ನವದೆಹಲಿ(ಫೆ.08): ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಈ ಆಹ್ವಾನಕ್ಕೆ ರೈತ ಸಂಘಟನಗಳು ಸಮ್ಮತಿಸಿ ಸೂಚಿಸಿದೆ. ಕೇಂದ್ರದ ಎಲ್ಲಾ ಮಾತುಕತೆಯಲ್ಲಿ ನಾವು ಪಾಲ್ಗೊಂಡಿದ್ದೇವೆ. ಆದರೆ ನಮ್ಮ ಬೇಡಿಕೆ ಮಾತ್ರ ಈಡೇರಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ.

ರಾಜ್ಯಸಭೆಯಲ್ಲಿ ಪ್ರಧಾನಿ ಸುದೀರ್ಘ ಭಾಷಣ... ಮುಂದೆ ಏನಾಗಲಿದೆ?

ಸರ್ಕಾರ ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ಹಾಗೂ ಸಮಯ ನಿಗದಿಪಡಿಸಲಿ. ಸರ್ಕಾರ ಹೇಳುವ ಸಮಯಕ್ಕೆ ರೈತ ಸಂಘಟನೆಗಳ ಮುಖಂಡರು ಮಾತುಕತೆಗೆ ಹಾಜರಾಗಲು ಸಿದ್ಧ. ಆದರೆ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಚ್ಚರಿಕೆಯನ್ನು ನೀಡಿದೆ.

ಈಗಾಗಲೇ ಕೇಂದ್ರ ಹಾಗೂ ರೈತ ಸಂಘಟನೆಗಳ ನಾಯಕರ ಜೊತೆಗೆ 11 ಸುತ್ತಿನ ಮಾತುಕತೆ ನಡೆಸಿದೆ. ಎಲ್ಲಾ ಮಾತುಕತೆಗಳು ವಿಫಲವಾಗಿದೆ. 3 ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತರ ಪ್ರಮುಖ ಬೇಡಿಕೆ. ಆದರೆ ಕೇಂದ್ರ ಸರ್ಕಾರ, ಕಾಯ್ದೆ ವಾಪಸ್ ಸಾಧ್ಯವಿಲ್ಲ, ತಿದ್ದುಪಡಿ ಇದ್ದರೆ ತಿಳಿಸಿ ಎಂದಿದೆ.