ಕೊರೊನಾ ಸಾಂಕ್ರಾಮಿಕ ವೇಳೆ ಬಡವರಿಗೆ ವಿತರಿಸಲು ಬಂದ ಆರೇಳು ಸಾವಿರ ಕೆಜಿ ಅಕ್ಕಿ ಗೋದಾಮುಗಳಲ್ಲಿ ಇಲಿ ಹೆಗ್ಗಣಗಳ ಪಾಲಾಗುವ ಜತೆ ಹುಳು ಬಿದ್ದು ಕೊಳೆಯುತ್ತಿದೆ. ನೆಲಮಂಗಲ ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಗೋದಾಮಿನಲ್ಲಿ ಕಳೆದ 2 ವರ್ಷಗಳಿಂದ ಗೋದಾಮಲ್ಲಿ ಅಕ್ಕಿ ಹಾಗೂ ಗೋಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮಿನಲ್ಲಿ ಕೊಳೆಯುವಂತಾಗಿದೆ.

ದಾಬಸ್‌ಪೇಟೆ (ನ.22) ಕೊರೊನಾ ಸಾಂಕ್ರಾಮಿಕ ವೇಳೆ ಬಡವರಿಗೆ ವಿತರಿಸಲು ಬಂದ ಆರೇಳು ಸಾವಿರ ಕೆಜಿ ಅಕ್ಕಿ ಗೋದಾಮುಗಳಲ್ಲಿ ಇಲಿ ಹೆಗ್ಗಣಗಳ ಪಾಲಾಗುವ ಜತೆ ಹುಳು ಬಿದ್ದು ಕೊಳೆಯುತ್ತಿದೆ. ನೆಲಮಂಗಲ ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಗೋದಾಮಿನಲ್ಲಿ ಕಳೆದ 2 ವರ್ಷಗಳಿಂದ ಗೋದಾಮಲ್ಲಿ ಅಕ್ಕಿ ಹಾಗೂ ಗೋಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮಿನಲ್ಲಿ ಕೊಳೆಯುವಂತಾಗಿದೆ.

ಉಳಿದ ಅಕ್ಕಿಗೂ ಸಮಸ್ಯೆ: ಈ ಅಕ್ಕಿ ಸಂಗ್ರಹಿಸಿಟ್ಟಿರುವ ಗೋದಾಮಿನಲ್ಲಿ ಹಾಸ್ಟೆಲ್ ಹಾಗೂ ಸರ್ಕಾರಿ ಶಾಲೆಗಳಿಗೆ ಹೋಗುವ ಅಕ್ಕಿಯನ್ನು ಸಂಗ್ರಹಿಸಿ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಗೋದಾಮು ಒಳಭಾಗದಲ್ಲಿ ಬಿಳಗಳಾಗಿ ನೂರಾರು ಹೆಗ್ಗಣ, ಇಲಿ, ಜಿರಳೆ ಹಾಗೂ ಹುಳಗಳು ಓಡಾಡುತ್ತಿವೆ. ಗೋದಾಮು ನಿರ್ವಹಣೆ ಮಾಡುವವರು ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ವಿದ್ಯುತ್‌ ಅಪಘಾತ ತಡೆಗೆ ಮಾರ್ಗಸೂಚಿಗೆ ಸಮಿತಿ; ಇಂಧನ ಇಲಾಖೆ ಆದೇಶ

ವಾಪಸ್ ಜನರಿಗೆ : 2 ವರ್ಷದಿಂದ ಹೆಗ್ಗಣಗಳ ಮಲ, ಮೂತ್ರಗಳಿಂದ ತುಂಬಿರುವ ಸಾವಿರಾರು ಕೆಜಿ ಅಕ್ಕಿಯನ್ನು ಇಲಾಖೆ ನಿಗಮದ ಗೋದಾಮಿಗೆ ವಾಪಸ್ ಕಳುಹಿಸುತ್ತೇವೆ ಎಂದು ಗೋದಾಮು ನಿರ್ವಹಣಾಧಿಕಾರಿಗಳು ಹೇಳುತ್ತಿದ್ದಾರೆ.

ಅಕ್ಕಿಗೆ ಹೊಣೆಯಾರು: ಕೊರೊನಾ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಬಂದ ಅಕ್ಕಿ ಅರ್ಜಿ ನೀಡಿದರೂ ಸ್ಪಂದನೆ ನೀಡಿಲ್ಲ ಎಂದು ಗೋಡಾನ್ ನಿರ್ವಹಣಾ ಅಧಿಕಾರಿ ಶಿವಕುಮಾರ್ ಹೇಳಿದರೇ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲ, ನಮಗೆ ಯಾವ ಅರ್ಜಿಯೇ ಬಂದಿಲ್ಲ ಎನ್ನುತ್ತಾರೆ.

ಸಚಿವರ ಜಿಲ್ಲೆಯಲ್ಲಿ ನಿರ್ಲಕ್ಷ್ಯ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪನವರು ನಮ್ಮ ಜಿಲ್ಲೆಯವರೇ ಆಗಿದ್ದು ರಾಜ್ಯದ ಅನೇಕ ಗೋದಾಮುಗಳಲ್ಲಿ ವ್ಯರ್ಥವಾಗುತ್ತಿರುವ ಅಕ್ಕಿಯ ಬಗ್ಗೆ ಗಮನವೇ ವಹಿಸದೇ ಇರುವುದು ವಿಪರ್ಯಾಸವಾಗಿದೆ.

ಯಾರೋ ಮಾಡಿದ ತಪ್ಪಿಗೆ ಎಚ್‌ಡಿಕೆ ಕ್ಷಮೆ ಕೇಳಿದ್ದಾರೆ; ಆದ್ರೆ ರೈತರ ಹಣ ತಿಂದು ಟಿಸಿ ಕೊಡದ ನೀವು ಕಳ್ಳರು; ಪ್ರಜ್ವಲ್ ರೇವಣ್ಣ

ಗೋದಾಮಿನಲ್ಲಿರುವುದು ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಅಕ್ಕಿ. ಅವರು ವಾಪಸ್‌ ಪಡೆಯದ ಕಾರಣ ಗೋದಾಮಿನಲ್ಲಿಯೇ ಉಳಿದುಕೊಂಡಿದ್ದು, ವಾಪಸ್ ಇಲಾಖೆಗೆ ನೀಡಲಾಗುತ್ತದೆ.

-ಶಿವಕುಮಾರ್, ಗೋದಾಮು ನಿರ್ವಹಣಾಧಿಕಾರಿ, ಆಹಾರ ಇಲಾಖೆ

ನಮ್ಮ ಇಲಾಖೆಗೆ ಸಂಬಂಧಿಸಿದ ಅಕ್ಕಿ ಅಲ್ಲ, ನಮಗೆ ಯಾವುದೇ ಅರ್ಜಿ, ನೋಟಿಸ್ ಬಂದಿಲ್ಲ, ಗೋದಾಮಿನ ತಪ್ಪನ್ನು ನಮ್ಮ ಇಲಾಖೆ ಮೇಲೆ ಹಾಕಿದ್ದಾರೆ.

-ವಾಣಿ, ಸಹಾಯಕ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ