ಭಾರತದಲ್ಲಿ ಮೊದಲ ವಿಶ್ವದರ್ಜೆ ರೈಲುನಿಲ್ದಾಣ, ಫ್ಯಾನ್ಸ್ ಜೊತೆ ಚಿತ್ರ ವೀಕ್ಷಿಸಿದ ಶಿವಣ್ಣ; ನ.14ರ ಟಾಪ್ 10 ಸುದ್ದಿ!

ಭಾರತದ ಮೊದಲ ವಿಶ್ವದರ್ಜೆ ರೈಲು ನಿಲ್ದಾಣವನ್ನು ನಾಳೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಟ್‌ಕಾಯಿನ್ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲ. ಟಿ20 ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವರಾಜ್ ಕುಮಾರ್, ದೆಹಲಿ ಪರಿಸ್ಥಿತಿ ಗಂಭೀರ ಸೇರಿದಂತೆ ನವೆಂಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Rani Kamlapati first world class railway station to Shivarajkumar top 10 News of November 14 ckm

World Class Railway Station : ಮೊದಲ ವಿಶ್ವದರ್ಜೆ ರೈಲುನಿಲ್ದಾಣ ನ.15ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ

Rani Kamlapati first world class railway station to Shivarajkumar top 10 News of November 14 ckm

ಮಧ್ಯಪ್ರದೇಶದ ಭೋಪಾಲದಲ್ಲಿರುವ ಹಬೀಬ್‌ಗಂಜ್ ರೈಲು ನಿಲ್ದಾಣ ಇದೀಗ ರಾಣಿ ಕಮಲಾಪತಿ ರೈಲು ನಿಲ್ದಾಣವಾಗಿ(Rani Kamlapati Railway Station) ಪುನರ್ ಅಭಿವೃದ್ಧಿಪಡಿಸಲಾಗಿದೆ. ಅತ್ಯಾಧುನಿಕ ಹಾಗೂ ಮೇಲ್ದರ್ಜೆಗೆ ಏರಿಸಿರುವ ಈ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನವೆಂಬರ್ 15 ರಂದು ಲೋಕಾರ್ಪಣೆ ಮಾಡಲಿದ್ದಾರೆ.

PM Modi In Bhopal: ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಈ 13 ಆದಿವಾಸಿ ನಾಯಕರು, ಸ್ಪೆಷಲ್ ಸ್ವಾಗತ!

Rani Kamlapati first world class railway station to Shivarajkumar top 10 News of November 14 ckm

ನಾಳೆ ಅಂದರೆ ನವೆಂಬರ್ 15 ರಂದು ಕೆರೆಗಳ ನಗರಿ ಭೋಪಾಲ್‌ಗೆ (Bhopal) ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸುತ್ತಿದ್ದಾರೆ. ಪ್ರಧಾನಮಂತ್ರಿಯವರು ಬಿರ್ಸಾ ಮುಂಡಾ ಅವರ ಜನ್ಮದಿನವಾದ 'ಬುಡಕಟ್ಟು ಗೌರವ್ ದಿವಸ್' ಅನ್ನು ಇಲ್ಲಿ ಪ್ರಾರಂಭಿಸಲಿದ್ದಾರೆ.

Bitcoin Scam ರಾಜ್ಯ ಪೊಲೀಸರಿಗೆ ಅವಮಾನ ಮಾಡಬೇಡಿ: ಸುಧಾಕರ್‌

Rani Kamlapati first world class railway station to Shivarajkumar top 10 News of November 14 ckm

ಬಿಟ್‌ ಕಾಯಿನ್‌ ಪ್ರಕರಣದ (Bitcoin scam) ಬಗ್ಗೆ ತನಿಖೆ ನಡೆಯುತ್ತಿದೆ. ದೇಶದಲ್ಲಿ ಕರ್ನಾಟಕ ಪೊಲೀಸರ (karnataka police) ಬಗ್ಗೆ ದೊಡ್ಡ ಗೌರವ ಇದೆ. ರಾಜಕಾರಣಿಗಳು ಅದಕ್ಕೆ ಅಪಮಾನ ಮಾಡಬಾರದು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ತೀಕ್ಷ್ಣವಾಗಿ ಹೇಳಿದ್ದಾರೆ.

Air Pollution| ರಾಷ್ಟ್ರ ರಾಜಧಾನಿ 1 ವಾರ ಶಟ್‌ಡೌನ್: ದೆಹಲಿ ಸ್ಥಿತಿ ಗಂಭೀರ!

Rani Kamlapati first world class railway station to Shivarajkumar top 10 News of November 14 ckm

ಸುಪ್ರೀಂಕೋರ್ಟ್‌ ಟೀಕೆಯ ಬೆನ್ನಲ್ಲೇ ದೆಹಲಿಯ ಆಮ್‌ಆದ್ಮಿ ಸರ್ಕಾರ, ಪರಿಸರ ಮಾಲಿನ್ಯದಿಂದ ಜನರನ್ನು ರಕ್ಷಿಸುವ ಸಲುವಾಗಿ ಹಲವು ತುರ್ತು ಕ್ರಮಗಳನ್ನು ಘೋಷಿಸಿದೆ. ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಶನಿವಾರ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಕೇಜ್ರಿವಾಲ್‌, ಸೋಮವಾರದಿಂದ ಜಾರಿಗೆ ಬರುವಂತೆ ಒಂದು ವಾರ ಶಾಲೆಗಳಿಗೆ ರಜೆ, ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ, ನಿರ್ಮಾಣ ಚಟುವಟಿಕೆಗೆ 4 ದಿನ ಕಡಿವಾಣ ಮೊದಲಾದ ಕ್ರಮ ಪ್ರಕಟಿಸಿದ್ದಾರೆ. ಈ ಮೂಲಕ 2 ದಿನ ಲಾಕ್ಡೌನ್‌ ಹೆರುವ ಸುಪ್ರೀಂಕೋರ್ಟ್‌ನ ಸಲಹೆಯನ್ನು ಪರೋಕ್ಷ ರೀತಿಯಲ್ಲಿ ಜಾರಿಗೆ ತರುವ ಘೋಷಣೆ ಮಾಡಿದ್ದಾರೆ

T20 World cup Final; ಕಿವೀಸ್ ತಂಡದಲ್ಲಿ ಅನಿವಾರ್ಯ ಬದಲಾವಣೆ, ಆಸೀಸ್ ಸಂಭವನೀಯ ಪ್ಲೇಯಿಂಗ್ 11!

Rani Kamlapati first world class railway station to Shivarajkumar top 10 News of November 14 ckm

T20 World cup 2021 ಟೂರ್ನಿಯ ಚಾಂಪಿಯನ್ ಯಾರು ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಕಳೆದ ಒಂದು ತಿಂಗಳಿನಿಂದ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ನ್ಯೂಜಿಲೆಂಡ್(New zealand) ಹಾಗೂ ಆಸ್ಟೇಲಿಯಾ(Australia) ಎಲ್ಲಾ ತಂಡಗಳನ್ನು ಮಣಿಸಿ ಫೈನಲ್(Final) ಪ್ರವೇಶಿಸಿದೆ. ಇದೀಗ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಇಂದಿನ ಪಂದ್ಯಕ್ಕೆ ಯಾರಿಗೆಲ್ಲಾ ಅವಕಾಶ ಸಿಗಲಿದೆ. ತಂಡದಲ್ಲಿ ಕೆಲ ಅನಿವಾರ್ಯ ಬದಲಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ.

Bhajarangi 2: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವರಾಜ್ ಕುಮಾರ್

Rani Kamlapati first world class railway station to Shivarajkumar top 10 News of November 14 ckm

ಸ್ಯಾಂಡಲ್​ವುಡ್‌ನ ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ 'ಭಜರಂಗಿ 2' (Bhajarangi 2) ಚಿತ್ರ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ರಿಲೀಸ್​ ಆದ ದಿನವೇ ಪುನೀತ್ ರಾಜ್​ಕುಮಾರ್ ( Puneeth Rajkumar) ನಿಧನದ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತಿಗೊಳಿಸಿತ್ತು. ಹಾಗೂ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಪ್ರೇಕ್ಷಕರು ಹೊರಬಂದಿದ್ದರು. ಹೀಗಾಗಿ ಅಭಿಮಾನಿಗಳ ಜತೆ ಸಿನಿಮಾ ನೋಡೋಕೆ ಶಿವಣ್ಣನಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಇಂದು ಶಿವರಾಜ್​ಕುಮಾರ್ ಅಭಿಮಾನಿಗಳೊಂದಿಗೆ (Fans) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. 

Whats App: ಲಾಸ್ಟ್ ಸೀನ್ ಸ್ಟೇಟಸ್ ಮೆರೆಮಾಚುವ ಫೀಚರ್ ಶೀಘ್ರ

Rani Kamlapati first world class railway station to Shivarajkumar top 10 News of November 14 ckm

ತ್ವರಿತ ಸಂದೇಶ ಸಂವಹನದಲ್ಲಿ ಕ್ರಾಂತಿಗೆ ಕಾರಣವಾಗಿರುವ ಮೆಟಾ (Meta) ಒಡೆತನದ ವಾಟ್ಸಾಪ್ (Whatsapp) ಅನೇಕ ಫೀಚರ್‌ಗಳನ್ನು ಬಳಕೆದಾರರಿಗೆ ನೀಡುತ್ತದೆ. ಹಾಗೆಯೇ, ವಾಟ್ಸಾಪ್ ಚಾಟ್‌ನಲ್ಲಿ ಲಾಸ್ಟ್ ಸೀನ್ (Last Seen) ಸ್ಟೇಟಸ್ ಮರೆ ಮಾಚುವ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದ, ಶೀಘ್ರವೇ ಬಳಕೆದಾರರಿಗೆ ಇದು ಲಭ್ಯವಾಗಲಿದೆ ಎನ್ನಲಾಗಿದೆ.

Aadhaar: ನಿಮ್ಮ ಮಾಹಿತಿ ಕಳುವಾಗಬಾರದೆಂದರೆ ತಪ್ಪದೇ ಈ ಕ್ರಮ ಅನುಸರಿಸಿ!

Rani Kamlapati first world class railway station to Shivarajkumar top 10 News of November 14 ckm

ಆಧಾರ್ ಕಾರ್ಡ್ (Aadhaar card) ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಇಲ್ಲವೇ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಸಾಧ್ಯವಿದೆ. ಹೀಗಾಗಿ ಆಧಾರ್ ಕಾರ್ಡ್ ಮಾಹಿತಿಗಳನ್ನು ಜೋಪಾನ ಮಾಡಲು ಮರೆಯಬೇಡಿ.

Nathy Kihara: ಬ್ಯಾಕ್ ಬ್ಯೂಟಿ, ಹಿಂಭಾಗಕ್ಕೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

Rani Kamlapati first world class railway station to Shivarajkumar top 10 News of November 14 ckm

ನಿಮ್ಮ ಮನೆ ಅಥವಾ ಕಾರಿಗೆ ಇನ್ಶೂರೆನ್ಸ್ ಮಾಡಿಸುವುದು ಹೊಸದೇನಲ್ಲ. ಆದರೆ ಈ ವರ್ಷ 'ಮಿಸ್ ಬಮ್‌ಬಮ್ 2021' (Miss Bumbum)ಪ್ರಶಸ್ತಿಯನ್ನು ಗೆದ್ದ ನಂತರ ಒಬ್ಬ ಮಾಡೆಲ್ ವಿಮೆ(Insurance) ಎಂಬ ಕಾನ್ಸೆಪ್ಟ್‌ನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.

Latest Videos
Follow Us:
Download App:
  • android
  • ios