Asianet Suvarna News Asianet Suvarna News

ಅಯೋಧ್ಯೆಯಲ್ಲಿ 2024ರ ಜನವರಿಯಲ್ಲಿ ರಾಮನ ಪ್ರತಿಷ್ಠಾಪನೆ ಎಂದ ಪೇಜಾವರ ಶ್ರೀ

ಮೊದಲು 2023ರ ಡಿಸೆಂಬರ್ ತಿಂಗಳಲ್ಲಿಯೇ ವಿಗ್ರಹಕ್ಕೆ ಪ್ರಾಣಪ್ರತಿಷ್ಟೆ ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೇ ಉತ್ತರಾಯಣ ಉತ್ತಮ ಎಂದು ಜನವರಿ ತಿಂಗಳಲ್ಲಿ ಪ್ರಾಣಪ್ರತಿಷ್ಠೆಗೆ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು  ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
 

Rama idol will install in Ayodhya by January 2024 say Pejawara seer Vishwaprasanna Teertha Swamiji san
Author
Bengaluru, First Published Apr 19, 2022, 10:53 PM IST

ಉಡುಪಿ (ಏ.19): ಅಯೋಧ್ಯೆಯಲ್ಲಿ (Ayodhya ) ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ನಿರ್ಮಾಣ ಕಾರ್ಯ 2023ರ ಡಿಸೆಂಬರ್ ನಲ್ಲಿ ಪೂರ್ಣಗೊಂಡು, 2024ರ ಜನವರಿ ತಿಂಗಳಲ್ಲಿ ಆರಂಭವಾಗುವ ಉತ್ತರಾಯಣದಲ್ಲಿ ರಾಮನ ವಿಗ್ರಹ (Rama Idol) ಪ್ರತಿಷ್ಠಾಪನೆ ನಡೆಯಲಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ  (Ram Janmabhoomi Teerth Kshetra Trust )ವಿಶ್ವಸ್ಥರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಅವರು ಮಂಗಳವಾರ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಸಭೆಯಲ್ಲಿ ಭಾಗವಹಿಸಿ ನಂತರ, ಈ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ.   ಮೊದಲು 2023ರ ಡಿಸೆಂಬರ್ ತಿಂಗಳಲ್ಲಿಯೇ ವಿಗ್ರಹಕ್ಕೆ ಪ್ರಾಣಪ್ರತಿಷ್ಟೆ ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೇ ಉತ್ತರಾಯಣ ಉತ್ತಮ ಎಂದು ಜನವರಿ ತಿಂಗಳಲ್ಲಿ ಪ್ರಾಣಪ್ರತಿಷ್ಠೆಗೆ ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.

ಅಲ್ಲದೇ ಆರಂಭದಲ್ಲಿ ಮಂದಿರದ ನಿರ್ಮಾಣ ವೆಚ್ಚ 400 ಕೋಟಿ ರು. ಅಂದು ಅಂದಾಜಿಸಲಾಗಿತ್ತು. ಆದರೇ ನಿರ್ಮಾಣ ಪ್ರದೇಶದ ಭೂಮಿಯ ಸಾಮರ್ಥ್ಯವನ್ನು ಹೆಚ್ಚಿಬೇಕಾಗಿರುವುದರಿಂದ, ಒಟ್ಟು ವೆಚ್ಚ ಇನ್ನೂ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಅಲ್ಲದೇ ಇಲ್ಲಿ ಹಿಂದಿನ ರಾಮಮಂದಿರದ ಅವಶೇಷಗಳನ್ನು ಯಾತ್ರಾರ್ಥಿಗಳ ವೀಕ್ಷಣೆಗೆ ಲಭ್ಯವಾಗುವಂತೆ ಸಂಗ್ರಹಾಲಯದ ನಿರ್ಮಾಣಕ್ಕೂ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ ಎಂದು ಶ್ರೀಗಳು ಹೇಳಿದರು.  ಪ್ರಸ್ತುತ ನಡೆಯುತ್ತಿರುವ ನಿರ್ಮಾಣದಲ್ಲಿ ಕರಸೇವೆ ಮಾಡುವುದಕ್ಕೆ ಭಕ್ತರು ಆಪೇಕ್ಷೆ ವ್ಯಕ್ತಪಡಿಸಿದ್ದಾರೆ, ಆದರೇ ನಿರ್ಮಾಣ ಕಾರ್ಯಗಳೆಲ್ಲವೂ ಯಂತ್ರೋಪಕರಣಗಳ ಮೂಲಕ ನಡೆಯುತ್ತಿರುವುದರಿಂದ ಭಕ್ತರ ಕರಸೇವೆಗೆ ಅವಕಾಶವಿಲ್ಲ ಎಂದು ಸಭೆಯು ಅಭಿಪ್ರಾಯಪಟ್ಟಿದ್ದು, ಅಖಂಡ ಭಜನೆ ನಡೆಯುತ್ತಿದ್ದು, ಇದರಲ್ಲಿ ಭಕ್ತರು ಭಾಗವಹಿಸಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಶ್ರೀಗಳು ತಾತ್ಕಾಲಿಕ ಮಂದಿರದಲ್ಲಿರುವ ರಾಮ‌ಲಲ್ಲಾನ ದರ್ಶನ‌ ಪಡೆದು ಚಾಮರ ಸೇವೆ ಮಾಡಿ , ಮಂಗಳಾರತಿ‌ ಬೆಳಗಿ ದೇಶದ ಕ್ಷೇಮ ಸುಭಿಕ್ಷೆ ಶಾಂತಿಗೆ ಪ್ರಾರ್ಥಿಸಿದರು.‌ ನಂತರ ನೂತನ ಭವ್ಯ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ತೆರಳಿ ಕಾರ್ಮಿಕರೊಂದಿಗೆ ಉಭಯ ಕುಶಲೋಪರಿ ನಡೆಸಿ ಉತ್ಸಾಹ ತುಂಬಿದರು ಮತ್ತು ನಿರ್ಮಾಣ ಕಾಮಗಾರಿ ನಿವೇಶನ ಪೂರ್ತಿ ಸಂಚರಿಸಿ ಅವಲೋಕಿಸಿದರು, ತಾವು ಕಾರ್ಮಿಕರೊಂದಿಗೆ ಕೆಲಕಾಲ ಕೈಜೋಡಿಸಿದರು.

Ram Mandir: ಮಂದಿರ ನಿರ್ಮಾಣದ 3D ವಿಡಿಯೋ ಬಿಡುಗಡೆ, ಹೀಗಿದೆ ರಾಮಲಲ್ಲಾನ ದೇಗುಲ!

ರಾಮಾನಂದ ಸಂಪ್ರದಾಯದಂತೆ ಪ್ರತಿಷ್ಠೆ, ಪೂಜೆ: ಹಿಂದೆ ಇದ್ದ ರಾಮಮಂದಿರದಲ್ಲಿ ರಾಮಾನಂದ ಸಂಪ್ರದಾಯದಂತೆ ಪೂಜಾಧಿಗಳು ನಡೆಯುತ್ತಿದ್ದವು. ಆದ್ದರಿಂದ ಮುಂದೆಯೂ ಅದನ್ನೇ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ರಾಮನ ಪ್ರತಿಷ್ಠಾಪನೆಯೂ ಅದೇ ಸಂಪ್ರದಾಯದ ಪೀಠಾಧಿಪತಿಗಳ ಮಾರ್ಗದರ್ಶನದಲ್ಲಿ ನಡೆಸಲು, ಪೂಜೆಗೆ ಯೋಗ್ಯ ವಿದ್ವಾಂಸರನ್ನು ನೇಮಿಸಲು, ಅವರಿಗೆ ಅಗತ್ಯ ಪ್ರಶಿಕ್ಷಣಕ್ಕೆ ವ್ಯವಸ್ಥೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ಅಡಿಪಾಯಕ್ಕೆ ರಾಜ್ಯದ ಗ್ರಾನೈಟ್‌

ರಾಮಮಂದಿರಕ್ಕೆ ಬೆಂಗಳೂರಿನ ಗ್ರಾನೈಟ್ ಬಳಕೆ: ಪ್ರಸ್ತುತ 70 ಎಕರೆ ಪ್ರದೇಶದಲ್ಲಿ ತಲೆಎತ್ತುವ ರಾಮಮಂದಿರದ ತಳಪಾಯ 4 ಅಡಿ ಮತ್ತು ಅದರ ಮೇಲೆ 16 ಅಡಿ ವೇದಿಕೆ ನಿರ್ಮಾಣವಾಗಿದೆ. ಅದರ ಮೇಲೆ ನಿಜವಾದ ಮಂದಿರ ನಿರ್ಮಾಣ ನಡೆಯುತ್ತಿದೆ. ಅದಕ್ಕಾಗಿ ಬೆಂಗಳೂರಿನಿಂದ ಗ್ರಾನೈಟ್ ಕಲ್ಲುಗಳನ್ನು ತರಿಸಲಾಗಿದೆ. 2023ರೊಳಗೆ ಮಂದಿರ ನಿರ್ಮಾಣ ಪೂರ್ಣಗೊಂಡು, ಗರ್ಭಗೃಹದಲ್ಲಿ ರಾಮನನ್ನು ಕೂರಿಸಲಾಗುತ್ತದೆ, 2024ರ ಜನವರಿಯಲ್ಲಿ ಪ್ರತಿಷ್ಠಾಪನೆ ಮಹೋತ್ಸವ ನಡೆಯಲಿದೆ ಎಂದು ನಿರ್ಮಾಣ ಕಾರ್ಯದ ಉಸ್ತುವಾರಿ ಜಿ. ಗೋಪಾಲ್ ಹೇಳಿದ್ದಾರೆ.

Follow Us:
Download App:
  • android
  • ios