Ratan Tata ಬಾಡಿಗಾರ್ಡ್ ಇಲ್ಲದೆ, ನ್ಯಾನೋ ಕಾರಿನಲ್ಲಿ ತಾಜ್ ಹೊಟೆಲ್‌ಗೆ ಬಂದ ರತನ್ ಟಾಟಾ,ಸರಳತೆಗೆ ಹಿಡಿದ ಕನ್ನಡಿ!

  • ಸರಳತಗೆ ಮತ್ತೊಂದು ಹೆಸರು ಕೈಗಾರಿಕೋದ್ಯಮಿ ರತನ್ ಟಾಟಾ
  • ಭಾರತದಲ್ಲಿ ಕ್ರಾಂತಿ ಮಾಡಿದ ಉದ್ಯಮಿ ರತನ್ ಟಾಟಾ
  • ಮುಂಬೈನ ತಾಜ್ ಹೊಟೆಲ್‌ಗೆ ನ್ಯಾನೋ ಕಾರಿನಲ್ಲಿ ಆಗಮನ
Ratan Tata visit Mumbai Taj Hotel in a Nano car without bodyguards people amazed by his simplicity ckm

ಮುಂಬೈ(ಮೇ.18): ರತನ್ ಟಾಟಾ. ಈ ಹೆಸರು ಕೇಳಿದಾಗಲೆ ಪುಳಕಿತರಾಗುತ್ತೇವೆ. ಕಾರಣ ರತನ್ ಟಾಟಾ ಅವರ ವ್ಯಕ್ತಿತ್ವ. ಶ್ರೀಮಂತ ಉದ್ಯಮಿ, ಹತ್ತು ಹಲವು ಕೈಗಾರಿಕೋದ್ಯಮವನ್ನು ಹುಟ್ಟುಹಾಕಿ ವಿಶ್ವದಲ್ಲೇ ವ್ಯವಾಹರ ನಡೆಸಿದ ದಿಗ್ಗಜ. ಭಾರತ ನಿರ್ಮಾಣದಲ್ಲಿ, ಭಾರತದ ಸಂಕಷ್ಟದಲ್ಲಿ ಕೈಜೋಡಿಸಿದ ಸಹೃದಯಿ ರತನ್ ಟಾಟಾ. ಆದರೆ ರತನ್ ಟಾಟಾ ಇಂದೀಗೂ ಅದೇ ಸರಳತೆ, ಅದೇ ಮಾನವೀಯತೆ. ಇದು ಮತ್ತೊಮ್ಮೆ ಸಾಬೀತಾಗಿದೆ. ಮುಂಬೈನಲ್ಲಿರುವ ತಮ್ಮದೆ ಮಾಲೀಕತ್ವದ ತಾಜ್ ಹೊಟೆಲ್‌ಗೆ ಪುಟ್ಟ ನ್ಯಾನೋ ಕಾರಿನಲ್ಲಿ ಆಗಮಿಸಿದ್ದಾರೆ. ಇಷ್ಟೇ ಅಲ್ಲ ಯಾವುದೇ ಭದ್ರತೆ ಇಲ್ಲದೆ ಆಗಮಿಸಿದ್ದಾರೆ.

ಟಾಟಾ ಮಾಲೀಕತ್ವದ ತಾಜ್ ಹೊಟೆಲ್‌ಗೆ ರತನ್ ಟಾಟಾ ತಮ್ಮಲ್ಲಿರುವ ನ್ಯಾನೋ ಕಾರಿನಲ್ಲಿ ಆಗಮಿಸಿದ್ದಾರೆ. ರತನ್ ಟಾಟಾರನ್ನು ಹೊಟೆಲ್ ಸಿಬ್ಬಂದಿಗಳು ಸ್ವಾಗತಿಸಿ ಕರೆದೊಯ್ದಿದ್ದಾರೆ. ಯಾವುದೇ ಭದ್ರತಾ ಅಧಿಕಾರಿಗಳು ಇಲ್ಲದೆ ರತನ್ ಟಾಟಾ ಸಿಬ್ಬಂದಿಗಳ ಜೊತೆ ಮುನ್ನಡೆದಿದ್ದಾರೆ.

AirIndia ಟಾಟಾ ಗ್ರೂಪ್‌ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ

ಇತ್ತೀಟೆಗೆ ರತನ್ ಟಾಟಾ ಅವರಿಗೆ ಎಲೆಕ್ಟ್ರಿಕ್ ನ್ಯಾನೋ ಕಾರನ್ನು ಹಸ್ತಾಂತರಿಸಲಾಗಿತ್ತು. ಟಾಟಾ ನ್ಯಾನೋ ಕಾರು ರತನ್ ಟಾಟಾ ಮತುವರ್ಜಿ ವಹಿಸಿ ಬಿಡುಗಡೆ ಮಾಡಿದ ಕಾರಾಗಿದೆ. ಭಾರತದ ಮಧ್ಯಮ ವರ್ಗದ ಕುಟುಂಬಗಳು ಸ್ಕೂಟರ್ ಮೇಲೆ ಮಕ್ಕಳು, ಪತ್ನಿ ಜೊತೆ ಪ್ರಯಾಣ, ಹಾಳು, ಗುಂಡಿ ಬಿದ್ದ ರಸ್ತಗಳಲ್ಲಿನ ಪ್ರಯಾಣ ತಪ್ಪಿಸಲು ರತನ್ ಟಾಟಾ ನ್ಯಾನೋ ಕಾರನ್ನು ಪರಿಚಯಿಸಿದ್ದರು. 1 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ನ್ಯಾನೋ ಕಾರನ್ನು ಪರಿಚಚಯಿಸಲಾಗಿತ್ತು. ಇದೇ ಕಾರಿನಲ್ಲಿ ರತನ್ ಟಾಟಾ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ರ್ಯಾಂಕ್ ಪಡೆದಿರುವ ತಮ್ಮದೇ ಸ್ಟಾರ್ ಹೊಟೆಲ್ ತಾಜ್‌ಗೆ ಆಗಮಿಸಿದ್ದಾರೆ. 

 

 

ಲೆಕ್ಟ್ರಿಕ್‌ ವಾಹನಗಳಿಗೆ ವಿವಿಧ ರೀತಿಯ ಸೇವೆ ನೀಡುವ ಟಾಟಾ ಸಮೂಹದ ‘ಎಲೆಕ್ಟ್ರಾ ಇವಿ’ ವಿಶೇಷವಾಗಿ ನಿರ್ಮಿಸಿದ ಎಲೆಕ್ಟ್ರಿಕ್‌ ಮಾದರಿ ಟಾಟಾ ನ್ಯಾನೋ ಕಾರನ್ನು ಗುರುವಾರ ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ರತನ್‌ ಟಾಟಾ ಅವರಿಗೆ ಹಸ್ತಾಂತರಿಸಿದೆ. ಇದು ಈಗಾಗಲೇ ಉತ್ಪಾದನೆ ಸ್ಥಗಿತಗೊಂಡಿರುವ ನ್ಯಾನೋ ಕಾರು ಎಲೆಕ್ಟ್ರಿಕ್‌ ಮಾದರಿಯಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದಾ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಈ ಕಾರು ನಾಲ್ಕು ಸೀಟುಗಳನ್ನು ಒಳಗೊಂಡಿದ್ದು, 160 ಕಿ.ಮೀ ವೇಗದವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್‌ ಪಾಲಿಮರ್‌ ಲಿಥಿಯಂ-ಅಯಾನ್‌ ಬ್ಯಾಟರಿಯ ಕಾರಾಗಿದೆ.

84 ವರ್ಷದ ರತನ್ ಟಾಟಾ ಇತ್ತೀಚೆಗೆ ನನ್ನ ಮುಂದಿನ ದಿನಗಳನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಮೂಲಕ ಟಾಟಾ ಸಮೂಹ ಸಂಸ್ಥೆ ಮತ್ತಷ್ಟು ಆಸ್ಪತ್ರೆ ಸೇರಿದಂತೆ ಆರೋಗ್ಯ ಸೇವೆಗೆ ಒತ್ತು ನೀಡಲಿದೆ. ನಾನು ನನ್ನ ಜೀವನದ ಕೊನೆಯ ವರ್ಷಗಳನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತೇನೆ’ ಎಂದು ಕೈಗಾರಿಕೋದ್ಯಮಿ ರತನ್‌ ಟಾಟಾ ಅವರು ಗುರುವಾರ ಹೇಳಿದ್ದಾರೆ. ಈ ಮೂಲಕ ಆಸ್ಪತ್ರೆಗಳ ಸ್ಥಾಪನೆಗೆ ಇನ್ನು ತಾವು ಆದ್ಯತೆ ನೀಡುವ ಇಂಗಿತ ವ್ಯಕ್ತಪಡಿಸಿದರು.

Ratan Tata biography: ರತನ್ ಟಾಟಾ ಜೀವನಚರಿತ್ರೆ ದಾಖಲೆ ಮೊತ್ತಕ್ಕೆ ಮಾರಾಟ!

ಅಸ್ಸಾಂ ಸರ್ಕಾರ ಮತ್ತು ಟಾಟಾ ಟ್ರಸ್ಟ್‌ಗಳ ಜಂಟಿ ಉದ್ಯಮವಾಗಿರುವ ಅಸ್ಸಾಂ ಕ್ಯಾನ್ಸರ್‌ ¶ೌಂಡೇಶನ್‌ ಅಡಿಯಲ್ಲಿ ನಿರ್ಮಿಸಲಾಗಿರುವ ಕ್ಯಾನ್ಸರ್‌ ಆಸ್ಪತ್ರೆಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಅಸ್ಸಾಂನ್ನು ಎಲ್ಲರಿಂದ ಗುರುತಿಸಲ್ಪಡುವ ರಾಜ್ಯವನ್ನಾಗಿ ಮಾಡಲು ಸರ್ಕಾರಗಳನ್ನು ಅವರು ಒತ್ತಾಯಿಸಿದರು. ಅಸ್ಸಾಂ ಕ್ಯಾನ್ಸರ್‌ ಕೇರ್‌ ಸೆಂಟರ್‌ ನಿರ್ಮಿಸಿರುವ 7 ಕ್ಯಾನ್ಸರ್‌ ಆಸ್ಪತ್ರೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಿದರು. ಈ ಸಂಸ್ಥೆ ರಾಜ್ಯಾದ್ಯಂತ 17 ಕ್ಯಾನ್ಸರ್‌ ಆಸ್ಪತ್ರೆಗಳನ್ನು ನಿರ್ಮಿಸುವ ಗುರಿ ಹೊಂದಿದೆ.
 

Latest Videos
Follow Us:
Download App:
  • android
  • ios