Asianet Suvarna News Asianet Suvarna News

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಗೆ ಸಿಗಲಿದೆ ವಿಶೇಷ ಗಿಫ್ಟ್!

ರಾಮ ಮಂದಿರ ಪ್ರಾಣಪ್ರತಿಷ್ಠೆ ಹಾಗೂ ಉದ್ಘಾಟನೆಗೆ ದೇಶ ವಿದೇಶಗಳ ಗಣ್ಯರು ಆಗಮಿಸುತ್ತಿದ್ದಾರೆ. ಸಾವಿರಾರು ಸಾಧು ಸಂತರು, ಸ್ವಾಮೀಜಿಗಳು, ನಾಯಕರನ್ನು ಆಹ್ವಾನಿಸಲಾಗಿದೆ. ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಟ್ರಸ್ಟ್ ವಿಶೇಷ ಗಿಫ್ಟ್ ನೀಡುತ್ತಿದೆ.

Ram Mandir Prana Prathishta invitees receives Special gift from Janmbhoomi Trust ckm
Author
First Published Dec 27, 2023, 8:48 PM IST

ಆಯೋಧ್ಯೆ(ಡಿ.27) ರಾಮ ಮಂದಿರ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ದೇಶಾದ್ಯಂತ ರಾಮ ಭಕ್ತರು ಸ್ಮರಣೀಯ ಕ್ಷಣಕ್ಕಾಗಿ ಕಾದು ಕುಳಿತಿದ್ದಾರೆ. ಈಗಾಗಲೇ ಆಯೋಧ್ಯೆಯತ್ತ ಭಕ್ತರು ಧಾವಿಸುತ್ತಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠಗೆ ದೇಶ ವಿದೇಶದ ಗಣ್ಯರನ್ನು, ಸಾಧು ಸಂತರು, ಸ್ವಾಮೀಜಿಗಳು, ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಇದೀಗ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳುವ ಆಹ್ವಾನಿತರಿಗೆ ರಾಮ ಜನ್ಮಭೂಮಿ ಟ್ರಸ್ಟ್ ವಿಶೇಷ ಉಡುಗೊರೆಯೊಂದನ್ನು ನೀಡಲಿದೆ. ಈ ಕುರಿತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಘೋಷಣೆ ಮಾಡಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಆಗಮಿಸುವ ಆಹ್ವಾನಿತರಿಗೆ ನೀಡುವ ಉಡುಗೊರೆಯಲ್ಲಿ ರಾಮ ಮಂದಿರದ ಪ್ರಸಾದ ಹಾಗೂ ಗೀತಾ ಪ್ರೆಸ್ ಪ್ರಕಟಿಸಿರುವ ಆಯೋಧ್ಯೆ ದರ್ಶನ ಪುಸ್ತಕ ಇರಲಿದೆ. ಆಯೋಧ್ಯೆ ದರ್ಶನ ಪುಸ್ತಕದಲ್ಲಿ ಆಯೋಧ್ಯೆ ನಗರ, ರಾಮಾಯಣ, ರಾಮ ಮಂದಿರದ ಇತಿಹಾಸ, ಹೋರಾಟ ಕುರಿತು ಹಲವು ಕುತೂಹಲ ಮಾಹಿತಿಯೂ ಇರಲಿದೆ. 

ರಾಮ ಮಂದಿರ ಪ್ರಾಣಪ್ರತಿಷ್ಠೆಯಿಂದ ದೂರ ಉಳಿದ ಸಿಎಂ ಮಮತಾ ಬ್ಯಾನರ್ಜಿ!

ಪುಸ್ತಕದ ಮುಖಮುಖದಲ್ಲಿ ಶ್ರೀರಾಮ ಹಾಗೂ ರಾಮ ಮಂದಿರದ ಫೋಟೋ ಇರಲಿದೆ. 10,000 ಆಯೋಧ್ಯೆ ದರ್ಶನ ಪುಸ್ತಕ ಪ್ರಿಂಟ್ ಮಾಡಲಾಗಿದೆ. ಕೆಲ ಆಹ್ವಾನಿತರ ಗಣ್ಯರು ಇದರ ಜೊತೆ ಹೆಚ್ಚುವರಿ ಮೂರು ಪುಸ್ತಕಗಳನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಆಯೋಧ್ಯೆ ಮಹಾತ್ಮೆ, ಗೀತಾ ಗೀತಾ ದಯನಂದಿನಿ ಹಾಗೂ ಕಲ್ಯಾಣ ಪತ್ರ ಪುಸ್ತಕವನ್ನೂ ಉಡುಗೊರೆಯಾಗಿ ನೀಡಲಿದ್ದಾರೆ.

ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶದ ಹಲವಾರು ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ಆದರೆ ಈ ಆಹ್ವಾನವನ್ನು ಎಡಪಕ್ಷಗಳು ತಿರಸ್ಕರಿಸಿವೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿವೆ. ಮತ್ತೊಂದೆಡೆ ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಕೂಡ ತಾವು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಆಹ್ವಾನ ತಿರಸ್ಕರಿಸುತ್ತಿರುವುದಕ್ಕೆ ಬಿಜೆಪಿ ತಿರುಗೇಟು ಕೊಟ್ಟಿದೆ. ಶ್ರೀರಾಮಚಂದ್ರ ಯಾರ್‍ಯಾರನ್ನು ಕರೆಯುತ್ತಾನೋ ಅವರೆಲ್ಲಾ ಬರುತ್ತಾರೆ ಎಂದು ಟಾಂಗ್‌ ನೀಡಿದೆ.

ರಾಮಮಂದಿರ ಉದ್ಘಾಟನೆಯಿಂದ CPI(M) ದೂರ, ಅಸುರರು ದೇವಲೋಕ ಪ್ರವೇಶಿಸಲ್ಲ ಎಂದ ಜನ!

ಈ ನಡುವೆ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಆಹ್ವಾನ ಬಂದಿದೆ. ಆದರೆ ಅವರು ಹಾಜರಾಗುತ್ತಾರಾ? ಅಥವಾ ಗೈರು ಹಾಜರಾಗುತ್ತಾರಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
 

Follow Us:
Download App:
  • android
  • ios