ವಿಪಕ್ಷಗಳಿಂದ ಅಮಿತ್ ಶಾ ತರಾಟೆ: ಏಕಾಏಕಿ ಬಂದ್ ಆದ ರಾಜ್ಯಸಭಾ ಟಿವಿ!
ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಬಿಸಿ ಬಿಸಿ ಚರ್ಚೆ| ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಸಮರ್ಥ ವಾದ ಮಂಡನೆ| ಪೌರತ್ವ ಮಸೂದೆ ವಿರೋಧಿಸಿ ವಿಪಕ್ಷಗಳಿಂದ ಭಾರೀ ಪ್ರತಿಭಟನೆ| ವಿಪಕ್ಷಗಳ ಗಲಾಟೆ ವೇಳೆ ಏಕಾಏಕಿ ಪ್ರಸಾರ ನಿಲ್ಲಿಸಿದ ರಾಜ್ಯಸಭೆ ಟಿವಿ|
ನವದೆಹಲಿ(ಡಿ.11): ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಸೂದೆ ಕುರಿತು ಸದನದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ.
ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!
ಇತ್ತ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ವಿಪಕ್ಷಗಳೂ ಕೂಡ ಹಿಂದೆ ಬಿದ್ದಿಲ್ಲ. ಪೌರತ್ವ ಮಸೂದೆ ವಿರೋಧಿಸಿ ವಿಪಕ್ಷಗಳು ಸದನದಲ್ಲಿ ಭಾರೀ ಪ್ರತಿಭಟನೆಯನ್ನೇ ನಡೆಸುತ್ತಿದ್ದು, ಈ ಮಸೂದೆ ದೇಶವನ್ನು ಒಡೆಯಲಿದೆ ಎಂದು ಹರಿಹಾಯ್ದಿವೆ.
ಈ ಮಧ್ಯೆ ರಾಜ್ಯಸಭೆಯಲ್ಲಿ ವಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಏಕಾಏಕಿ ರಾಜ್ಯಸಭೆ ಟಿವಿ ತನ್ನ ಪ್ರಸಾರವನ್ನು ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!
ವಿರೋಧ ಪಕ್ಷಗಳ ನಾಯಕರು ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ತೀವ್ರ ಗದ್ದಲದ ಪರಿಣಾಮ ಸಭಾಪತಿ ವೆಂಕಯ್ಯ ನಾಯ್ಡು 'ನಥಿಂಗ್ ಶುಡ್ ಬಿ ಶೋನ್'(ಏನನ್ನೂ ತೋರಿಸುವಂತಿಲ್ಲ)ಎಂದು ಆದೇಶಿಸಿದರು.
ಕೂಡಲೇ ರಾಜ್ಯಸಭೆ ಟಿವಿ ತನ್ನ ಪ್ರಸಾರವನ್ನು ನಿಲ್ಲಿಸಿದ್ದು, ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆ ಟಿವಿ ಪ್ರಸಾರವಾಗಲಿದೆ ಎಂದು ತೋರಿಸಿದೆ. ರಾಜ್ಯಸಭೆ ಟಿವಿಯ ಈ ನಡೆ ಇದೀಗ ಅನುಮಾನಕ್ಕೆ ಕಾರಣವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ: ಈಶಾನ್ಯ ಧಗಧಗ