Asianet Suvarna News Asianet Suvarna News

ಹುತಾತ್ಮನ ತಾಯಿ ಅಳುವ ವೇಳೆ ಸಚಿವನ ಒತ್ತಾಯಪೂರ್ವಕ ಫೋಟೋ ಸೆಷನ್: ಭಾರೀ ಆಕ್ರೋಶ

ರಜೌರಿಯಲ್ಲಿ ಸಾವನ್ನಪ್ಪಿದ ಸೇನಾ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿ ದುಃಖತಪ್ತಳಾಗಿ ಅಳುತ್ತಿದ್ದರೂ, ಉತ್ತರಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು, ಆಕೆಗೆ ಪರಿಹಾರದ ಚೆಕ್‌ ನೀಡಿ ಬಲವಂತವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

Rajouri Encounter Uttar Pradesh Minister forced photo session while martyrs mother cries video viral akb
Author
First Published Nov 25, 2023, 8:25 AM IST

ಆಗ್ರಾ: ರಜೌರಿಯಲ್ಲಿ ಸಾವನ್ನಪ್ಪಿದ ಸೇನಾ ಕ್ಯಾಪ್ಟನ್ ಶುಭಂ ಗುಪ್ತಾ ಅವರ ತಾಯಿ ದುಃಖತಪ್ತಳಾಗಿ ಅಳುತ್ತಿದ್ದರೂ, ಉತ್ತರಪ್ರದೇಶದ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು, ಆಕೆಗೆ ಪರಿಹಾರದ ಚೆಕ್‌ ನೀಡಿ ಬಲವಂತವಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಸಚಿವ ಯೋಗೇಂದ್ರ ಉಪಾಧ್ಯಾಯ (Yogendra Upadyaya) ಮತ್ತು ಶಾಸಕ ಜಿ.ಎಸ್ ಧರ್ಮೇಶ್ ಅವರು ಶುಭಂ ಗುಪ್ತಾ ಮನೆಗೆ ಭೇಟಿ ನೀಡಿದಾಗ ತಾಯಿ ರೋದಿಸುತ್ತಿದ್ದರು. ಈ ವೇಳೆ ಸರ್ಕಾರದ ಪರಿಹಾರ ತಮಗೆ ಬೇಡ ಎಂದೂ ಹೇಳಿದರು. ಆದರೂ ಸಚಿವರು ಬಲವಂತವಾಗಿ ಪರಿಹಾರದ ಚೆಕ್ ವಿತರಿಸಿ ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಪಾಕ್‌ ಮಾಜಿ ಯೋಧರು ಈಗ ಉಗ್ರರು: ಐವರ ಬಲಿ ಪಡೆದ ರಜೌರಿ ದಾಳಿ ಹಿಂದೆ ಪಾಕ್ ಸೈನಿಕರು

ಇದನ್ನು ವ್ಯಾಪಕವಾಗಿ ಟೀಕಿಸಿರುವ ಕಾಂಗ್ರೆಸ್ ಹಾಗೂ ಆಪ್ ಪಕ್ಷಗಳು, ಬಿಜೆಪಿಯ (BJP) ಈ ನಡೆ ರಣಹದ್ದುಗಳಿಗೆ ಸಮಾನ ಮತ್ತು ಬಿಜೆಪಿಯೆಂದರೆ ಬೇಷರಮ್ (ಅಸಹ್ಯಕರವಾದ) ಪ್ರಚಾರಕ ಪಕ್ಷ ಎಂದು ಜರಿದಿದೆ.

ಮದುವೆಗೆ ಬರಬೇಕಿದ್ದ ಮಗ, ಹೆಣವಾಗಿ ಬಂದ; ಸಂಭ್ರಮದ ಊರಲ್ಲಿ ಈಗ ಬರೀ ಸೂತಕ!

 

Follow Us:
Download App:
  • android
  • ios