ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಸಮೀಪಿಸುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದು ಅಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಯ ಆರಂಭಿಕ ಎರಡು ದಿನಗಳಲ್ಲಿ ರೈತರು ಮತ್ತು ಕಾನೂನು ಜಾರಿ ಸಿಬ್ಬಂದಿ ನಡುವೆ ಘರ್ಷಣೆಗಳು ಸಂಭವಿಸಿದವು. ಹರ್ಯಾಣದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರ ‘ದೆಹಲಿ ಚಲೋ’ ಕರೆಗೆ ಸ್ಪಂದಿಸಿ ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು ಮತ್ತು ರಾಜ್ಯದ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದೆ.

Farmers Protest in Delhi: ಡ್ರೋನ್ ಮೇಲೆ ಟೆನಿಸ್ ಬಾಲ್ ದಾಳಿ: ಪೊಲೀಸರ ತಂತ್ರಗಳಿಗೆ ಅನ್ನದಾತರ ಪ್ರತಿತಂತ್ರ..!

Follow Us:
Download App:
  • android
  • ios