2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣಕ್ಕೂ ಕೆಲವೇ ದಿನಗಳ ಮೊದಲು ದೆಹಲಿಯಲ್ಲೇ 19 ವರ್ಷದ ಯುವತಿ ಮೇಲೆ ನಡೆದಿದ್ದ ಮತ್ತೊಂದು ಭೀಕರ ಅಪಹರಣ, ಅತ್ಯಾಚಾರ, ದಾರುಣ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ದೋಷಿಗಳನ್ನು ಸುಪ್ರೀಂಕೋರ್ಟ್‌   ಖುಲಾಸೆ ಮಾಡಿದೆ.

ನವದೆಹಲಿ: 2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣಕ್ಕೂ ಕೆಲವೇ ದಿನಗಳ ಮೊದಲು ದೆಹಲಿಯಲ್ಲೇ 19 ವರ್ಷದ ಯುವತಿ ಮೇಲೆ ನಡೆದಿದ್ದ ಮತ್ತೊಂದು ಭೀಕರ ಅಪಹರಣ, ಅತ್ಯಾಚಾರ, ದಾರುಣ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ದೋಷಿಗಳನ್ನು ಸುಪ್ರೀಂಕೋರ್ಟ್‌ ಖುಲಾಸೆ ಮಾಡಿದೆ. ಕರ್ನಾಟಕ ಮೂಲದ ವಿಕೃತಕಾಮಿ ಉಮೇಶ್‌ ರೆಡ್ಡಿ ಬಿಡುಗಡೆ ಆದೇಶ ಹೊರಬಿದ್ದ 3 ದಿನದಲ್ಲೇ ಮತ್ತೊಂದು ಭೀಕರ ಪ್ರಕರಣದಲ್ಲಿ ಅಂಥದ್ದೇ ತೀರ್ಪು ಬಂದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಮೂವರೂ ದೋಷಿಗಳಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸುವ ವೇಳೆ ದೆಹಲಿ ಹೈಕೋರ್ಟ್‌,(Delhi High Court) ಇವರನ್ನು ಬೀದಿಯಲ್ಲಿ ಬೇಟೆಗಾಗಿ ಕಾದಿರುವ ಪರಭಕ್ಷಕರು (predators) ಎಂದು ಕಟು ನುಡಿಗಳಲ್ಲಿ ಟೀಕಿಸಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ (Chief Justice)ಯು.ಯು.ಲಲಿತ್‌ (U.U.Lalit), ನ್ಯಾ.ಎಸ್‌.ರವೀಂದ್ರ ಭಟ್‌ (S.Ravindrabhat) ಮತ್ತ ನ್ಯಾ. ಬೇಲಾ ಎಂ.ತ್ರಿವೇದಿ (Bela M. Trivedi) ನೇತೃತ್ವದ ಸುಪ್ರೀಂಕೋರ್ಟ್‌ ನ್ಯಾಯಪೀಠ ಈಗ ಹೈಕೋರ್ಟ್‌ ಆದೇಶ ರದ್ದು ಮಾಡಿದೆ. ಈ ತೀರ್ಪಿನ ಬಗ್ಗೆ ಸಂತ್ರಸ್ತ ಯುವತಿಯ ಪೋಷಕರು ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ.

ವಿಕೃತ ಕಾಮಿಗೆ ಕನಿಕರ ಬೇಡ, ಉಮೇಶ್‌ ರೆಡ್ಡಿ ಈಗಲೇ ಗಲ್ಲಿಗೇರಿಸಿ: ಸಂತ್ರಸ್ತೆ ಪುತ್ರ

ಏನಿದು ಪ್ರಕರಣ?:

ಉತ್ತರಾಖಂಡದ (Uttarakhand) ಮೂಲದ 19 ವರ್ಷದ ಯುವತಿ ಕೆಲಸ ಮುಗಿಸಿ ದೆಹಲಿಯ ಚಾವಾಲಾ (Chawala area) ಪ್ರದೇಶದಲ್ಲಿನ ಮನೆಗೆ ಬರುವ ವೇಳೆ ರವಿಕುಮಾರ್‌ (Ravikumar), ರಾಹುಲ್‌ (Rahul), ವಿನೋದ್‌ (Vinod) ಎಂಬ ಮೂವರು ಕಾಮಾಂಧರು ನೆರೆಯ ಹರ್ಯಾಣ ರೆವಾರಿ (Rewari) ಜಿಲ್ಲೆಗೆ ಅಪಹರಣ ಮಾಡಿ, ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಕಣ್ಣುಗಳಿಗೆ ಆ್ಯಸಿಡ್‌ ಹಾಕಿ, ಗುಪ್ತಾಂಗಕ್ಕೆ ಒಡೆದ ಬಾಟಲಿ ಚೂರು, ಕಬ್ಬಿಣದ ತುಂಡುಗಳನ್ನು ತೂರಿಸಿ ಆಕೆಯನ್ನು ಹಾಗೆಯೇ ಸಾಸಿವೆ ಹೊಲದಲ್ಲಿ ಸಾಯಲು ಬಿಟ್ಟಿದ್ದರು.

ಬಳಿಕ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೆಹಲಿಯ ನಜಾಫ್‌ಗಢದಲ್ಲಿ(Najafgarh) ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಆರೋಪಿಗಳ ಪೈಕಿ ಒಬ್ಬನ ಪ್ರೇಮದ ಪ್ರಸ್ತಾಪವನ್ನು ಯುವತಿ ತಿರಸ್ಕರಿಸಿದ್ದಕ್ಕೆ ಆತ ತನ್ನ ಸ್ನೇಹಿತರ ಜೊತೆಗೂಡಿ ಈ ಕೃತ್ಯ ಎಸಗಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು. ವಿಚಾರಣೆ ಬಳಿಕ ನ್ಯಾಯಾಲಯ ಮೂವರಿಗೂ 2014ರಲ್ಲಿ ಗಲ್ಲು ಶಿಕ್ಷೆ ನೀಡಿತ್ತು. ಬಳಿಕ ದೆಹಲಿ ಹೈಕೋರ್ಚ್‌ ಕೂಡಾ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು.

Umesh Reddy: ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಈ ತೀರ್ಪನ್ನು ದೋಷಿಗಳು ಸುಪ್ರೀಂಕೋರ್ಚ್‌ನಲ್ಲಿ ಪ್ರಶ್ನಿಸಿದ್ದರು. ದೋಷಿಗಳ ವಯಸ್ಸು, ಅವರ ಕೌಟುಂಬಿಕ ಹಿನ್ನೆಲೆ ಮತ್ತು ಕ್ರಿಮಿನಲ್‌ ಹಿನ್ನೆಲೆ ಇಲ್ಲದೇ ಇರುವುದನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣ ಕಡಿತ ಮಾಡಬೇಕು ಎಂದು ಕೋರಿದ್ದರು.

ಪೋಷಕರ ಆಕ್ರೋಶ:

ತೀರ್ಪಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಯುವತಿಯ ಪೋಷಕರು ‘ನಾವು ನ್ಯಾಯ ಕೋರಿ ಇಲ್ಲಿಗೆ ಬಂದಿದ್ದೆವು. ಆದರೆ ಇದು ಕುರುಡು ನ್ಯಾಯಾಂಗ ವ್ಯವಸ್ಥೆ. ನಾವು 12 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ದೋಷಿಗಳು ಕೋರ್ಚ್‌ನಲ್ಲೇ ನಮಗೆ ಬೆದರಿಕೆ ಹಾಕುತ್ತಿದ್ದರು. ಇದಕ್ಕೆ ನಾವು ಹೆದರುವುದಿಲ್ಲ. ನಮ್ಮ ಕಾನೂನು ಹೋರಾಟ ಮುಂದುವರೆಸಲಿದ್ದೇವೆ’ಎಂದು ಹೇಳಿದ್ದಾರೆ.