ಬೆಂಗಳೂರು(ಆ.08): ಸಾಮಾನ್ಯವಾಗಿ ಕಚೇರಿಗಳಲ್ಲಿ ಕೊಂಚ ಸಮಸ್ಯೆಯಾದರೂ ಉದ್ಯೋಗ ತೊರೆದು ಬೇರೆ ಕಂಪನಿಗೆ ಸೇರುವ ಸಮಯವಿದು. ಆದರೆ ಸದ್ಯ ಕೊರೋನಾ ವೈರಸ್ ಕಾರಣ ಹಲವು ಕೆಲಸ ಕಳೆದುಕೊಂಡಿದ್ದಾರೆ. ದುಡಿಮೆ, ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಹೀಗೆ ಕೆಲಸವಿಲ್ಲದೆ ಆದಾಯವೂ ಇಲ್ಲದ ಉದ್ಯೋಗಿ, ತನ್ನ ಪಿಎಫ್ ಹಣ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಬಾಸ್ ಸ್ಪಂದಿಸಲೇ ಇಲ್ಲ. ಹೀಗಾಗಿ ಬಾಸ್ ಫೋನ್ ನಂಬರನ್ನು ಡೇಟಿಂಗ್ ವೈಬ್‌ಸೈಟ್‌ಗೆ ನಮೂದಿಸಿ, ಮನೆಗೆ ಸೆಕ್ಸ್ ಟಾಯ್ಸ್ ಆರ್ಡರ್ ಮಾಡಿ ಕಳಹಿಸಿಕೊಟ್ಟ ಘಟನೆ ನಡೆದಿದೆ.

ತರಕಾರಿ ಮಾರುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ!

ಬೆಂಗಳೂರಿನ ಕಲ್ಮನೆ ಪ್ರವೇಟ್ ಲಿಮಿಟೆಡ್ ಕಂಪನಿಯ ಉದ್ಯೋಗಿ  ಹರಿಪ್ರಸಾದ್ ಜೋಶಿ , ಕೊರೋನಾ ವೈರಸ್ ಕಾರಣ ಉದ್ಯೋಗ ಹಾಗೂ ಆದಾಯವಿಲ್ಲದೆ ಪರದಾಡಿದ್ದಾನೆ. ಹೀಗಾಗಿ ತನ್ನ ಪಿಎಫ್ ಹಣ ಬಿಡುಗಡೆ ಮಾಡುವಂತೆ ಕಂಪನಿಗೆ ಮನವಿ ಮಾಡಿದ್ದಾನೆ. ಕೊರೋನಾ ವೈರಸ್ ಲಾಕ್‌ಡೌನ್ ಮೊದಲೇ ಪಿಎಪ್ ಹಣ ಕ್ಲೀಯರ್ ಮಾಡುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿದ್ದಾನೆ.

ಹುಬ್ಬಳ್ಳಿ: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಸಾವು; ತನಿಖೆ ತೀವ್ರ...

ಈ ಹಿಂದಿನ ಬಾಸ್‌ಗೆ ಎಲ್ಲಾ ದಾಖಲೆ ನೀಡಿದ್ದರೂ ಪಿಎಫ್ ಕ್ಲೀಯರ್ ಮಾಡಿರಲಿಲ್ಲ. ಇದರಿಂದ ರೋಸಿ ಹೋದ ಉದ್ಯೋಗಿ ಹರಿಪ್ರಸಾದ್ ಜೋಶಿ, ನೂತನ ಬಾಸ್ ಅವಿನಾಶ್ ಪ್ರಭುಗೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರಭು ಕೊರೋನಾ ವೈರಸ್ ಸಮಸ್ಯೆ ಬಗೆ ಹರಿದು ಕಂಪನಿ ಆದಾಯ ಸಹಸ ಸ್ಥಿತಿಗೆ ಮರಳಿ ಎಂದಿದ್ದರು. ಆದರೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ  ಉದ್ಯೋಗಿ ಕಳೆದ ಹಲವು ತಿಂಗಳಿನಿಂದ ಇದಕ್ಕಾಗಿ ಅಲೆದಾಡುತ್ತಿದ್ದು, ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದಾನೆ.

ಉದ್ಯೋಗಿ ಪ್ರತಿ ದಿನ ಕರೆ ಮಾಡಿ ಬಾಸ್‌ಗೆ ಪ್ರಾವಿಡೆಂಟ್ ಫಂಡ್ ಕ್ಲೀಯರ್ ಮಾಡುವಂತೆ ಗೋಗೆರೆಯುತ್ತಿದ್ದ. ಇದರಿಂದ ರೋಸಿ ಹೋದ ಬಾಸ್ ಅವಿನಾಶ್ ಪ್ರಭು, ಪಿಎಫ್ ಹಣ ಕ್ಲೀಯರ್ ಮಾಡಲು ಸಾಧ್ಯವಿಲ್ಲ ಎಂದು ಗದರಿಸಿದ್ದಾನೆ. ದಿಕ್ಕೇ ತೋಚದ ಉದ್ಯೋಗಿ ಜೋಶಿ, ಬಾಸ್ ಮೊಬೈಲ್ ಸಂಖ್ಯೆನ್ನು ಡೇಟಿಂಗ್ ವೈಬ್‌ಸೈಟ್‌ನಲ್ಲಿ ನಮೂದಿಸಿದ್ದಾನೆ.

ಬಾಸ್ ಇಮೇಲ್‌ಗೆ ಅಸಭ್ಯ ಮೇಲೆ ಮಾಡಿದ್ದಾನೆ. ಇನ್ನು ಬಾಸ್ ಮನೆಗೆ ಸೆಕ್ಸ್ ಟಾಯ್ಸ್ ಆರ್ಡರ್ ಮಾಡಿ ಕಳಹಿಸಿಕೊಟ್ಟಿದ್ದಾನೆ. ಐಟಿ ಆಕ್ಟ್ ಪ್ರಕಾರ ಪೊಲೀಸರು ಉದ್ಯೋಗಿ ಹರಿಪ್ರಸಾದ್ ಜೋಶಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.