Viral Video: ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಅಪರೂಪದ ಕರಿ ಚಿರತೆ
ಕಪ್ಪು ಚಿರತೆಯೊಂದು ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ನೆಟ್ಟಿಗರು ಇದನ್ನು ಕೊಂಡಾಡಿದ್ದಾರೆ.
ಮೃಗಾಲಯ, ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಾಣಿಸಿಕೊಂಡ ಅಪರೂಪದ ಕಾಡು ಪ್ರಾಣಿಗಳ ಫೋಟೋ, ವಿಡಿಯೋಗಳನ್ನು ಜನರು ಸಫಾರಿಗೆ ಹೋದಾಗ ತೆಗೆಯುತ್ತಾರೆ. ಅಲ್ಲದೆ, ಅಪರೂಪಕ್ಕೆ ಕಾಣಸಿಗುವ ಪ್ರಾಣಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್ ಮಾಡಲಾಗುತ್ತದೆ. ಇದೇ ರೀತಿ ಇತ್ತೀಚೆಗೆ ಮಧ್ಯ ಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಟ್ವಿಟ್ಟರ್ ಅಧಿಕೃತ ಹ್ಯಾಂಡಲ್‌ನಲ್ಲಿ ಇತ್ತೀಚೆಗೆ ಈ ಪೊಸ್ಟ್ ಅನ್ನು ಶೇರ್ ಮಾಡಲಾಗಿತ್ತು. ಕಪ್ಪು ಪ್ಯಾಂಥರ್ ಪೆಂಚ್ ಫಾರೆವರ್. ವಿಶ್ವದೆಲ್ಲೆಡೆ ನೀವು ಇದನ್ನು ನೋಡಲು ತಿಂಗಳುಗಳ ಕಾಲ ಹಿಡಿಯುತ್ತದೆ, ಒಮ್ಮೊಮ್ಮೆ ಅಪರೂಪದ ಪ್ರಾಣಿಗಳನ್ನು ನೋಡಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ, ಆದರೆ ಪೆಂಚ್‌ನಲ್ಲಿ ನೀವು ನೈಸರ್ಗಿಕ ಪ್ರಪಂಚದ ಅದ್ಭುತಗಳನ್ನು ಹೆಚ್ಚಾಗಿ ವೀಕ್ಷಿಸಬಹುದು." ಎಂದು ಅವರು ಟ್ವೀಟ್ ಮಾಡಿದ್ದಾರೆ. ಸಫಾರಿಯಲ್ಲಿದ್ದ ಜನರು ತಮ್ಮ ವಾಹನಗಳನ್ನು ನಿಲ್ಲಿಸುವ ಮೂಲಕ ದೂರದಿಂದ ವೀಕ್ಷಿಸುತ್ತಿರುವಾಗ ಕಪ್ಪು ಪ್ಯಾಂಥರ್ ರಸ್ತೆ ದಾಟುತ್ತಿರುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ. ಭವ್ಯವಾದ ದೊಡ್ಡ ಬೆಕ್ಕಿನ ನೋಟವು ಕಣ್ಣಿಗೆ ಕಾಣದ ಚಮತ್ಕಾರವಾಗಿತ್ತು ಎಂದು ಅಲ್ಲಿದ್ದವರ ದಿಗ್ಭ್ರಮೆಗೊಂಡ ಮೌನವು ದೃಢೀಕರಿಸುತ್ತದೆ.
ಪ್ರೊಫೆಸರ್‌ಗೆ ವಿವಿ ಕ್ಯಾಂಪಸ್‌ನಲ್ಲಿ ಪತ್ನಿಯಿಂದ ಚಪ್ಪಲಿಯಲ್ಲಿ ಥಳಿತ..!
ಈ ವೈರಲ್ ವಿಡಿಯೋವನ್ನು ಹಂಚಿಕೊಂಡಾಗಿನಿಂದ 20,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಇದುವರೆಗೆ ನೂರಾರು ಬಳಕೆದಾರರು ಈ ಪೋಸ್ಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಇದನ್ನು ಮೋಗ್ಲಿಗೆ ಸಂಬಂಧ ಕಲ್ಪಿಸಿದ್ದು, ಮತ್ತು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ "ಬಗಿರಾ ಈಸ್ ಬ್ಯಾಕ್" ಎಂದು ಬರೆದಿದ್ದಾರೆ. ಅಲ್ಲದೆ, "ಓಹ್... ಹಗಲಿನಲ್ಲಿ ಅಪರೂಪದ ದೃಶ್ಯ" ಎಂದು ಎರಡನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಹಾಗೂ, ಪೋಸ್ಟ್ ಅನ್ನು ಹಂಚಿಕೊಳ್ಳುವಾಗ "ನೋಡಲು ಒಂದು ದೃಶ್ಯವಾಗಿರಬೇಕು" ಎಂದು ಮೂರನೇ ಬಳಕೆದಾರರು ಬರೆದಿದ್ದಾರೆ.
ಇನ್ನು, ಕೆಲವರು 2019 ರಲ್ಲಿ ಕಬಿನಿಯಲ್ಲಿ ಕಪ್ಪು ಚಿರತೆ ಹಾಗೂ ಚಿರತೆ ಎರಡೂ ಒಂದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋವನ್ನೂ ಈ ವೈರಲ್ ವಿಡಿಯೋಗೆ ಕಮೆಂಟ್ ಮಾಡುವ ಮೂಲಕ ಪೋಸ್ಟ್ ಮಾಡಿದ್ದಾರೆ. ಇದೇ ರೀತಿ, ವಿವಿಧೆಡೆ ಕಾಣಿಸಿಕೊಂಡ ಕಪ್ಪು ಚಿರತೆಯ ಫೋಟೋ, ವಿಡಿಯೋಗಳನ್ನು ಕೆಲವರು ಹಂಚಿಕೊಂಡಿದ್ದಾರೆ. ಇನ್ನು ಕಲೆ ಬಳಕೆದಾರರು ಮೋಗ್ಲಿ ಕಾರ್ಟೂನ್‌ನ ಬಘೀರನ ಚಿತ್ರವನ್ನೂ ಶೇರ್ ಮಾಡಿಕೊಂಡಿದ್ದಾರೆ. ಇದೇ ರೀತಿ, ನಾನೂ ಸಹ ಕರಿ ಚಿರತೆಯನ್ನು ನೋಡಬೇಕೆಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಹಾಗೆ, ಹಲವರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಮೊಸಳೆ: ಭಯಾನಕ ದೃಶ್ಯ ನೋಡಿ ಬೆಚ್ಚಿಬಿದ್ದ ನೆಟ್ಟಿಗರು..!
ಇತ್ತೀಚೆಗೆ ಜಾಗ್ವಾರ್ ನದಿಯ ದಂಡೆಯಲ್ಲಿ ಮೊಸಳೆಯನ್ನು ಬೇಟೆಯಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಫಿಗೆನ್ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋಲ್ಲಿ, ಜಾಗ್ವಾರ್ ತನ್ನ ಬೇಟೆಯ ತಂತ್ರವನ್ನು ಬಳಸಿಕೊಂಡು ಮೊಸಳೆ ಸಮೀಪಿಸುತ್ತಿರುವುದನ್ನು ಕಾಣಬಹುದು. ಜಾಗ್ವಾರ್ ಮೊದಲು ನದಿಯ ಬಳಿಯ ಕೊಂಬೆಗಳು ಮತ್ತು ಪೊದೆಗಳ ನಡುವೆ ಅಡಗಿಕೊಂಡಿದ್ದು, ಮೊಸಳೆಯ ಮೇಲೆ ಸಂಪೂರ್ಣ ಗಮನವನ್ನು ಹೊಂದಿದೆ. ನಂತರ ಅದು ನೀರಿನಲ್ಲಿ ತೇಲುತ್ತಿರುವ ಮೊಸಳೆಯ ಮೇಲೆ ಹಾರಿ ಅದರ ಮೇಲೆ ದಾಳಿ ಮಾಡುತ್ತದೆ. ವಿಡಿಯೋ ಹಂಚಿಕೊಂಡಾಗಿನಿಂದ ಇದು 2.6 ಮಿಲಿಯನ್ ವೀಕ್ಷಣೆಗಳನ್ನು ಮತ್ತು 27,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಸುಮಾರು 4,800 ಬಳಕೆದಾರರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಮರು-ಹಂಚಿಕೊಂಡಿದ್ದಾರೆ.