ಆಯೋಧ್ಯೆ ರಾಮ ಮಂದಿರ ಅರ್ಚಕ ಸೇವೆಗೆ 3,000 ಅರ್ಜಿ, 20 ಮಂದಿ ಆಯ್ಕೆ!

ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ.  ಇದರ ಜೊತೆಗೆ ಮಂದಿರದಲ್ಲಿ ಪ್ರತಿದಿನದ ಪೂಜಾ ಕೈಂಕರ್ಯಗಳಿಗೆ ಅರ್ಚಕರ ನೇಮಕ ಮಾಡಲಾಗುತ್ತಿದೆ. 20 ಸ್ಥಾನಕ್ಕೆ ಬರೋಬ್ಬರಿ 3000 ಅರ್ಚಕರು ಅರ್ಜಿ ಸಲ್ಲಿಸಿದ್ದಾರೆ.

Ayodhya Ram mandir 20 priest selected out of 3000 application says janmabhoomi teerth kshetra trust ckm

ಆಯೋಧ್ಯೆ(ನ.21) ಆಯೋಧ್ಯೆ ಶ್ರೀ ರಾಮ ಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಭವ್ಯ ರಾಮ ಮಂದಿರ ಉದ್ಘಾಟನೆಗೆ ಸಕಲ ತಯಾರಿಗಳು ನಡೆಯುತ್ತಿದೆ. ಆಹ್ವಾನ ಪತ್ರಿ, ಅಕ್ಷತೆ ಪೂಜೆ ಪ್ರಸಾದ ಪ್ರತಿ ಮನೆಗೆ ಹಂಚಲು ತಯಾರಿಗಳು ನಡೆಯುತ್ತಿದೆ. ಇದೀಗ ಶ್ರೀ ರಾಮ ಮಂದಿರದಲ್ಲಿ ಪ್ರತಿ ನಿತ್ಯ ಪೂಜಾ ಕೈಂಕರ್ಯಗಳ ಸೇವೆಗೆ ಅರ್ಜಕರ ನೇಮಕ ನಡೆಯುತ್ತಿದೆ. ರಾಮ ಮಂದಿರದಲ್ಲಿನ ಪ್ರತಿ ದಿನದ ಪೂಜಾ ಕೈಂಕರ್ಯಕ್ಕೆ 20 ಅರ್ಜಕರ ಅವಶ್ಯಕತೆ ಇದೆ. ಇದಕ್ಕಾಗಿ ಬರೋಬ್ಬರಿ 3,000 ಅರ್ಜಿಗಳು ಬಂದಿವೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂದರ್ಶನದ ಮೂಲಕ ಅರ್ಚಕರನ್ನು ಆಯ್ಕೆ ಮಾಡಲಿದೆ. ಈಗಾಗಲೇ ಬಂದಿರುವ 3000 ಅರ್ಜಿಗಳ ಪೈಕಿ 200 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಈ ಪೈಕಿ 20 ಅರ್ಚಕರನ್ನು ನೇಮಕ ಮಾಡಲಾಗುತ್ತದೆ. ನೇಮಕಗೊಂಡ ಅರ್ಚಕರಿಗೆ 6 ತಿಂಗಳ ತರಬೇತಿ ನೀಡಲಾಗುತ್ತದೆ. ಇನ್ನು ಶಾರ್ಟ್ ಲಿಸ್ಟ್ ಮಾಡಿರುವ ಎಲ್ಲಾ ಅರ್ಚಕರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಭವಿಷ್ಯದಲ್ಲಿ ಅರ್ಚಕರ ಅಗತ್ಯವಿದ್ದರೆ, ಈ ಶಾರ್ಟ್ ಲಿಸ್ಟ್ ಮಾಡಿದ ಅರ್ಚಕರ ನೇಮಕ ಮಾಡಲಾಗುತ್ತದೆ.

 

ರಾಮ ಮಂದಿರ ಸಾರ್ವಜನಿಕರಿಗೆ ಮುಕ್ತ ಯಾವಾಗ? ದಿನಾಂಕ ಬಹಿರಂಗಪಡಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳಲು ವಿಶ್ವಾದ್ಯಂತ 10 ಕೋಟಿ ಹಿಂದೂ ಕುಟುಂಬಗಳಿಗೆ ಆಹ್ವಾನ ನೀಡಲಾಗುತ್ತಿದೆ. ವಿಶ್ವ ಹಿಂದು ಪರಿಷದ್‌ನ ಕಾರ್ಯಕರ್ತರು ಮನೆಗೆ ತೆರಳಿ ಆಹ್ವಾನ ನೀಡಲಿದ್ದಾರೆ. ಆಹ್ವಾನ ಪತ್ರಿಕೆಯೊಂದಿಗೆ ರಾಮನ ಚಿತ್ರವನ್ನು ನೀಡಲಾಗುತ್ತದೆ. ಈ ವೇಳೆ ಯಾವುದೇ ರೀತಿಯ ಕಾಣಿಕೆ ಸಂಗ್ರಹ ಮಾಡುವುದಿಲ್ಲ. ವಿಶೇಷವಾಗಿ ರಾಮಜನ್ಮಭೂಮಿ ಹೋರಾಟದಲ್ಲಿ ಮಡಿದವರ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗುತ್ತದೆ. ಅವರಿಗೆ ಜ.27ರಿಂದ ಫೆ.22ರವರೆಗೆ ಗುಂಪುಗಳಾಗಿ ಮಾಡಿ ಸ್ವಾಮಿ ದರ್ಶನ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಮ ಮಂದಿರ ದೇಗುಲದ 3 ಮಹಡಿಯಲ್ಲಿ ಇರುವ ಎಲ್ಲ 18 ಬಾಗಿಲುಗಳಿಗೂ ಕೂಡಾ ಸ್ವರ್ಣ ಲೇಪನ ಮಾಡಲಾಗುತ್ತಿದೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಅಕ್ಷತೆ ಪೂಜೆ ನೆರವೇರಿಸಲಾಗಿದೆ. ಅಯೋಧ್ಯೆ ರಾಮ ದರ್ಬಾರ್‌ನಲ್ಲಿ 100 ಕ್ವಿಂಟಾಲ್‌ ಅಕ್ಕಿಗೆ ಶುದ್ಧ ಅರಶಿಣ ಮತ್ತು ತುಪ್ಪವನ್ನು ಬೆರೆಸಿ ಮಿಶ್ರಣ ಮಾಡಿ ಅಕ್ಷತೆ ಪೂಜೆ ನಡೆಸಲಾಗಿದೆ.

ಆಯೋಧ್ಯೆ ದೀಪಾವಳಿಯ ಅದ್ಭುತ ಚಿತ್ರ ಹಂಚಿಕೊಂಡ ಪ್ರಧಾನಿ ಮೋದಿ, ಮರುಕಳಿಸಿದ ಗತವೈಭವ!

Latest Videos
Follow Us:
Download App:
  • android
  • ios