AirIndia ಟಾಟಾ ಗ್ರೂಪ್‌ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ!

* ಭಾರೀ ನಷ್ಟದಲ್ಲಿದ್ದ ಏರ್‌ ಇಂಡಿಯಾ ವಿಶ್ವಾಸಾರ್ಹತೆ ಉಳಿಸಲು ಟಾಟಾ ಗ್ರೂಪ್‌ನಿಂದ ಮಹತ್ವದ ಹೆಜ್ಜೆ

* AirIndia ಟಾಟಾ ಗ್ರೂಪ್‌ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ

* ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಸಿಬ್ಬಂದಿಗೆ ಮಾಲೀಕರಾಗುವ ಅವಕಾಶ

Tatas to offer ESOPs to Air India staff to boost productivity pod

ಮುಂಬೈ(ಏ.21): ಸರ್ಕಾರಿ ಸ್ವಾಮ್ಯದಲ್ಲಿದ್ದು, ಭಾರೀ ನಷ್ಟದಲ್ಲಿದ್ದ ದೇಶದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಟಾಟಾ ಗ್ರೂಪ್ ಕೈಗೆ ಬರುತ್ತಿದ್ದಂತೆಯೇ  ಅದರ ಹಣೆಬರಹವೇ ಬದಲಾಗಿದೆ, ಜೊತೆಗೆ ಉದ್ಯೋಗಿಗಳ ಭವಿಷ್ಯವೂ ಬದಲಾಗತೊಡಗಿದೆ. ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ತನ್ನ ಕಾರ್ಯವೈಖರಿಯನ್ನು ಬದಲಿಸುವುದಲ್ಲದೆ, ಉದ್ಯೋಗಿಗಳ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನಗಳ ಅಡಿಯಲ್ಲಿ, ಉದ್ಯೋಗಿಗಳಿಗೆ ಹೊಸ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆಗಳು ನಡೆಯುತ್ತಿವೆ.

ಏರ್ ಇಂಡಿಯಾ ಒಂದು ಕಾಲದಲ್ಲಿ ದೇಶದ ಅತಿ ದೊಡ್ಡ ಮತ್ತು ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾಗಿತ್ತು. ಆದರೆ ಕಳಪೆ ನಿರ್ವಹಣೆ, ಸರ್ಕಾರಿ ರೆಡ್ ಟೇಪ್ ಮತ್ತು ಖಾಸಗಿ ವಿಮಾನಯಾನ ಸಂಸ್ಥೆಗಳ ಪೈಪೋಟಿಯಿಂದಾಗಿ ಅದರ ಸ್ಥಿತಿಯು ಹದಗೆಟ್ಟಿದೆ ಎಂದು ವರದಿಯಾಗಿದೆ. ವಿಮಾನಯಾನ ಸಂಸ್ಥೆಯ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಅಗತ್ಯ ಸೇವೆಗಳಿಗೂ ಹಣವಿಲ್ಲದಂತಾಗಿದೆ. ಆದಾಯ ಕುಸಿತ ಮತ್ತು ಹೆಚ್ಚುತ್ತಿರುವ ಸಾಲದಿಂದಾಗಿ ನೌಕರರ ಹಿಂಬಡ್ತಿ ಪರಿಸ್ಥಿತಿ ಉಂಟಾಗಿದೆ.

esops(Employee stock ownership) ಸೌಲಭ್ಯ ಲಭ್ಯ

ಇದೀಗ ಟಾಟಾ ಸಮೂಹವು ವಿಮಾನಯಾನ ಸಂಸ್ಥೆಯ ಹಳೆಯ ವಿಶ್ವಾಸಾರ್ಹತೆಯನ್ನು ಮರಳಿ ತರಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ, ನೌಕರರ ನಂಬಿಕೆಯನ್ನು ಗೆಲ್ಲುವುದು ಅತ್ಯಂತ ಮುಖ್ಯವಾದ ವಿಷಯ. ಒಂದಾನೊಂದು ಕಾಲದಲ್ಲಿ ಕೆಲಸವೇ ಕಳೆದುಕೊಳ್ಳುವ ಭೀತಿಯಲ್ಲಿದ್ದ ವಿಮಾನಯಾನ ಸಂಸ್ಥೆಯ ಉದ್ಯೋಗಿಗಳಿಗೆ ಈಗ ಕಂಪನಿಯ ಮಾಲೀಕರಾಗುವ ಅವಕಾಶ ಸಿಗಲಿದೆ. ಏರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ESOP ಗಳ ಸೌಲಭ್ಯವನ್ನು ಒದಗಿಸಲಿದೆ. ಇದು ಕಂಪನಿಯ ಕಾರ್ಯ ದಕ್ಷತೆಯನ್ನು ಸುಧಾರಿಸುವುದಲ್ಲದೆ, ಕಂಪನಿಯ ಕಾರ್ಯಾಚರಣೆಯನ್ನು ಸುಧಾರಿಸುತ್ತದೆ. ಆದರೆ, ಯಾವ ಹಂತದ ನೌಕರರಿಗೆ ಇಎಸ್‌ಒಪಿ ಸೌಲಭ್ಯ ನೀಡಲಾಗುವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

esops ಎಂದರೇನು?

ESOP ಗಳು ಎಂದರೆ ಉದ್ಯೋಗಿ ಸ್ಟಾಕ್ ಆಯ್ಕೆಗಳು (ESOP). ಇದರ ಅಡಿಯಲ್ಲಿ, ಉದ್ಯೋಗಿಗೆ ಕಂಪನಿಯ ಷೇರುಗಳನ್ನು ಕ್ರಮೇಣ ಖರೀದಿಸಲು ಅವಕಾಶ ನೀಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಪ್ರತಿಫಲವಾಗಿದೆ. ಇದರ ಅಡಿಯಲ್ಲಿ ನೀಡಲಾಗುವ ಷೇರುಗಳ ಬೆಲೆ ಮಾರುಕಟ್ಟೆ ಬೆಲೆಗಿಂತ ತುಂಬಾ ಕಡಿಮೆ.

ಈ ಮೂಲಕ, ಏರ್ ಇಂಡಿಯಾ ಟಾಟಾ ಸಮೂಹದಲ್ಲಿ ESOP ಗಳನ್ನು ನೀಡುವ ಎರಡನೇ ಕಂಪನಿಯಾಗಲಿದೆ. 2018 ರಲ್ಲಿ, ಇದೇ ಸಮೂಹದ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ತನ್ನ ಉದ್ಯೋಗಿಗಳಿಗೆ Esops ಸೌಲಭ್ಯವನ್ನು ನೀಡಲು ಪ್ರಾರಂಭಿಸಿತು. ಇಸಾಪ್ಸ್ ಅನ್ನು ಮೊದಲು ಭಾರತದಲ್ಲಿ ಐಟಿ ಕಂಪನಿ ಇನ್ಫೋಸಿಸ್ ಪ್ರಾರಂಭಿಸಿತು.

ಡ್ಯೂಟಿ ಫ್ರೀ ಏರಿಯಾಗೆ ಹೋಗಬೇಡಿ: ಸಿಬ್ಬಂದಿಗೆ Air India ಸೂಚನೆ!

 

ವಿಮಾನ ಸೇವೆ ಸುಧಾರಣೆ ಮತ್ತು ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬ ತಪ್ಪಿಸಲು, ಇತ್ತೀಚೆಗೆ ಟಾಟಾ (Ratan Tata) ವಶವಾಗಿರುವ ಏರ್‌ ಇಂಡಿಯಾ (Air India) ವಿಮಾನ ಸಂಸ್ಥೆ ತನ್ನ ಕ್ಯಾಬಿನ್‌ ಸಿಬ್ಬಂದಿಗೆ (Cabin Crew) ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

‘ಡ್ಯೂಟಿ ಫ್ರೀ ಶಾಪ್‌ಗಳ ಭೇಟಿಗೆ ಹೋಗಲೇಬಾರದು. ಕಸ್ಟಮ್ಸ್‌ ಮತ್ತು ಭದ್ರತೆ ಪರಿಶೀಲನೆಯಲ್ಲಿ ಆಗುವ ಸಮಯ ವ್ಯರ್ಥ ತಪ್ಪಿಸಲು ಸಿಬ್ಬಂದಿ ಕಡಿಮೆ ಆಭರಣ ಧರಿಸಬೇಕು. ಅತಿಥಿಗಳು ವಿಮಾನದ ಪ್ರವೇಶಕ್ಕೆ ಮುನ್ನ ಸಿಬ್ಬಂದಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು’ ಎಂದು ಸೂಚಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಶಾಪಿಂಗ್‌ ಮಾಲ್‌ಗಳಲ್ಲಿ ರಿಯಾಯತಿ ದರದ ವಸ್ತುಗಳು ಸಿಗುತ್ತವೆ.

ಕೆಲಸದ ಅವಧಿಯಲ್ಲಿ ಈ ಸ್ಥಳಗಳಿಗೆ ಭೇಟಿ ನೀಡುವ ಸಿಬ್ಬಂದಿ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಅನ್ಯರಿಗೆ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಾರೆ ಎಂಬ ಆರೋಪವಿದೆ. ಅಲ್ಲದೆ ಇದರಿಂದ ವಿಮಾನ ಹಾರಾಟವು ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios