Asianet Suvarna News Asianet Suvarna News

ರಾಮ ಮಂದಿರದಿಂದ ಡಿಜಿಟಲ್ ರೂಪಾಂತರಗೊಂಡ ಆಯೋಧ್ಯೆ, QR ಕೋಡ್ ಪಾವತಿ ದುಪ್ಪಟ್ಟು!

ದೇಶದ ಆಸ್ಮಿತೆ, ನಾಗರೀಕತೆ ಹುಟ್ಟು, ಭವ್ಯ ಪರಂಪರೆ-ಸಂಸ್ಕೃತಿಗಳ ಆಗರವಾಗಿರುವ ಆಯೋಧ್ಯೆ ಇದೀಗ ಡಿಜಿಟಲ್ ರೂಪಾಂತಗೊಂಡಿದೆ. ಇಲ್ಲಿನ ವ್ಯವಹಾರ-ವಹಿವಾಟು, ಕಾಣಿಕೆ ಸೇರಿದಂತೆ ಬಹುತೇಕ ಎಲ್ಲವೂ ಡಿಜಿಟಲ್ ಪಾವತಿ ಮೂಲಕ ನಡೆಯುತ್ತಿದೆ. ಭವ್ಯ ಮಂದಿರದಿಂದ ಆಯೋಧ್ಯೆಯಲ್ಲಾಗಿರುವ ಮಹತ್ತರ ಬದಲಾವಣೆ ವಿವರ ಇಲ್ಲಿದೆ.

Ram Mandir Prana Pratishta Digital transformation in Ayodhya QR Code payment redefine economic landscape ckm
Author
First Published Dec 28, 2023, 1:09 PM IST

ಆಯೋಧ್ಯೆ(ಡಿ.28) ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ. ಶ್ರೀರಾಮ ಮಂದಿರದ ಜೊತೆಗೆ ಶ್ರೀರಾಮನಿಗೆ ಸಂಬಂಧಿಸಿದ ಹಾಗೂ ರಾಮಾಯಣದಲ್ಲಿ ಉಲ್ಲೇಖವಿರುವ ಸುತ್ತ ಮುತ್ತಲಿನ ಕೆಲ ದೇಗುಲಗಳು ನವೀಕರಣಗೊಳ್ಳುತ್ತಿದೆ. ಸರಯೂ ನದೀ ತೀರದ ಚಿತ್ರಣ ಬದಲಾಗಿದೆ. ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರ ಆಯೋಧ್ಯೆಯನ್ನು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಅಭಿವೃದ್ಧಿಗೊಳಿಸುತ್ತಿದೆ.ಇದರ ಜೊತೆಗೆ ಪ್ರವಾಸಿ ತಾಣವಾಗಿಯೂ ಬೆಳೆಯುತ್ತಿದೆ. ಇದರಿಂದಾಗಿ ಆಯೋಧ್ಯೆ ಇದೀಗ ಸಂಪೂರ್ಣ ಬದಲಾಗಿದೆ. ಡಿಜಿಟಲ್ ರೂಪಾಂತರಗೊಂಡಿದೆ. ಇಲ್ಲಿನ ಪಾವತಿಗಳು ಇದೀಗ ಕ್ಯೂಆರ್ ಕೋಡ್ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. 

ಆಯೋಧ್ಯೆ ರೈಲು ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳು ಅಭಿವೃದ್ಧಿಯಾಗಿದೆ. ಅಂಗಡಿಗಳು, ವ್ಯಾಪಾರ ವಹಿವಾಟು ಜೋರಾಗಿದೆ. ಸರಯು ನದಿ ದಂಡೆ, ಹುಮಾನ್ ಗಿರಿ ದಂಡೆಯಲ್ಲಿನ ಬೋಟ್, ದೋಣಿಗಳ ಪಯಣದ ಸಂಖ್ಯೆಯೂ ಹೆಚ್ಚಾಗಿದೆ.  ಬೋಟ್‌ನಲ್ಲಿ ಪ್ರಯಾಣಿಕರನ್ನು ಅತ್ತಿಂದಿತ್ತ ಕೊಂಡೊಯ್ಯುವ ನಾವಿಕರು ಕೂಡ ಕ್ಯೂಆರ್ ಕೋಡ್ ಪಾವತಿಗೆ ಬದಲಾಗಿದ್ದಾರೆ.ಕನಕ ಭವನ ದೇಣಿಗೆ ಕೂಡ ಕ್ಯೂಆರ್ ಕೋಡ್ ಮೂಲಕವೇ ಸ್ವೀಕರಿಸಲಾಗುತ್ತಿದೆ.

 

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಗೆ ಸಿಗಲಿದೆ ವಿಶೇಷ ಗಿಫ್ಟ್!

ಇನ್ನು ರಾಮ ಜನ್ಮಭೂಮಿ ಟ್ರಸ್ಟ್ ರಾಮ ಮಂದಿರಕ್ಕಾಗಿ ದೇಣಿಕೆ ಸಂಗ್ರಹ ಆರಂಭಿಸಿದಾಗ, 2000 ರೂಪಾಯಿಗಿಂತ ಹೆಚ್ಚಿನ ದೇಣಿಗೆ ನೀಡಲು ಕ್ಯೂಆರ್ ಕೋಡ್ ಅಥವಾ ಆನ್‌ಲೈನ್ ಟ್ರಾನ್ಸಾಕ್ಷನ್ ಮಾಡಬೇಕಿತ್ತು. ಈ ವೇಳೆ ಬಹುತೇಕರು ಕ್ಯೂಆರ್ ಕೋಡ್ ಮೂಲಕ ದೇಣಿಗೆ ನೀಡಿದ್ದಾರೆ ಡಿಜಿಟಲ್ ಇಂಡಿಯಾ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಆಯೋಧ್ಯ ಡಿಜಿಟಲ್ ಟ್ರಾನ್ಸಾಕ್ಷನ್ ಹಬ್ ಆಗಿ ಮಾರ್ಪಡುತ್ತಿದೆ. 

ಭಾರತದ ಡಿಜಿಟಲ್ ಪೇಮೆಂಟ್  ವೇಗ ಶೇಕಡಾ 45ರಷ್ಟು ಏರಿಕೆಯಾಗಿದೆ. ಬರೋಬ್ಬರಿ 12,020 ಕೋಟಿ ರೂಪಾಯಿ ಕ್ಯಾಶ್‌ಲೆಸ್ ವ್ಯವಹಾರ ನಡೆದಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ.ಭಾಗವತ್ ಕಿಶನ್‌ರಾವ್ ಹೇಳಿದ್ದಾರೆ. ಇದರಲ್ಲಿ ತ್ವರಿತಗತಿಯಲ್ಲಿ ಡಿಜಿಟಲ್ ಪಾವತಿ ಮೂಲಕ ಬೆಳವಣಿಗೆ ಕಾಣುತ್ತಿರುವ ಆಯೋಧ್ಯೆ ಕೂಡ ಸೇರಿಕೊಂಡಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದ ಸಿಎಂ ಮಮತಾ ಬ್ಯಾನರ್ಜಿ!

ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಈಗಲೇ ಭಕ್ತರು ಆಯೋಧ್ಯೆಯತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಆಯೋಧ್ಯೆಯಲ್ಲಿನ ವ್ಯಾಪಾರ ವಹಿವಾಟುಗಳು ದುಪ್ಪಟ್ಟಾಗಿದೆ. ಜನವರಿ 22ರ ಬಳಿಕ ಆಯೋಧ್ಯೆ ಆಧ್ಯಾತ್ಮಿಕ ಕೇಂದ್ರದ ಜೊತೆಗೆ ವ್ಯಾಪಾರ ವಹಿವಾಟಿನಲ್ಲೂ ದಾಖಲೆ ಬರೆಯಲಿದೆ. ಜನವರಿ 22 ರಂದು ಆಯೋಧ್ಯೆ ರಾಮ ಮಂದಿರದ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
 

Follow Us:
Download App:
  • android
  • ios