ರತನ್ ಟಾಟಾ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ಚೋಟು ಎಂದು ಕಮೆಂಟ್ ಮಾಡಿದ್ದರು. ಇತ್ತ ನೆಟ್ಟಿಗರು ಮಹಿಳೆಯನ್ನು ಹಿಗ್ಗಾಮುಗ್ಗಾ ಜಾಡಿಸಿದ್ದರು. ಈ ವೇಳೆ ಇದೇ ರತನ್ ಟಾಟಾ ಮಹಿಳೆಯ ನೆರವಿಗೆ ಧಾವಿಸಿದ್ದರು. ಈ ಘಟನೆ 2020ರಲ್ಲಿ ನಡೆದಿತ್ತು.

ಮುಂಬೈ(ಅ.10) ರತನ್ ಟಾಟಾ ಹೃದಯ, ಮನಸ್ಸಿನಲ್ಲಿ ದ್ವೇಷ ಎಳ್ಳಷ್ಟು ಇರಲಿಲ್ಲ. ಪ್ರತಿ ಮುಖಭಂಗ, ಹಿನ್ನಡೆಯನ್ನು ಅವಕಾಶವಾಗಿ ಪರಿವರ್ತಿಸಿಕೊಂಡು ಅದ್ವೀತಿಯ ಸಾಧನೆ ಮಾಡಿದ ಉದ್ಯಮಿ. ರತನ್ ಟಾಟಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ನಡುವೆ 2019ರಲ್ಲಿ ಸೋಶಿಯಲ್ ಮೀಡಿಯಾಗೆ ಕಾಲಿಟ್ಟಿದ್ದರು. ಸರಳ ವ್ಯಕ್ತಿತ್ವದ ರತನ್ ಟಾಟಾ ನೆಲದ ಮೇಲೆ ಕುಳಿತುಕೊಂಡ ನಗು ಮುಖದ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಮಹಿಳೆಯೊಬ್ಬರು ಚೋಟು ಎಂದು ಕಮೆಂಟ್ ಮಾಡಿದ್ದರು. ಈ ಮಹಿಳೆಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ರತನ್ ಟಾಟಾ ಸಾಧನೆ, ಅವರ ವಯಸ್ಸು, ಸಾಮಾಜಿಕ ಕಾರ್ಯಗಳ ಕುರಿತು ಮಹಿಳೆಗೆ ನೆನಪಿಸಿ ಹಿಗ್ಗಾ ಮುಗ್ಗಾ ಜಾಡಿಸಿದ್ದರು. ಈ ವೇಳೆ ಇದೇ ರತನ್ ಟಾಟಾ ಮಹಿಳೆಯ ನೆರವಿಗೆ ಧಾವಿಸಿದ್ದರು.

ಉದ್ಯಮ ಜಗತ್ತಿನಿಂದ ಕೊಂಚ ಹಿಂದೆ ಸರಿದ ಸಾಮಾಜಿಕ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ರತನ್ ಟಾಟಾ 2019ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸೋಶಿಯಲ್ ಮೀಡಯಾಗೆ ಕಾಲಿಟ್ಟಿದ್ದರು. ಈ ವೇಳೆ ರತನ್ ಟಾಟಾ ಸೋಶಿಯಲ್ ಮೀಡಿಯಾ ಆಗಮನಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತು. ಕೆಲವೇ ದಿನಗಳಲ್ಲಿ ರತನ್ ಟಾಟಾ ಸೋಶಿಯಲ್ ಮೀಡಿಯಾ ಖಾತೆ ಮಿಲಿಯನ್ ಫಾಲೋವರ್ಸ್ ಪಡೆದು ದಾಖಲೆ ಬರೆದಿತ್ತು.

ರತನ್ ಟಾಟಾ ಕೊನೆಯ ಹುಟ್ಟು ಹಬ್ಬದ ವಿಡಿಯೋ, ಆಚರಣೆಯಲ್ಲಿ ಸರಳತೆ ಮೆರೆದಿದ್ದ ಉದ್ಯಮಿ!

ಫೆಬ್ರವರಿ 11, 2020ರಲ್ಲಿ ರತನ್ ಟಾಟಾ ಸಂಭ್ರಮವನ್ನು ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ನೆಲದ ಮೇಲೆ ಕುಳಿತುಕೊಂಡ ನಗು ಮುಖದ ಫೋಟೋ ಪೋಸ್ಟ್ ಮಾಡಿ, ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಕುಟುಂಬ ಮೈಲಿಗಲ್ಲು ಸ್ಥಾಪಿಸಿರುವುದು ಸಂತೋಷವಾಗಿದೆ. ನಾನು ಸೋಶಿಯಲ್ ಮೀಡಿಯಾಗೆ ಸೇರುವಾಗಿ ಇದನ್ನು ನಿರೀಕ್ಷಿಸಿರಲಿಲ್ಲ. ಇಂಟರ್ನೆಟ್ ಮೂಲಕ ಎಲ್ಲರ ಸಂಪರ್ಕ, ನಿಮ್ಮಿಂದ ಹಲವು ವಿಷಗಳನ್ನು ಕಲಿತುಕೊಳ್ಳುವ ಅವಕಾಶ ಸಿಕ್ಕಿದೆ. ಇದು ನನ್ನನ್ನು ಹೆಚ್ಚು ಖುಷಿ ನೀಡಿದೆ. ಹೀಗೆ ಜೊತೆಯಾಗಿ ಸಾಗೋಣ ಎಂದು ರತನ್ ಟಾಟಾ ಪೋಸ್ಟ್ ಮಾಡಿದ್ದರು.

View post on Instagram

ರತನ್ ಟಾಟಾ ಅಭಿಮಾನಿಗಳು ಸೇರಿದಂತೆ ಕೋಟ್ಯಾಂತರ ಭಾರತೀಯರು ರತನ್ ಟಾಟಾಗೆ ಸೋಶಿಯಲ್ ಮೀಡಯಾ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಈ ವೇಳೆ ಮಹಿಳೆಯೊಬ್ಬರು ಅಭಿನಂದನೆಗಳು ಚೋಟು(ಕುಳ್ಳ) ಎಂದು ಕಮೆಂಟ್ ಮಾಡಿದ್ದರು. ತಕ್ಷಣವೇ ನೆಟ್ಟಿಗರು ಮಹಿಳೆಯ ಜಾಡಿಸಿದ್ದರು. ರತನ್ ಟಾಟಾ ಸಾಧನೆ ಬಗ್ಗೆ ಏನು ಗೊತ್ತಿದೆ. ಅವರ ಅನುಭವ, ವಯಸ್ಸು, ಅವರಿಗಿರುವ ಗೌರವ ನಿನಗೆ ಗೊತ್ತೆ? ಎಂದು ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ರತನ್ ಟಾಟಾ ಮತ್ತೆ ಸೋಶಿಯಲ್ ಮೀಡಿಯಾ ಮೂಲಕ ವಿಶೇಷ ಮನವಿ ಮಾಡಿದ್ದರು.

ರತನ್ ಟಾಟಾ ಮುದ್ದಿನ ಸಾಕು ನಾಯಿಯಿಂದ ಅಂತಿಮ ದರ್ಶನ, ಮನಕಲುಕಿದ ದೃಶ್ಯ!

ಪ್ರತಿಯೊಬ್ಬರ ಒಳಗೆ ಒಬ್ಬ ಮಗುವಿರುತ್ತೆ. ದಯವಿಟ್ಟು ಈ ಮಹಿಳೆಯನ್ನು ಗೌರವಿಸಿ ಎಂದು ಪೋಸ್ಟ್ ಮಾಡಿದ್ದರು. ರತನ್ ಟಾಟಾ ಪೋಸ್ಟ್ ಮಾಡುತ್ತಿದ್ದಂತೆ ಮಹಿಳೆ ವಿರುದ್ದ ಹರಿದು ಬರುತ್ತಿದ್ದ ಟ್ರೋಲ್, ಆಕ್ರೋಶ ತಕ್ಷಣವೇ ನಿಂತಿತ್ತು. ಇದು ರತನ್ ಟಾಟಾ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ತನ್ನ ಟ್ರೋಲ್ ಮಾಡಿದವರು ಅಥವಾ ಹೀಯಾಳಿಸಿದವರ ಬೆಂಬಲ ನಿಲ್ಲುವ, ಅವರ ಸಂಕಷ್ಟಕ್ಕೆ ಮಿಡಿಯು ಏಕೈಕ ವ್ಯಕ್ತಿ ರತನ್ ಟಾಟಾ ಎಂದು ಹಲವರು ಕಮೆಂಟ್ ಮಾಡಿದ್ದರು