ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟನೆಗೆ ಜಮೀಯತ ಉಲೇಮಾ ಮುಸ್ಲಿಂ ಸಂಘಟನೆ ವಿರೋಧ!
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಇದೀಗ ಹೊಸ ವಿವಾದ ಶುರುವಾಗಿದೆ. ಬಾಬ್ರಿ ಮಸೀದಿ ವಿರುದ್ದ ತೀರ್ಪು ನೀಡಿರುವುದೇ ತಪ್ಪು ಎಂದಿರುವ ಜಮೀಯತ್-ಉಲೇಮಾ-ಇ-ಹಿಂದ್, ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟಿಸಬಾರದು ಎಂದಿದೆ.
ಆಯೋಧ್ಯೆ(ಅ.28) ಬರೋಬ್ಬರಿ 500 ವರ್ಷಗಳಿಂದ ನಡೆಯುತ್ತಿದ್ದ ಶ್ರೀ ರಾಮ ಮಂದಿರ ವಿವಾದಕ್ಕೆ ಸುಪ್ರೀಂ ಕೋರ್ಟ್ ಅಂತ್ಯಹಾಡಿತ್ತು. ಬಳಿಕ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಇದೀಗ ಇನ್ನೂ ಮೂರು ತಿಂಗಳಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಜನವರಿ 22, 2024ರಂದು ರಾಮ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದೀಗ ಹೊಸ ವಿವಾದವೊಂದು ಶುರುವಾಗಿದೆ. ಬಾಬ್ರಿ ಮಸೀದಿ ವಿರುದ್ಧ ನೀಡಿರುವ ತೀರ್ಪು ಸಂಪೂರ್ಣ ತಪ್ಪು ಎಂದು ಜಮೀಯತ್-ಉಲೇಮಾ-ಇ-ಹಿಂದ್ ಸಂಘಟನೆಯ ಮುಖ್ಯಸ್ಥ ಮೌಲಾನ ಮಹಮೂದ್ ಮದನಿ ಹೇಳಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಉದ್ಘಾಟನೆ ಮಾಡಬಾರದು. ಇದು ಸರಿಯಲ್ಲ ಎಂದು ಮದನಿ ಅಸಮಾಧಾನ ಹೊರಹಾಕಿದ್ದಾರೆ.
‘ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ನಾಯಕರು ಭಾಗವಹಿಸಬೇಕೆ ವಿನಃ ರಾಜಕೀಯ ಮುಖಂಡರು ಭಾಗವಹಿಸುವುದು ಸರಿಯಲ್ಲ. ಅಲ್ಲದೆ ಒಂದು ದೇಶದ ಪ್ರಧಾನಿಯಾಗಿ ಒಂದು ಧರ್ಮದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ’ ಎಂದು ಮಹಮೂದ್ ಮದನಿ ಹೇಳಿದ್ದಾರೆ.
ಆಯೋಧ್ಯೆ ಭವ್ಯ ರಾಮ ಮಂದಿರದೊಳಗೆ ಏನೇನಿದೆ? ಫೋಟೋ ಹಂಚಿಕೊಂಡ ಜನ್ಮಭೂಮಿ ಟ್ರಸ್ಟ್!
ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡುವುದೇ ಅತೀ ದೊಡ್ಡ ತಪ್ಪು. ಇದು ಪ್ರಧಾನಿಗಳ ಕೆಲಸವಲ್ಲ. ಧಾರ್ಮಿಕ ಮುಖಂಡರು ಇಂತಹ ಕಾರ್ಯಕ್ರಮಗಳ ಉದ್ಘಾಟನೆ ಮಾಡಬೇಕು. ಪ್ರಧಾನಿ ಮೋದಿ ಇದರಿಂದ ದೂರ ಉಳಿಯಬೇಕು ಎಂದು ಮಹಮೂದ್ ಮದನಿ ಹೇಳಿದ್ದಾರೆ. ಆದರೆ ಮದನಿ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ರಾಮ ಮಂದಿರ ವಿವಾದ ಬಗೆ ಹರಿಸಿ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ಪ್ರಧಾನಿ ಮೋದಿ ಕೊಡುಗೆಯೂ ಇದೆ. ಪ್ರಧಾನಿಯೇ ಶಂಕುಸ್ಥಾಪನೆ ಮಾಡಿದ್ದಾರೆ. ಇದೀಗ ಪ್ರಧಾನಿ ಮೋದಿಯೇ ಉದ್ಘಾಟನೆ ಮಾಡಲಿದ್ದಾರೆ ಎಂದು ಹಲವು ಪ್ರತಿಕ್ರಿಯಿಸಿದ್ದಾರೆ.
ಆಯೋಧ್ಯೆ ರಾಮ ಮಂದಿರದಲ್ಲಿ ಮುಂದಿನ ರಾಮನವಮಿ, ದೇಶದ ಜನತೆಗೆ ಮೋದಿ ಸಂದೇಶ!
ಇತ್ತ ಆಯೋಧ್ಯೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ತಪ್ಪು ಎಂದು ಮದನಿ ಹೇಳಿದ್ದಾರೆ. ಇದು ಬಾಬ್ರಿ ಮಸೀದಿಗೆ ವಿರುದ್ಧವಾಗಿ ಬಂದಿದೆ. ಆಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇತ್ತು. ಇದನ್ನು ಧ್ವಂಸಗೊಳಿಸಿರುವುದು ಜಗತ್ತಿಗೆ ತಿಳಿದಿದೆ. ಹೀಗಿರುವಾಗ ಬಾಬ್ರಿ ಮಸೀದಿ ಬದಲು ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿರುವುದು ತಪ್ಪು ಎಂದು ಮದನಿ ಹೇಳಿದ್ದಾರೆ.
ಶ್ರೀರಾಮ ಮಂದಿರದ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಮುಹೂರ್ತ ಅಧಿಕೃತವಾಗಿ ನಿಗದಿಯಾಗಿದ್ದು, ಮುಂದಿನ ವರ್ಷ ಜ.22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಹಾಗೂ ಮಂದಿರವನ್ನು ಉದ್ಘಾಟಿಸಲಿದ್ದಾರೆ.