Asianet Suvarna News Asianet Suvarna News

ಪತ್ನಿಗೆ ಬಿಜೆಪಿ ಟಿಕೆಟ್‌: ಪ್ರಧಾನಿ ಮೋದಿ, ಅಮಿತ್‌ ಶಾಗೆ ರವೀಂದ್ರ ಜಡೇಜಾ ಧನ್ಯವಾದ

ನನ್ನ ಪತ್ನಿಯ ಸಾಮರ್ಥ್ಯಗಳ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಉದಾತ್ತ ಕೆಲಸ ಮಾಡಲು ಆಕೆಗೆ ಒಂದು ಅವಕಾಶ ನೀಡಿದ್ದಕ್ಕೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಶ್ರೀ ಅಮಿತ್ ಶಾ ಜೀ ಅವರಿಗೆ ಸಹ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ರವಿಂದ್ರ ಜಡೇಜಾ ಟ್ವೀಟ್‌ ಮಾಡಿದ್ದಾರೆ. 

ravindra jadeja thanks pm after wife picked as gujarat bjp candidate ash
Author
First Published Nov 10, 2022, 5:14 PM IST

ಭಾರತೀಯ ಕ್ರಿಕೆಟಿಗ (Indian Cricketer) ರವೀಂದ್ರ ಜಡೇಜಾ (Ravindra Jadeja) ಪತ್ನಿಗೆ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ (Gujarat Vidhan Sabha Elections) ಬಿಜೆಪಿ (BJP) ಟಿಕೆಟ್‌ ನೀಡಿದೆ. ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ ರವೀಂದ್ರ ಜಡೇಜಾ ಪತ್ನಿ ರಿವಾಬಾ  ಜಡೇಜಾ (Rivaba Jadeja) ಅವರಿಗೆ ಬಿಜೆಪಿ (BJP) ಟಿಕೆಟ್‌ ನೀಡಿದ್ದಕ್ಕೆ ಪ್ರಧಾನಿ ಮೋದಿ (PM Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರಿಗೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಭಾರತೀಯ ಕ್ರಿಕೆಟಿಗ ರವಿಂದ್ರ ಜಡೇಜಾ, ‘’ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಸಿಕ್ಕಿದ್ದಕ್ಕೆ ನನ್ನ ಹೆಂಡತಿಗೆ ಅಭಿನಂದನೆಗಳು. ನೀನು ಹಾಕಿರುವ ಪ್ರಯತ್ನ ಮತ್ತು ಕಠಿಣ ಪರಿಶ್ರಮಕ್ಕೆ ನನಗೆ ಹೆಮ್ಮೆ ಇದೆ. ಸಮಾಜದ ಅಭಿವೃದ್ಧಿಗಾಗಿ ನೀನು ನಿನ್ನ ಕೆಲಸ ಮುಂದುವರಿಸು. ನಿನಗೆ ನನ್ನ ಅಭಿನಂದನೆಗಳು’’ ಎಂದು ರವೀಂದ್ರ ಜಡೇಜಾ ಟ್ವೀಟ್‌ ಮಾಡಿದ್ದಾರೆ.

ಅಲ್ಲದೆ, ‘’ನನ್ನ ಪತ್ನಿಯ ಸಾಮರ್ಥ್ಯಗಳ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಹಾಗೂ ಉದಾತ್ತ ಕೆಲಸ ಮಾಡಲು ಆಕೆಗೆ ಒಂದು ಅವಕಾಶ ನೀಡಿದ್ದಕ್ಕೆ  ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ಶ್ರೀ ಅಮಿತ್ ಶಾ ಜೀ ಅವರಿಗೆ ಸಹ ನಾನು ಧನ್ಯವಾದ ಹೇಳಲು ಬಯಸುತ್ತೇನೆ’’ ಎಂದೂ ರವೀಂದ್ರ ಜಡೇಜಾ ಪೋಸ್ಟ್‌ ಮಾಡಿದ್ದಾರೆ. 

ಇದನ್ನು ಓದಿ: Gujarat Election 2022: ರವೀಂದ್ರ ಜಡೇಜಾ ಪತ್ನಿ, ಮೊರ್ಬಿ ದುರಂತದಲ್ಲಿ ಜನರ ಜೀವ ಉಳಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್‌!

ಗುಜರಾತ್‌ ವಿಧಾನಸಭೆ ಚುನಾವಣೆಗೆ ಬಿಜೆಪಿ ಇಂದು 160 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಜಾಮ್ನಗರ ಉತ್ತರ ಕ್ಷೇತ್ರಕ್ಕೆ ರಿವಾಬಾ ಜಡೇಜಾ ಬಿಜೆಪಿಯ ಆಯ್ಕೆಯಾಗಿದ್ದಾರೆ. ಪ್ರಸ್ತುತ ಶಾಸಕ ಧರ್ಮೇಂದ್ರಸಿಂಗ್ ಎಂ. ಜಡೇಜಾಗೆ ಟಿಕೆಟ್‌ನೀಡದೆ ರವೀಂದ್ರ ಜಡೇಜಾ ಅವರ ಪತ್ನಿಗೆ ಕೇಸರಿ ಪಕ್ಷ ಮಣೆ ಹಾಕಿದೆ. ಜಾಮ್ನಗರ ರವೀಂದ್ರ ಜಡೇಜಾ ಅವರು ಹುಟ್ಟಿ ಬೆಳೆದ ನಗರವೂ ಹೌದು. ಭಾರತೀಯ ಪುರುಷರ ಕ್ರಿಕೆಟ್‌ ತಂಡದಲ್ಲಿ ರವೀಂದ್ರ ಜಡೇಜಾ ಸ್ಟಾರ್ ಆಲ್‌ರೌಂಡರ್‌ ಆಗಿದ್ದು, ಈ ವರ್ಷದ ಏಷ್ಯಾ  ಕಪ್‌ ವೇಳೆ ಮೊಣಕಾಲು ಗಾಯದ ಕಾರಣದಿಂದ ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಕಪ್‌ನಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. 

ರಿವಾಬಾ ಜಡೇಜಾ ಶಿಕ್ಷಣದಲ್ಲಿ ಎಂಜಿನಿಯರ್‌ ಪದವಿ ಪಡೆದಿದ್ದು, ಈಕೆ ಕಾಂಗ್ರೆಸ್‌ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಕರಾಗಿದ್ದಾರೆ. 2016 ರಂದು ಈಕೆ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ರಜಪೂತ್‌ ಪರಂಪರೆ ಮತ್ತು ಮಾಜಿ ರಾಜವಂಶಸ್ಥೆಯೂ ಆಗಿರುವ ರಿವಾಬಾ, ಜಾಮ್ನಗರ - ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯ ರಾಜಕಾರಣಿಯೂ ಆಗಿದ್ದಾರೆ. 

ಇದನ್ನೂ ಓದಿ: ಗುಜರಾತ್ ಚುನಾವಣೆ: ಒಂದೇ ಕ್ಷೇತ್ರದಿಂದ ಕಣಕ್ಕಿಳಿದ ರವೀಂದ್ರ ಜಡೇಜಾ ಪತ್ನಿ, ಸೋದರಿ

ಇನ್ನು, ಟಿಕೆಟ್‌ ಘೋಷಣೆಗೂ ಮುನ್ನವೇ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದ ರಿವಾಬಾ ಜಡೇಜಾ, ಚುನಾವಣೆಯಲ್ಲಿ ಗೆಲ್ಲಲು ಪೂರ್ವ ತಯಾರಿಯನ್ನೂ ನಡೆಸಿದ್ದರು. ಈಗ ಟಿಕೆಟ್‌ ಖಚಿತವಾಗಿದ್ದು, ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಮತ್ತಷ್ಟು ಭರ್ಜರಿ ಪ್ರಚಾರ ನಡೆಸಬೇಕಿದೆ. 
 
ಕರ್ಣಿ ಸೇನಾದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದ ರಿವಾಬಾ ಜಡೇಜಾ, 2019 ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದರು. ಜಾಮ್ನಗರದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಮಾಧ್ಯಮ ಕಾರ್ಯಕ್ರಮದಲ್ಲಿ ರಿವಾಬಾ ಜಡೇಜಾ ಅವರನ್ನು ಜಾಮ್ನಗರ ದಕ್ಷಿಣ ಕ್ಷೇತ್ರದ ಶಾಸಕ ರಾಂಚೋ ಫಾಲ್ಡು ಹಾಗೂ ಜಾಮ್ನಗರ ಸಂಸದೆ ಪೂನಂಬೆನ್‌ ಮಾದಂ ಅವರು ಸ್ವಾಗತಿಸಿದ್ದರು.   

ಇದನ್ನೂ ಓದಿ: ಮಾಸ್ಕ್‌ ಧರಿಸಿಲ್ಲವೇಕೆಂದ ಪೊಲೀಸ್‌ ಜತೆ ರವೀಂದ್ರ ಜಡೇಜಾ ಪತ್ನಿ ವಾಗ್ವಾದ

Follow Us:
Download App:
  • android
  • ios