ಆಸ್ಪತ್ರೆ ಶವಾಗಾರದಲ್ಲಿ ಇಲಿಗಳ ದಾಳಿಯಿಂದ ವಿರೂಪಗೊಂಡ ಸರ್ಕಾರಿ ಅಧಿಕಾರಿ ಮೃತದೇಹ: ಕುಟುಂಬಸ್ಥರ ಆಕ್ರೋಶ
ಫ್ರೀಜರ್ ಕೆಲಸ ಮಾಡುತ್ತಿಲ್ಲ ಎಂದು ಅನಿಸಿದರೂ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಫ್ರೀಜರ್‌ನ ಬೀಗ ಮುರಿದಿರುವುದನ್ನು ಗಮನಿಸಿದ್ದೇವೆ ಎಂದು ವ್ಯಕ್ತಿಯ ಸಹೋದರ ಹೇಲಿಕೆ ನೀಡಿದ್ದಾರೆ.
ದೆಹ್ರಾಡೂನ್ (ಡಿಸೆಂಬರ್ 12, 2023): ಉತ್ತರಾಖಂಡ್‌ನ ಪೌರಿಯಲ್ಲಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ಕೊಠಡಿಯಲ್ಲಿ ಶೇಖರಿಸಿಡಲಾಗಿದ್ದ ವ್ಯಕ್ತಿಯೊಬ್ಬರ ದೇಹವು ಇಲಿಗಳಿಂದ ಭಾಗಶಃ ವಿರೂಪಗೊಂಡ ಸ್ಥಿತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದೆ. ಈ ಸಂಬಂಧ ಆಸ್ಪತ್ರೆ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನೌಗಾಂಖಾಲ್ ಗ್ರಾಮದಲ್ಲಿ ಚಮೋಲಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿ ರಾಹುಲ್ ಉಪ್ರೇತಿ ಶುಕ್ರವಾರ ಅಸ್ವಸ್ಥತೆಯಿಂದ ದೂರಿದ ನಂತರ ಹಠಾತ್ ನಿಧನರಾದರು. ನಂತರ ಅವರ ಕುಟುಂಬ ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆ ಹೋದರೆ ಮೃತದೇಹವೇ ವಿರೂಪಗೊಂಡಿದೆ.
ಇದನ್ನು ಓದಿ: ಕೊರೊನಾ ಕಾಲದಲ್ಲಿ ಬಡವರಿಗೆ ಹಂಚಲು ಕೊಟ್ಟಿದ್ದ ಅಕ್ಕಿ ಗೋದಾಮಲ್ಲಿ ಕೊಳೆಯುತ್ತಿದೆ!
ಶುಕ್ರವಾರ ರಾಹುಲ್ ಆರೋಗ್ಯ ಹಠಾತ್ ಹದಗೆಟ್ಟಾಗ, ಅವರ ಪತ್ನಿ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ದರು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಬಳಿಕ, ಕುಟುಂಬದವರು ಶನಿವಾರ ಪೌರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದರು.
ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ ನಂತರ, ಮನೆಯವರು ಬಾಗಿಲಿನ ಮುರಿದ ಬೀಗದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಫ್ರೀಜರ್‌ನಲ್ಲಿ ವಿವಿಧ ಶಂಕಿತ ಸಮಸ್ಯೆಗಳಿವೆ ಎಂದರು. ಫ್ರೀಜರ್ ಕೆಲಸ ಮಾಡುತ್ತಿಲ್ಲ ಎಂದು ಅನಿಸಿದರೂ ಏನೂ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಫ್ರೀಜರ್‌ನ ಬೀಗ ಮುರಿದಿರುವುದನ್ನು ಗಮನಿಸಿದ್ದೇವೆ ಎಂದು ವ್ಯಕ್ತಿಯ ಸಹೋದರ ನಿತಿನ್ ಉಪ್ರೇತಿ ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗೆ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೂ, ದೇಹವು ಸುರಕ್ಷಿತವಾಗಿರುತ್ತದೆ ಎಂದು ಭರವಸೆ ನೀಡಿದ್ದರು ಎಂದೂ ಹೇಳಿದ್ದಾರೆ.
ಬೆಂಗಳೂರು ವಿದ್ಯುತ್ ತಂತಿ ತುಳಿದು ಸಾವು ಪ್ರಕರಣ: ಇಲಿ ಮೇಲೆ ಆರೋಪ ಹೊರಿಸಿದ ಬೆಸ್ಕಾಂ
ಬಳಿಕ ಘಟನೆಗೆ ಪ್ರತಿಕ್ರಿಯೆಯಾಗಿ, ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (ACMO), ಪೌರಿ, ಡಾ. ರಮೇಶ್ ಕುಮಾರ್, ಮರಣೋತ್ತರ ಪರೀಕ್ಷೆ ಕೊಠಡಿಯ ಬಾಗಿಲು ದೋಷಪೂರಿತವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ದುರಸ್ತಿಗೆ ಸೂಚನೆಗಳ ಹೊರತಾಗಿಯೂ, ಯಾವುದೇ ಬಡಗಿ ಈ ಕಾರ್ಯವನ್ನು ಕೈಗೊಳ್ಳಲು ಸಿದ್ಧರಿಲ್ಲ ಎಂದು ಅವರು ಉಲ್ಲೇಖಿಸಿದ್ದು,ಇದು ಅಂತಿಮವಾಗಿ ಇಲಿಗಳಿಗೆ ಸುಲಭವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ.
ಅಲ್ಲದೆ, ಇಂತಹ ಭೀಕರ ಘಟನೆ ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಗಿಲು ಸರಿಪಡಿಸಲು ಶ್ರೀನಗರದಿಂದ ಬಡಗಿಗಳನ್ನು ಕರೆಸಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಇಲಿ ಸಮಸ್ಯೆಯನ್ನು ತೊಡೆದುಹಾಕಲು ಕೀಟ ನಿಯಂತ್ರಣ ಕ್ರಮಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ ಎಂದೂ ಉತ್ತರಾಖಂಡ್‌ನ ಪೌರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಮೇಶ್ ಕುಮಾರ್ ಭರವಸೆ ನೀಡಿದ್ದಾರೆ.
ರೈಲಿನ ಕಿಚನ್‌ನಲ್ಲಿ ಇಲಿಗಳ ಬಿಂದಾಸ್ ಆಟ: ಆಹಾರದ ಮೇಲೆಲ್ಲಾ ಓಡಾಟ: ವೀಡಿಯೋ