ಆಯೋಧ್ಯೆ ಭವ್ಯ ರಾಮ ಮಂದಿರದೊಳಗೆ ಏನೇನಿದೆ? ಫೋಟೋ ಹಂಚಿಕೊಂಡ ಜನ್ಮಭೂಮಿ ಟ್ರಸ್ಟ್!
ಜನವರಿ 22, 2024ರಂದು ಭವ್ಯ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ.ಹಿಂದೂಗಳ ಬರೋಬ್ಬರಿ 500 ವರ್ಷಗಳ ಕಾಯುವಿಕೆ ಬಳಿಕ ಆಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಕುತೂಹಲ ಹೆಚ್ಚಾಗುತ್ತಿದ್ದಂತೆ ರಾಮ ಜನ್ಮಭೂಮಿ ಟ್ರಸ್ಟ್ ರಾಮ ಮಂದಿರದೊಳಗಿನ ಕೆತ್ತನೆ ಫೋಟೋಗಳನ್ನು ಹಂಚಿಕೊಂಡಿದೆ.
ಬರೋಬ್ಬರಿ 500 ವರ್ಷಗಳ ಬಳಿಕ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಜನವರಿ 22, 2024ರಂದು ರಾಮ ಮಂದಿರ ಉದ್ಘಾಟನೆಗೊಳ್ಳುತ್ತಿದೆ.
ಉದ್ಘಾಟನೆ, ಪ್ರಾಣಪ್ರತಿಷ್ಠಾಪನೆ, ಮೂರ್ತಿ ಪ್ರತಿಷ್ಠಾಪನೆ ದಿನಾಂಕಗಳು ನಿಗದಿಯಾಗಿದೆ. ಹೀಗಾಗಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದರ ನಡುವೆ ಆಯೋಧ್ಯೆ ರಾಮ ಮಂದಿರದೊಳಗಿನ ಕೆತ್ತನೆ ಫೋಟೋಗಳು ಬಹಿರಂಗವಾಗಿದೆ.
ಆಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಈ ಫೋಟೋಗಳನ್ನು ಹಂಚಿಕೊಂಡಿದೆ. ರಾಮ ಮಂದಿರದೊಳಗಿನ ಮಂಟಪದ ಕೆತ್ತನೆಯ ಸುಂದರ ಫೋಟೋಗಳನ್ನು ಟ್ರಸ್ಟ್ ಹಂಚಿಕೊಂಡಿದೆ.
ಅತೀ ಸೂಕ್ಷ್ಮ ಕೆತ್ತನೆಗಳು ಈ ಪೋಟೋದಲ್ಲಿ ಗೋಚರಿಸುತ್ತಿದೆ. ಈ ಫೋಟೋದಿಂದ ಇದೀಗ ರಾಮ ದರ್ಶನದ ಕಾಯುವಿಕೆ ಹೆಚ್ಚಾಗುತ್ತಿದೆ. ಟ್ರಸ್ಟ್ ಫೋಟೋ ಹಂಚಿದ ಬೆನ್ನಲ್ಲೇ ಜೈ ಶ್ರೀರಾಮ್ ಎಂದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಮ ಮಂದಿರ ಉದ್ಘಾಟನೆಗೂ ಮೊದಲು ಜನವರಿ 16, 2024ರಂದು ಪ್ರಾಣ ಪ್ರತಿಷ್ಠಾಪನೆ ಪೂಜೆ ಆರಂಭಗೊಳ್ಳಲಿದೆ.ಇನ್ನು ಜನವರಿ 17 ರಂದು ರಾಮಲಲ್ಲಾ ಮೂರ್ತಿ ಶೋಭಯಾತ್ರೆ ನಡೆಯಲಿದೆ.
ಜನವರಿ 18 ರಂದು ವಾಯು ಮತ್ತು ವರುಣ ಪೂಜೆ ನಡೆಯಲಿದೆ. ಜನವರಿ 19 ರಂದು ವಾಸ್ತು ಶಾಂತಿ, ಅಗ್ನಿ ಸ್ಥಾಪನಾ ಸೇರಿದಂತೆ ಹಲವು ಪೂಜೆಗಳು ನಡೆಯಲಿದ್ದು, ಮರುದಿನ ಗರ್ಭಗುಡಿ ಶುದ್ಧಿಕರಣ ನಡೆಯಲಿದೆ.
ಜನವರಿ 21 ರಂದು 125 ಕಲಶಾಭೀಷೇಕ ನಡೆಯಲಿದೆ. ಇನ್ನು ಜನವರಿ 22 ರಂದು ರಾಮಲ್ಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಈ ಮೂಲಕ ರಾಮ ಮಂದಿರ ಸಾರ್ವಜನಕರ ದರ್ಶನಕ್ಕೆ ತೆರೆದುಕೊಳ್ಳಲಿದೆ.
2019ರ ನ.9ರಂದು ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿತ್ತು. ಬಳಿಕ ಆಗಸ್ಟ್ 5, 2020 ರಂದು ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ್ದರು.