ಮನುಸ್ಮೃತಿ, ರಾಮಚರಿತಮಾನಸ್‌, ಗೋಳ್ವಲ್ಕರ್‌ ಪುಸ್ತಕದಿಂದ ದ್ವೇಷ ಭಾವನೆ ಕೆರಳುತ್ತದೆ ಎಂದು ಬಿಹಾರ ಶಿಕ್ಷಣ ಸಚಿವ ಹೇಳಿಕೆ ನೀಡಿದ್ದು, ಇದು ಭಾರಿ ವಿವಾದವಾಗಿ ಪರಿಣಮಿಸಿದೆ. ಈ ನಡುವೆ, ಸಚಿವನ ನಾಲಿಗೆ ಕತ್ತರಿಸಿದರೆ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ ಅಯೋಧ್ಯೆ ಶ್ರೀಗಳು. 

ಪಾಟ್ನಾ: ಮನುಸ್ಮೃತಿ, ರಾಮಚರಿತಮಾನಸ್‌ ಹಾಗೂ ಹಿಂದೂ ಮುಖಂಡ ಗೋಳ್ವಲ್ಕರ್‌ ಅವರ ‘ಬಂಚ್‌ ಆಫ್‌ ಥಾಟ್ಸ್‌’ ಪುಸ್ತಕ ಸಮಾಜದಲ್ಲಿ ದ್ವೇಷ ಸೃಷ್ಟಿಸುತ್ತವೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ ಯಾದವ್‌ ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಕ್ರುದ್ಧರಾಗಿರುವ ಅಯೋಧ್ಯೆ ಶ್ರೀಗಳಾದ ಜಗದ್ಗುರು ಪರಮಹಂಸ ಆಚಾರ್ಯ ಅವರು, ತಮ್ಮ ಹೇಳಿಕೆ ಬಗ್ಗೆ ವಾರದಲ್ಲಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅವರ ನಾಲಿಗೆ ಕತ್ತರಿಸಿ ತಂದವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಶ್ರೀಗಳು ಹೇಳಿದ್ದೇನು..?
ಇನ್ನೊಂದೆಡೆ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ತಕ್ಷಣವೇ ಚಂದ್ರಶೇಖರ ಯಾದವ್‌ ಅವರನ್ನು ವಜಾಗೊಳಿಸಬೇಕು. ಇಂತಹ ಅಜ್ಞಾನ ವ್ಯಕ್ತಿ ಶಿಕ್ಷಣ ಸಚಿವನಾಗಿ ಮುಂದುವರಿಯಲು ಹಕ್ಕು ಇಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಸಹ ಗುಡುಗಿದ್ದಾರೆ. ಈ ನಡುವೆ, ನಾನು ಹೇಳಿದ್ದು ಸರಿಯಾಗಿದೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಸಚಿವ ಚಂದ್ರಶೇಖರ್ ಯಾದವ್‌ ಸಮರ್ಥಿಸಿಕೊಂಡಿದ್ದಾರೆ.

ಇದನ್ನು ಓದಿ: ಪುರುಷರು ಅಸಡ್ಡೆ, ಮಹಿಳೆಯರು ಅವಿದ್ಯಾವಂತರು; ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲ್ಲ: ನಿತೀಶ್‌ ಕುಮಾರ್

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಬಿಹಾರ ಶಿಕ್ಷಣ ಸಚಿವರು ರಾಮಚರಿತಮಾನಸ್‌ ಪುಸ್ತವು ದ್ವೇಷ ಹರಡುವ ಪುಸ್ತಕ ಎಂದು ಅವರು ಹೇಳಿರುವ ರೀತಿಗೆ ಇಡೀ ದೇಶದ ಜನತೆಗೆ ನೋವುಂಟು ಮಾಡಿದೆ. ಹಾಗೂ, ಇದು ಸನಾತನಿಗಳಿಗೆ ಅಪಮಾನ. ಈ ಹಿನ್ನೆಲೆ ಅವರ ಹೇಳಿಕೆಗೆ ನಾನು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಅವರನ್ನು ಸಚಿವ ಸ್ಥಾನದಿಂದ ಒಂದು ವಾರದೊಳಗೆ ತೆಗೆಯಬೇಕು ಎಂದೂ ಜಗದ್ಗುರು ಪರಮಹಂಸ ಆಚಾರ್ಯ ಶ್ರೀಗಳು ಹೇಳಿದ್ದಾರೆ. 

ಕ್ಷಮೆ ಕೇಳದಿದ್ದರೆ ಅವರ ನಾಲಿಗೆ ಕಡಿಯಲು 10 ಕೋಟಿ ರೂ. ಇನಾಮು..! 
ಬಿಹಾರ ಸಚಿವರು ಕ್ಷಮೆಯನ್ನೂ ಕೇಳಬೇಕೆಂದು ಜಗದ್ಗುರು ಪರಮಹಂಸ ಆಚಾರ್ಯ ಶ್ರೀಗಳು ಆಗ್ರಹಿಸಿದ್ದಾರೆ. ಒಂದು ವೇಳೆ ಇದು ಆಗದಿದ್ದರೆ, ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್‌ ಅವರ ನಾಲಿಗೆ ಕಡಿಯುವವರಿಗೆ ನಾನು 10 ಕೋಟಿ ರೂ. ಬಹುಮಾನ ನೀಡುತ್ತೇನೆ ಎಂದೂ ತಪಸ್ವಿ ಚವಾನಿ ದೇವಸ್ಥಾನದ ಶ್ರೀಗಳು ಆಫರ್‌ ಕೊಟ್ಟಿದ್ದಾರೆ. ಹಾಗೆ, ಇಂತಹ ಟೀಕೆಗಳನ್ನು ಸಹಿಸಲು ಸಾಧ್ಯವಿಲ್ಲವೇ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದ ನಿತೀಶ್‌ ಕುಮಾರ್‌ ಸರ್ಕಾರ..!

ರಾಮಚರಿತಮಾನಸ್‌ ಸಂಪರ್ಕಿಸುವ ಪುಸ್ತಕವೇ ಹೊರತು ವಿಭಜಿಸುವುದಲ್ಲ. ರಾಮಚರಿತಮಾನಸ್‌ ಮನವೀಯತೆಯನ್ನು ಸ್ಥಾಪಿಸುವ ಪುಸ್ತಕ. ಇದು ಭಾರತೀಯ ಸಂಸ್ಕೃತಿಯ ರೂಪವಾಗಿದ್ದು, ನಮ್ಮ ದೇಶದ ಹೆಮ್ಮೆಯಾಗಿದೆ. ಈ ಹಿನ್ನೆಲೆ ರಾಮಚರಿತಮಾನಸ್‌ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡುವುದನ್ನು ಸಹಿಸುವುದಿಲ್ಲ ಎಂದೂ ಅಯೋಧ್ಯೆ ಶ್ರೀಗಳಾದ ಜಗದ್ಗುರು ಪರಮಹಂಸ ಆಚಾರ್ಯ ಹೇಳಿದ್ದಾರೆ. 

ಸಚಿವ ಹೇಳಿದ್ದೇನು?
ಮನುಸ್ಮೃತಿ ಸಮಾಜದ ಶೇ. 85ರಷ್ಟು ಜನರನ್ನು ನಿಂದಿಸುತ್ತದೆ. ಜನರು ಈ ಹಿಂದೆ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದಾರೆ. ಕೆಳ ಸಮುದಾಯದವರು ಶಿಕ್ಷಣ ಪಡೆಯುವ ಹಕ್ಕು ಹೊಂದಿಲ್ಲ ಎಂದು ರಾಮಚರಿತಮಾನಸ್‌ ಹೇಳುತ್ತದೆ. ಅಲ್ಲದೆ, ಕೆಳವರ್ಗದವರು ಶಿಕ್ಷಣ ಪಡೆದ ಬಳಿಕ ವಿಷಪೂರಿತ ಹಾವಿನಂತಾಗುತ್ತಾರೆ ಎಂದು ಅದೇ ಕೃತಿ ಹೇಳುತ್ತದೆ ಎಂದು ಬಿಹಾರ ಸಚಿವ ಚಂದ್ರಶೇಖರ್ ಯಾದವ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್‌ ಕುಮಾರ್ ಶಿಖಂಡಿ: ಆರ್‌ಜೆಡಿ ನಾಯಕ ಸುಧಾಕರ್‌

ಹಿಂದೂಗಳ ಧಾರ್ಮಿಕ ಪುಸ್ತಕವಾದ ರಾಮಚರಿತಮಾನಸ್‌ ಬಗ್ಗೆ ಈ ರೀತಿ ಹೇಳಿರುವುದಕ್ಕೆ ಗುರುವಾರ ಆಕ್ರೋಶ ವ್ಯಕ್ತಪಡಿಸಿರುವ ಶ್ರೀಗಳಾದ ಜಗದ್ಗುರು ಪರಮಹಂಸ ಆಚಾರ್ಯ ಅವರು, ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್ ಯಾದವ್‌ ಅವರನ್ನು ಒಂದು ವಾರದೊಳಗೆ ಶಿಕ್ಷಣ ಸಚಿವ ಹುದ್ದೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.