ರಾಜಸ್ಥಾನ(ಆ.08):  ಆಟೋ ಚಾಲನೆ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದ 57ರ ಹರೆಯದ ಚಾಲಕ ಗಪ್ಪರ್ ಅಹಮ್ಮದ್ ಕಚ್ವಾಗೆ ವಿನಾಕಾರಣ ಥಳಿಸಲಾಗಿದೆ. ಇಬ್ಬರು ಕಿಡಿಗೇಡಿಗಳು ಜೈ ಶ್ರೀರಾಮ್, ನರೇಂದ್ರ ಮೋದಿ ಜಿಂದಾಬಾದ್ ಎಂದು ಕೂಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮಾಯಕ ಚಾಲಕನ ಮೇಲೆ ಸರಿಯಾಗಿ ಥಳಿಸಿದ ಘಟನೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದಿದೆ.

ಪಾನಿಪುರಿ ಮಾರುವಾತನ ಪ್ರೀತಿಸಿದ ಅಪ್ರಾಪ್ತೆ, ಹೃದಯ ಕದ್ದವನೊಂದಿಗೆ ಬಾಲಕಿ ಪರಾರಿ!

ಶುಕ್ರವಾರ(ಆ.07) ಸಂಜೆ 4 ಗಂಟೆಗೆ ಪ್ರಯಾಣಿಕರನ್ನು ಕರೆದೊಯ್ದು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.  ಆಟೋ ಮೂಲಕ ಬರುತ್ತಿದ್ದ ಗಪ್ಪರ್ ಅಹಮ್ಮದ್ ಅವರನ್ನು ತಮ್ಮ ಕಾರು ಅಡ್ಡ ನಿಲ್ಲಿಸಿದ ಇಬ್ಬರು ಕಿಡಿ ಕೇಡಿಗಳು ತಡೆದಿದ್ದಾರೆ. ಬಳಿಕ ಗುಟ್ಕಾ ಕೇಳಿದ್ದಾರೆ. ತಾನು ಯಾವುದೇ ಅಮಲು ಪದಾರ್ಥ ಸೇವಿಸುವುದಿಲ್ಲ ಎಂದು ಮುಂದೆ ಸಾಗಲು ಯತ್ನಿಸಿದ್ದಾರೆ. ಈ ವೇಳೆ ತಮ್ಮಲ್ಲಿರುವು ಗುಟ್ಕಾ ಸೇವಿಸಲು ಒತ್ತಾಯ ಮಾಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು ಹೇಳಿದ್ದಾರೆ. ಇದನ್ನು ನಿರಾಕರಿಸಿದ ವೇಳೆ ಥಳಿಸಲು ಆರಂಭಿಸಿದ್ದಾರೆ. ಇನ್ನು ನರೇಂದ್ರ ಮೋಜಿ ಜಿಂದಾಬಾದ್ ಘೋಷಣೆ ಕೂಗಲು ಹೇಳಿ ಥಳಿಸಿದ್ದಾರೆ ಎಂದು ಗಪ್ಪರ್ ಅಹಮ್ಮದ್ ಸಂಬಂಧಿ ಹೇಳಿದ್ದಾರೆ. ಈ ಸಂಬಂಧ ಗಪ್ಪರ್ ಅಹಮ್ಮದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಮ್ಮಲ್ಲಿದ್ದ 700 ರೂಪಾಯಿ ಹಾಗೂ ವಾಚ್ ಕಿತ್ತು ಪರಾರಿಯಾಗಿರುವುದಾಗಿ ಹೇಳಿದ್ದಾರೆ.

ಸತಾಯಿಸಿದ ಬಾಸ್ ನಂಬರ್ ಡೇಟಿಂಗ್ ಸೈಟ್‌ಗೆ ಸೇರಿಸಿ, ಮನೆಗೆ ಸೆಕ್ಸ್ ಟಾಯ್ಸ್ ಕಳುಹಿಸಿದ ಉದ್ಯೋಗಿ!.

ಗಪ್ಪರ್ ಅಹಮ್ಮದ್ ದೂರಿನ ಆಧಾರದಲ್ಲಿ ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಸಿಸಿಟಿವಿ ಸೇರಿದಂತೆ ಹಲವು ಮಾಹಿತಿ ಸಂಗ್ರಹಿಸಿ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಂಭುದಯಾಲ್ ಜಾಟ್(35), ರಾಜೇಂದ್ರ ಜಾಟ್(30) ಬಂದಿತ ಆರೋಪಿಗಳು.