ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್‌ ಪ್ರೊಫೆಸರ್‌ ಒಬ್ಬರಿಗೆ ಪತ್ನಿಯೇ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಅಸಿಸ್ಟೆಂಟ್‌ ಪ್ರೊಫೆಸರ್‌ ಒಬ್ಬರಿಗೆ ಅವರ ಚೇಂಬರ್‌ನೊಳಗೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ರೀತಿ ಥಳಿತಕ್ಕೊಳಗಾದವರನ್ನು ಬರ್ಹಾಂಪುರ ವಿಶ್ವವಿದ್ಯಾಲಯದ ಇಂಗ್ಲೀಷ್‌ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಅನಿಲ್‌ ಕುಮಾರ್ ಟಿರಿಯಾ ಎಂದು ತಿಳಿದುಬಂದಿದೆ. ಕಳೆದ ರಾತ್ರಿಯಿಂದ ಈ ವಿಡಿಯೋ ವೈರಲ್‌ ಆಗುತ್ತಿದೆ ಎಂದು ತಿಳಿದುಬಂದಿದೆ. 

ಈ ರೀತಿ ಹೊಡೆದಿರುವುದಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲವಾದರೂ, ಆದರೆ ಅಸಿಸ್ಟೆಂಟ್‌ ಪ್ರೊಫೆಸರ್‌ಗೆ ಚಪ್ಪಲಿಯಲ್ಲಿ ಯರ್ರಾಬಿರ್ರಿ ಹೊಡೆದಿರುವುದು ಅವರ ಪತ್ನಿ ಎಂದು ವರದಿಗಳು ಹೇಳುತ್ತಿವೆ. ಶನಿವಾರ ಬೆಳಗ್ಗೆ 11. 30 ರ ವೇಳೆಗೆ ಅಸಿಸ್ಟೆಂಟ್‌ ಪ್ರೊಫೆಸರ್‌ ತನ್ನ ಚೇಂಬರ್‌ನೊಳಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯದ ಪತಿ ಇದ್ದ ಕೊಠಡಿಗೆ ಆಕಸ್ಮಿಕವಾಗಿ ಬಂದ ಪತ್ನಿ ಇದ್ದಕ್ಕಿದ್ದಂತೆ ಆ ಕೊಠಡಿಯನ್ನು ಲಾಕ್‌ ಮಾಡಿಕೊಂಡಿದ್ದಾರೆ. ಅಲ್ಲದೆ, ಬಂದ ತಕ್ಷಣವೇ ಜೋರಾಗಿ ಕಿರುಚಲು ಆರಂಭಿಸಿದ್ದು, ಹಾಗೂ ತನ್ನ ಚಪ್ಪಲಿಯಲ್ಲಿ ಹೊಡೆಯಲು ಆರಂಭಿಸಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 

ವೈದ್ಯನ ಮೇಲೆ ಸಿಎಂ ಪುತ್ರಿಯಿಂದ ಹಲ್ಲೆ: ಕ್ಷಮೆಯಾಚಿಸಿದ ಸಿಎಂ: ವೈದ್ಯರಿಂದ ಪ್ರತಿಭಟನೆ

Scroll to load tweet…

ಆಕೆ, ಪತಿಗೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದೂ ಹೇಳಿ, ನಂತರ ಪತ್ನಿ ಚಪ್ಪಲಿಯಿಂದ ಮನಬಂದಂತೆ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಕೆಲ ಸಮಯದ ನಂತರ ಅಸಿಸ್ಟೆಂಟ್‌ ಪ್ರೊಫೆಸರ್‌ ತನ್ನ ಪತ್ನಿ ಕೈಯಲ್ಲಿದ್ದ ಚಪ್ಪಲಿಯನ್ನು ಕಿತ್ತುಕೊಂಡು ಬಿಸಾಕಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನು, ಚೇಂಬರ್‌ನೊಳಗೆ ಶಬ್ದ ಕೇಳಿ ಬಂದ ಬೆನ್ನಲ್ಲೇ ವಿವಿಯ ಕೆಲ ಸಿಬ್ಬಂದಿ ಅಲ್ಲಿಗೆ ತೆರಳಿದ್ದು, ಇಡೀ ಘಟನೆಗೆ ಸಾಕ್ಷಿಯಾಗಿದ್ದಾರೆ. ಅಲ್ಲದೆ, ಬಾಗಿಲು ತೆಗೆಯುವಂತೆ ಅವರು ಮಹಿಳೆಯನ್ನೂ ಕೇಳಿಕೊಂಡಿದ್ದಾರೆ. ಆದರೆ, ಆಕೆ ಒಪ್ಪದಿದ್ದಾಗ, ಅಸಿಸ್ಟೆಂಟ್‌ ಪ್ರೊಫೆಸರ್‌ ಅವರನ್ನು ರಕ್ಷಿಸಲು ವಿವಿಯ ಭದ್ರತಾ ಸಿಬ್ಬಂದಿಯನ್ನು ಕರೆದಿದ್ದಾರೆ. ನಂತರ ಕೆಲ ಪ್ರೊಫೆಸರ್‌ಗಳು ಹಾಗೂ ಇತರೆ ಸಿಬ್ಬಂದಿ ಮಹಿಳೆಯನ್ನು ಮನವಿ ಮಾಡಿದ ನಂತರ ಕೆಲ ಸಮಯದ ನಂತರ ಮಹಿಳೆ ಬಾಗಿಲು ತೆರೆದಿದ್ದಾರೆ ಎಂದು ತಿಳಿದುಬಂದಿದೆ. 

ಅಲ್ಲದೆ, ವಿವಿಯ ಸಿಬ್ಬಂದಿಗೆ ಅಸಿಸ್ಟೆಂಟ್‌ ಪ್ರೊಫೆಸರ್‌ ಮೇಲೆ ಚಪ್ಪಲಿಯಲ್ಲಿ ಥಳಿಸುತ್ತಿದ್ದ ಮಹಿಳೆ ಅವರ ಪತ್ನಿ ಎಂಬ ಬಗ್ಗೆ ಅರಿವಿರಲಿಲ್ಲ ಎಂದೂ ಮೂಲಗಳು ತಿಳಿಸಿವೆ. ನಂತರ, ಅವರು ದಂಪತಿಯನ್ನು ಪುಸಲಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದೂ ಹೇಳಲಾಗಿದೆ. ಒಡಿಶಾದ ಬರ್ಹಾಂಪುರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಈ ಘಟನೆ ನಡೆದ ಕಾರಣ ಇಡೀ ವಿವಿಯೇ ಕೆಲ ಕಾಲ ಬೆಚ್ಚಿ ಬಿದ್ದಿತ್ತು ಹಾಗೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಪತಿ - ಪತ್ನಿ ನಡುವಿನ ಜಗಳವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಪೊಲೀಸ್‌ ವ್ಯಾನ್‌ನಲ್ಲೇ ಕೊಲೆ ಆರೋಪಿ ಕೇಕ್‌ ಕಟ್‌ ಮಾಡಿ ಹುಟ್ಟುಹಬ್ಬ ಆಚರಣೆ

ಒಡಿಶಾದ ಖ್ಯಾತ ವಿವಿಗಳಲ್ಲೊಂದಾದ ಬರ್ಹಾಂಪುರ ವಿಶ್ವವಿದ್ಯಾಲಯದಲ್ಲಿ ಕೆಲ ಪ್ರೊಫೆಸರ್‌ಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸಹ ಕೇಳಿಬಂದಿವೆ. ಇತ್ತೀಚೆಗೆ ಒಡಿಯಾ ಪ್ರೊಫೆಸರ್‌ ಸದಾನಂದ್‌ ನಾಯಕ್ ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಸ್ಥಳೀಯ ಟಿವಿ ಮಾಧ್ಯಮದಲ್ಲೂ ಈ ಘಟನೆ ಬಗ್ಗೆ ಹೇಳಿಕೊಂಡಿದ್ದಳು. ಇದೇ ರೀತಿ, ಇತಿಹಾಸ ವಿಭಾಗದ ಪ್ರೊಫೆಸರ್‌ ವಿರುದ್ಧ ಹಾಗೂ ಇಂಗ್ಲೀಷ್‌ ಪ್ರೊಫೆಸರ್‌ ವಿರುದ್ಧವೂ ಇದೇ ರೀತಿ ಆರೋಪ ಕೇಳಿಬಂದಿದೆ.