Asianet Suvarna News Asianet Suvarna News

ಮೊದಲ ರಾತ್ರಿಯೇ ಅವಾಂತರ: ಸೀಲಿಂಗ್ ಫ್ಯಾನ್ ಬಿದ್ದು ಮದುಮಗನ ಸ್ಥಿತಿ ಗಂಭೀರ

ಮೊದಲ ರಾತ್ರಿ ದಿನವೇ ನವ ವಿವಾಹಿತರು ಮಲಗಿದ್ದ ಕೋಣೆಯಲ್ಲಿ  ಸೀಲಿಂಗ್ ಫ್ಯಾನ್ ಬಿದ್ದು, ಮದುಮಗ ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ.

Rajasthan Tragedy on first night Groom criticaly injuired after Ceiling fan fell on him akb
Author
First Published Jun 19, 2023, 10:33 AM IST | Last Updated Jun 19, 2023, 10:48 AM IST

ರಾಜಸ್ಥಾನ:  ಮೊದಲ ರಾತ್ರಿ ದಿನವೇ ನವ ವಿವಾಹಿತರು ಮಲಗಿದ್ದ ಕೋಣೆಯಲ್ಲಿ  ಸೀಲಿಂಗ್ ಫ್ಯಾನ್ ಬಿದ್ದು, ಮದುಮಗ ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾಗಿ ಮಾರನೇ ದಿನವೇ ನವ ದಂಪತಿಗಳ ಮೊದಲ ರಾತ್ರಿ ಆಯೋಜನೆ ಮಾಡಲಾಗಿದ್ದು, ಇದಕ್ಕಾಗಿ ಕೋಣೆಯನ್ನು ಶೃಂಗಾರಗೊಳಿಸಲಾಗಿತ್ತು. ಆದರೆ ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು, ಮದುಮಗನ ಕುತ್ತಿಗೆಗೆ 26 ಸ್ಟಿಚ್‌ಗಳನ್ನು ಹಾಕಲಾಗಿದೆ. 

ನಾಗಪುರ ಜಿಲ್ಲೆಯ ದಿವಾನಾ ಪ್ರದೇಶದ ಮಕ್ರನಾ ನಗರದಲ್ಲಿ  ಈ ಘಟನೆ ನಡೆದಿದೆ.  ಮೊದಲ ರಾತ್ರಿಗೆ ಶೃಂಗರಿಸಿದ ಮನೆಯಲ್ಲಿ ಯುವಕ ಮಲಗಿದ್ದು,  ಈ ವೇಳೆ ಫ್ಯಾನ್ ಕಳಚಿ ಯುವಕನ ಮೇಲೆ ಬಿದ್ದಿದೆ.  ಪರಿಣಾಮ ಯುವಕನ ಕುತ್ತಿಗೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ.  ಕೂಡಲೇ ಯುವಕನನ್ನು ಆಸ್ಪತ್ರೆಗೆ ಕುಟುಂಬದವರು ಸಾಗಿಸಿದ್ದು,  ವೈದ್ಯರು ಆತನ ಕುತ್ತಿಗೆಗೆ 26 ಹೊಲಿಗೆ ಹಾಕಿದ್ದಾರೆ.  ಪ್ರಸ್ತುತ ಯುವಕನ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಛೇ ನಾನು ಫಸ್ಟ್ ನೈಟಲ್ಲಿ ಈ ತಪ್ಪು ಮಾಡಬಾರದಿತ್ತು, ಪುರುಷರ ತಪ್ಪೊಪ್ಪಿಗೆ 

ಅಂದ ಹಾಗೆ ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಕ್ರಂ ಅಬ್ದುಲ್ ಸಿಸೋಡಿಯಾ ಎಂಬಾತನೇ ಹೀಗೆ ಫ್ಯಾನ್ ಬಿದ್ದು ಗಾಯಗೊಂಡ ನತದೃಷ್ಟ ವರ,  ಜೂನ್ 9 ರಂದು ಈತನ ಮದುವೆ ನಡೆದಿತ್ತು. ಗೌಡಬಸ್ ಮೊಹಲ್ಲಾ ನಿವಾಸಿಯಾಗಿದ್ದ ಇಕ್ರಂ ಅಬ್ದುಲ್ಲಾ ಸರಾಯ್ ನಿವಾಸಿ  ಜನ್ನತ್ ಎಂಬಾಕೆಯನ್ನು ವಿವಾಹವಾಗಿದ್ದ. ಈ  ಮದುವೆ ಸಡಗರದಲ್ಲಿ ಕುಟುಂಬದವರೆಲ್ಲಾ ಮುಳುಗಿದ್ದಾಗ ಈ ಅವಾಂತರ ನಡೆದಿದೆ. 

ಮೊದಲ ರಾತ್ರಿಯ ನಂತರ ವಧುವನ್ನು ಆಕೆಯ ತಾಯಿ ಮನೆಗೆ ಕಳುಹಿಸಿ ಕೊಡಲಾಗಿದ್ದು, ಮನೆ ಬಂಧುಗಳು ನೆಂಟರಿಷ್ಟರಿಂದ ತುಂಬಿತ್ತು. ಈ ವೇಳೆ ಇಕ್ರಾಂ ತನ್ನ ಮೊದಲ ರಾತ್ರಿಗೆ ಶೃಂಗರಿಸಿದ ಕೋಣೆಯಲ್ಲಿ  ಹಗಲು ಮಲಗಿದ್ದು, ಈ ವೇಳೆ ಆತನ ಮೇಲೆ ಫ್ಯಾನ್ ಕಳಚಿ ಬಿದ್ದಿದೆ.  ಪರಿಣಾಮ ಆತನ ಕುತಿಗೆ ಕೈ ಹಾಗು ತಲೆಗೆ ಗಾಯಗಳಾಗಿದ್ದು, ಆತ ರಕ್ತದ ಮಡುವಲ್ಲಿ ಬಿದ್ದಿದ್ದ, ಕೂಡಲೇ ಸಂಬಂಧಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಮದುವೆಯಾದ ನವದಂಪತಿಗೆ ಮೊದಲ ರಾತ್ರಿಗೂ ಮೊದಲೇ ಹೃದಯಾಘಾತ, ಸಂಭ್ರಮದ ಮನೆಯಲ್ಲಿ ಆಕ್ರಂದನ!

ಈ ರೂಮ್‌ನಲ್ಲಿದ್ದ ಫ್ಯಾನ್ ಹಳೆಯದಾಗಿತ್ತು ಎಂದು ಇಕ್ರಾಂ ತಂದೆ ಶೇಕ್ ರಮ್ಜನ್ (Sheikh Ramzan) ಹೇಳಿದ್ದಾರೆ.  ದೊಡ್ಡ ಅನಾಹುತದಿಂದ ವರ ತಪ್ಪಿಸಿಕೊಂಡಿದ್ದು ಖುಷಿಯ ವಿಚಾರ,  ಇಕ್ರಾಂಗೆ ಪಂಜಾಬ್‌ನ ಅಂಬಾಲಾದಲ್ಲಿ ಮಾರ್ಬಲ್ (marble warehouse) ಶೋ ರೂಮ್ ಇದೆ. ಆತನ ಕುತ್ತಿಗೆಗೆ ಫ್ಯಾನ್ ಬಿದ್ದು ಗಾಯಗಳಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಸ್ಟೇಷನ್ ಆಫೀಸರ್ ಪ್ರಮೋದ್ ಕುಮಾರ್ ಶರ್ಮಾ (Pramod Kumar Sharma) ಹೇಳಿದ್ದಾರೆ.  ಫ್ಯಾನ್ ಬಿದ್ದಿದ್ದರಿಂದ ಆತನ ಕುತ್ತಿಗೆಯ ಎರಡು ಕಡೆಯೂ ಗಾಯಗಳಾಗಿದ್ದು ರಕ್ತದ ಹೊಳೆಯೇ ಹರಿದಿತ್ತು.  ಆತನ ಕುತ್ತಿಗೆಗೆ 26 ಸ್ಟಿಚ್‌ಗಳನ್ನು ಹಾಕಲಾಗಿದೆ ಎಂದು  ಸರ್ಕಾರಿ ಆಸ್ಪತ್ರೆ ವೈದ್ಯ ಡಾ . ಫಾರೂಕ್ ಹೇಳಿದರು.

Latest Videos
Follow Us:
Download App:
  • android
  • ios