Asianet Suvarna News Asianet Suvarna News

World Class Railway Station : ಮೊದಲ ವಿಶ್ವದರ್ಜೆ ರೈಲುನಿಲ್ದಾಣ ನ.15ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ

  • ಮಧ್ಯಪ್ರದೇಶದ ಬೋಪಾಲ್‌ನಲ್ಲಿರುವ ರಾಣಿ ಕಮಲಾಪತಿ ರೈಲು ನಿಲ್ದಾಣ
  • ಪುನರ್ ನವೀಕರಣಗೊಂಡ ರೈಲು ನಿಲ್ದಾಣ ನಾಳೆ ಲೋಕಾರ್ಪಣೆ
  • ಹಬೀಬ್‌ಗಂಜ್ ಹೆಸರನ್ನು ಬದಲಿಸಿ ರಾಣಿ ಕಮಲಾಪತಿ ಮರುನಾಮಕರಣ
  • ನ.15ಕ್ಕೆ ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣ ಲೋಕಾರ್ಪಣೆ
PM Modi to dedicate to nation redeveloped first world class Rani Kamlapati Railway Station in Bhopal ckm
Author
Bengaluru, First Published Nov 14, 2021, 5:28 PM IST
  • Facebook
  • Twitter
  • Whatsapp

ನವದೆಹಲಿ(ನ.14):  ದೇಶದಲ್ಲಿನ ರೈಲು ನಿಲ್ದಾಣ, ಬಸ್ ನಿಲ್ದಾಣ, ಹೆದ್ದಾರಿ, ಗ್ರಾಮದ ರಸ್ತೆಗಳು ಸೇರಿದಂತೆ ದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದೀಗ ಮಧ್ಯಪ್ರದೇಶದ ಭೋಪಾಲದಲ್ಲಿರುವ ಹಬೀಬ್‌ಗಂಜ್ ರೈಲು ನಿಲ್ದಾಣ ಇದೀಗ ರಾಣಿ ಕಮಲಾಪತಿ ರೈಲು ನಿಲ್ದಾಣವಾಗಿ(Rani Kamlapati Railway Station) ಪುನರ್ ಅಭಿವೃದ್ಧಿಪಡಿಸಲಾಗಿದೆ. ಅತ್ಯಾಧುನಿಕ ಹಾಗೂ ಮೇಲ್ದರ್ಜೆಗೆ ಏರಿಸಿರುವ ಈ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನವೆಂಬರ್ 15 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ರೈಲು ನಿಲ್ದಾಣ ಲೋಕಾರ್ಪಣೆ, ಇತರ ಅಭಿವೃದ್ಧಿ ಕಾಮಾಗಾರಿಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ನರೇಂದ್ರ ಮೋದಿ ಮಧ್ಯಪ್ರದೇಶ ಪ್ರವಾಸ ಮಾಡಲಿದ್ದಾರೆ. ನಾಳೆ(ನ.15) ಮಧ್ಯಾಹ್ನ 3 ಗಂಟೆಗೆ ಮೋದಿ, ರಾಣಿಕಮಲಾಪತಿ ರೈಲು ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ.  ಈ ರೈಲು ನಿಲ್ದಾಣವನ್ನು PPP ಮಾಡೆಲ್(ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಅಡಿಯಲ್ಲಿ ಪುನರ್ ನವೀಕರಿಸಲಾಗಿದೆ.

ರಾಣಿಕಮಲಾಪತಿ ರೈಲು ನಿಲ್ದಾಣ ಭಾರತದ ಮೊತ್ತಮೊದಲ ವಿಶ್ವದರ್ಜೆಯ ರೈಲು ನಿಲ್ದಾಣ(first world class railway station) ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲು ನಿಲ್ದಾಣ ವಿಶ್ವ ದರ್ಜೆಯ ಸೌಕರ್ಯ ಹೊಂದಿದೆ. ಹಸಿರುು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ. ದಿವ್ಯಾಂಗರಿಗೂ ಸುಲಭವಾಗಿ ಬಳಕೆ ಮಾಡಬಹುದಾದ ರೈಲು ನಿಲ್ದಾಣ ಇದಾಗಿದೆ. ಸಮಗ್ರ ಬಹು ಮಾದರಿಯ ಸಾರಿಗೆ ಕೇಂದ್ರವಾಗಿ ನಿರ್ಮಾಣ ಮಾಡಲಾಗಿದೆ. ರಾಣಿ ಕಮಲಾಪತಿ ರೈಲು ನಿಲ್ದಾಣ  ಮರು ಅಭಿವದ್ಧಿಗೆ ಬರೋಬ್ಬರಿ 450  ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಮೂಲಕ ಎಲ್ಲಾ ಮೂಲಸೌಕರ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ.

ಫೈಜಾಬಾದ್‌ ರೈಲು ನಿಲ್ದಾಣ ಇನ್ನು ಅಯೋಧ್ಯಾ ಕಂಟೋನ್ಮೆಂಟ್‌

ರೈಲು ನಿಲ್ದಾಣದಲ್ಲಿ ಹಲವು ವಿಶೇಷತೆಗಳಿವೆ. ಎಸ್ಕಲೇಟರ್, ಲಿಫ್ಟ್ ಮೂಲಕ ಪ್ಲಾಟ್‌ಪಾರ್ಮ ತಲುಪಲು ಸುಲಭ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿರುವ ಎಲ್ಲಾ ವ್ಯವಸ್ಛೆ, ಸೌಕರ್ಯಗಳು ಇದೀಗ ಈ ರಾಣಿ ಕಮಾಲಪತಿ ರೈಲು ನಿಲ್ದಾಣದಲ್ಲಿ ಸಿಗಲಿದೆ. ಜನರ ದಟ್ಟಣೆ ನಿಯಂತ್ರಿಸಲು ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರಗಳನ್ನು ಇಡಲಾಗಿದೆ.

ಹಬೀಬ್‌ಗಂಜ್ ನಿಲ್ದಾಣ ಇದೀಗ ರಾಣಿಕಮಲಾಪತಿ ರೈಲು ನಿಲ್ದಾಣ
18ನೇ ಶತಮಾನದ ಗೊಂಡಾದ ರಾಣಿ, ಧೈರ್ಯಶಾಲಿ ಹಾಗೂ ಹೋರಾಟಗಾರ್ತಿ ರಾಣಿ ಕಮಲಾಪತಿ ಹೆಸರನ್ನು ನವೀಕರಿಸಿದ ರೈಲು ನಿಲ್ದಾಣಕ್ಕೆ ಇಡಲಾಗಿದೆ. ಇದಕ್ಕೂ ಮೊದಲು ಹಬೀಬ್‌ಗಂಜ್ ರೈಲು ನಿಲ್ದಾಣವಾಗಿತ್ತು.  ಸ್ಥಳೀಯ ಇತಿಹಾಸಕ್ಕೆ ಅನುಗುಣವಾಗಿ ಇದೀಗ ಹೆಸರು ಬದಲಾಯಿಸಲಾಗಿದೆ. 

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ನವೆಂಬರ್ 15 ರಂದು ಕೇಂದ್ರ ಸರ್ಕಾರ ಜನಜಾತಿಯ ಗೌರವ ದಿವಸ್ ಎಂದು ಆಚರಿಸುತ್ತಿದೆ. ಇದರ ಅಂಗವಾಗಿ ಹಬೀಬ್‌ಗಂಜ್ ರೈಲು ನಿಲ್ದಾಣದ ಹೆಸರು ಮರುನಾಮಕರಣ ಮಾಡಲಾಗಿದೆ. ರೈಲು ನಿಲ್ದಾಣದ ಹಬೀಬ್‌ಗಂಜ್ ಹೆಸರು ಬದಲಾವಣೆಗೆ ಅಪಸ್ವರಗಳು ಕೇಳಿಬಂದಿದೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. 

ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಹಿಳೆ, ಜಾರಿ ಬಿದ್ದಾಕೆಯನ್ನು ರಕ್ಷಿಸಿದ RPF ಸಿಬ್ಬಂದಿ!

ನವೆಂಬರ್ 15 ರಂದು ಜನಜಾತಿಯ ಗೌರವ್ ದಿವಸ್ ಆಚರಿಸಲಾಗುತ್ತಿದೆ. ಇದೇ ದಿನ ಪ್ರಧಾನಿ ನರೇಂದ್ರ ಮೋದಿ ರಾಣಿ ಕಮಲಾಪತಿ ರೈಲು ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ.  ರೈಲು ನಿಲ್ದಾಣ ಲೋಕಾರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಲವು ರೈಲು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವಿದ್ಯುತ್ ಚಾಲಿತ ಉಜ್ಜಯಿನಿ-ಫತೇಹಾಬಾದ್ ಚಂದ್ರಾವತಿಗಂಜ್ ಬ್ರಾಡ್ ಗೇಜ್ ವಿಭಾಗ, ಗೇಜ್ ಪರಿವರ್ತಿತ ಮತ್ತು ವಿದ್ಯುದ್ದೀಕರಿಸಿದ ಮಥೇಲಾ-ನಿಮಾರ್ ಖೇರಿ ಬ್ರಾಡ್ ಸೇರಿದಂತೆ ಸೇರಿದಂತೆ ಹಲವು ರೈಲು ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. 

Follow Us:
Download App:
  • android
  • ios