ರಾಂಚಿ: ಪ್ರತಿಭಟನೆ ವೇಳೆ ಹಿಂಸಾಚಾರವೆಸಗಿದ ಶಂಕಿತ ಆರೋಪಿಗಳ ಫೋಟೋವನ್ನು ಸಾರ್ವಜನಿಕವಾಗಿ ಪೋಸ್ಟರ್ ಹಾಕಿದ್ದಕ್ಕಾಗಿ ರಾಂಚಿಯ ಉನ್ನತ ಪೊಲೀಸ್ ಅಧಿಕಾರಿಗೆ ಶೋಕಾಸ್ ನೋಟಿಸ್ ಬಂದಿದೆ.
ರಾಂಚಿ: ಶಂಕಿತ ಆರೋಪಿಗಳ ಫೋಟೋವನ್ನು ಸಾರ್ವಜನಿಕವಾಗಿ ಪೋಸ್ಟರ್ ಹಾಕಿದ್ದಕ್ಕಾಗಿ ರಾಂಚಿಯ ಉನ್ನತ ಪೊಲೀಸ್ ಅಧಿಕಾರಿಗೆ ಶೋಕಾಸ್ ನೋಟಿಸ್ ಬಂದಿದೆ. ಇಂತಹ ಪೋಸ್ಟರ್‌ಗಳನ್ನು ಹಾಕುವುದರಿಂದ ವ್ಯಕ್ತಿಯ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇದು ಸಂವಿಧಾನದ 21 ನೇ ವಿಧಿ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಅನ್ನು ಉಲ್ಲಂಘಿಸುತ್ತದೆ ಎಂದು ಜನವರಿ 2020 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು (Allahabad high court order)ಉಲ್ಲೇಖಿಸಿ ನೊಟೀಸ್ ನೀಡಲಾಗಿದೆ.
ಪ್ರವಾದಿ ಮುಹಮ್ಮದ್ (Prophet Muhammad) ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರ ವಿರುದ್ಧ ಕಳೆದ ವಾರ ರಾಂಚಿಯಲ್ಲಿ(Ranchi) ಭಾರೀ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ವೇಳೆ ಕಲ್ಲು ತೂರಾಟ ಸೇರಿದಂತೆ ಹಿಂಸಾಚಾರ ನಡೆದಿತ್ತು. ಇದಾದ ಬಳಿಕ ಈ ಹಿಂಸಾಚಾರದಲ್ಲಿ ಭಾಗಿಯಾದ ಆರೋಪಿಗಳ ಫೋಟೋಗಳನ್ನು ಪೋಸ್ಟರ್ ಆಗಿ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಿದ್ದರು. ಈ ಕಾರಣಕ್ಕೆ ಈಗ ಸಂವಿಧಾನದ 21 ನೇ ವಿಧಿ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಹಕ್ಕಿನಡಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಝಾ ಅವರಿಗೆ ಮೇಲಾಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
Xiaomi India Investigation: ₹653 ಕೋಟಿ ಆಮದು ಸುಂಕ ವಂಚನೆ: ಶಾಓಮಿಗೆ ಶೋಕಾಸ್ ನೋಟಿಸ್!
ಅಂತಹ ಪೋಸ್ಟರ್‌ಗಳನ್ನು ಹಾಕುವುದು ಗೌಪ್ಯತೆಯ ಹಕ್ಕು ಮತ್ತು ಸಂವಿಧಾನದ 21 ನೇ ವಿಧಿ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಅನ್ನು ಉಲ್ಲಂಘಿಸುತ್ತದೆ ಎಂದು ಜನವರಿ 2020 ರ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶವನ್ನು ನೋಟಿಸ್ ಉಲ್ಲೇಖಿಸಿದೆ ಮತ್ತು ಎರಡು ದಿನಗಳಲ್ಲಿ ಉತ್ತರಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಝಾ ಅವರನ್ನು ನೊಟಿಸ್‌ನಲ್ಲಿ ಕೇಳಲಾಗಿದೆ.
ಪೋಸ್ಟರ್‌ಗಳಲ್ಲಿ ಕಾನೂನುಬದ್ಧ ಆರೋಪಗಳಿಲ್ಲದ ವ್ಯಕ್ತಿಗಳ ವಿವರಗಳು ಮತ್ತು ಚಿತ್ರಗಳಿವೆ ಎಂದು ಗೃಹ ಕಾರ್ಯದರ್ಶಿ ಅರುಣ್ ಕುಮಾರ್ ಎಕ್ಕಾ (Arun Kumar Ekka) ಹೇಳಿದ್ದಾರೆ. ಈ ಕ್ರಮವು ಜನವರಿ 9, 2020 ರಂದು ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಉಲ್ಲಂಘಿಸುತ್ತದೆ. ಸಾರ್ವಜನಿಕವಾಗಿ ಶಂಕಿತರ ಪೋಸ್ಟರ್‌ಗಳನ್ನು ಹಾಕುವುದು ಅವರ ಗೌಪ್ಯತೆಯ ಹಕ್ಕನ್ನು ಮತ್ತು ಸಂವಿಧಾನದ 21 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ ಎಂದು ರಾಜ್ಯ ಸರ್ಕಾರ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!
ಜಾರ್ಖಂಡ್ ರಾಜ್ಯಪಾಲ (Jharkhand governor) ರಮೇಶ್ ಬೈಸ್ (Ramesh Bais) ಅವರ ನಿರ್ದೇಶನದ ಮೇರೆಗೆ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ 33 ಶಂಕಿತರ ಪೋಸ್ಟರ್‌ಗಳನ್ನು ಹಾಕಿದರು. ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿ ಅವುಗಳನ್ನು ತೆಗೆದು ಹಾಕುವ ಮೊದಲು ಮಂಗಳವಾರ ಅವರ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಕೇಳಿದರು. ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ 29 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ (Prophet) ಮೊಹಮದ್ ಪೈಗಂಬರ್ ಕುರಿತಾಗಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ಬಂಧನ ಮಾಡುವಂತೆ ಆಗ್ರಹಿಸಿ ಕಳೆದ ಶುಕ್ರವಾರ ( ಜೂನ್10) ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಉತ್ತರ ಪ್ರದೇಶ (Uttar Pradesh) ರಾಜ್ಯವೊಂದರಲ್ಲೇ ಈ ಪ್ರಕಣರಣದಲ್ಲಿ 237 ಮಂದಿಯನ್ನು ಬಂಧಿಸಲಾಗಿದೆ. ಪ್ರಯಾಗ್ ರಾಜ್ ನಲ್ಲಿ 68, ಹತ್ರಾಸ್ ನಲ್ಲಿ 48, ಅಂಬೇಡ್ಕರ್ ನಗರದಲ್ಲಿ 28, ಮೊರಾದಾಬಾದ್ ನಲ್ಲಿ 25 ಹಾಗೂ ಫಿರೋಜಾಬಾದ್ ನಲ್ಲಿ8 ಜನರನ್ನು ಬಂಧಿಸಲಾಗಿದೆ. ಇನ್ನು ಪ್ರತಿಭಟನೆಯ ವೇಳೆ ರಾಂಚಿಯಲ್ಲಿಇಬ್ಬರ ಸಾವಾಗಿದ್ದು, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ರಾಂಚಿಯ (Ranchi) ರಾಜೇಂದ್ರ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಖಚಿತಪಡಿಸಿದೆ.
