Asianet Suvarna News Asianet Suvarna News

7 ವರ್ಷದ ಮಗಳ ಕೈಗೆ ಮೊಬೈಲ್‌ ಕೊಟ್ಟ ಸುಂದರಿ, ಲೀಕ್‌ ಆಯ್ತು ಕಾಂಗ್ರೆಸ್‌ ಸಚಿವನ ಅಶ್ಲೀಲ ಎಂಎಂಎಸ್!

ಒಂದೆಡೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ದಯನೀಯ ಸೋಲು ಕಾಣುತ್ತಿದ್ದರೆ, ಇನ್ನೊಂಡೆ ಕಾಂಗ್ರೆಸ್‌ ಅಧಿಕಾರದಲ್ಲಿರುವ ದೊಡ್ಡ ರಾಜ್ಯವಾದ ರಾಜಸ್ಥಾನದಲ್ಲಿ ಪಕ್ಷಕ್ಕೆ ಮುಜುಗರ ತರುವ ಘಟನೆಗಳು ನಡೆಯುತ್ತಿವೆ. ಕೆಲ ತಿಂಗಳ ಅಂತರದಲ್ಲಿ ರಾಜಸ್ಥಾನದ ಸಚಿವನ 2ನೇ ಸೆಕ್ಸ್‌ ಎಂಎಂಎಸ್‌ ವೈರಲ್‌ ಆಗಿದೆ.
 

Rajasthan minister Saleh Mohammad objectionable video with woman Viral BJP Demands sack san
Author
First Published Dec 7, 2022, 9:05 PM IST

ಜೈಪುರ (ಡಿ.7): ರಾಜಸ್ಥಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಶ್ಲೀಲ ವಿಡಿಯೋ ಸಂಚಲನ ಮೂಡಿಸಿದೆ. ಈ ವಿಡಿಯೋ ರಾಜಸ್ಥಾನದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶೇಲ್‌ ಮೊಹಮ್ಮದ್ ಅವರನ್ನು ಎನ್ನಲಾಗಿದ್ದು,ಅವರೊಂದಿಗೆ ಕಾಣಿಸಿಕೊಂಡಿರುವ ಮಹಿಳೆ ಜೋಧ್‌ಪುರದವರು ಎಂದು ಬಿಜೆಪಿ ಹೇಳಿಕೊಂಡಿದೆ. ಈ ವಿಡಿಯೋವನ್ನು ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಶೇಲ್‌ ಮೊಹಮ್ಮದ್‌ ಅವರನ್ನು ಕಾಂಗ್ರೆಸ್‌ನಿಂದ ವಜಾಗೊಳಿಸುವಂತೆ ಒತ್ತಾಯಿಸಿದೆ. ಎರಡು ದಿನಗಳ ಹಿಂದೆ ವಿಡಿಯೋ ಲೀಕ್ ಆಗಿರುವ ಬಗ್ಗೆ ಜೋಧಪುರದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದಾಗ, ವಿಡಿಯೋವನ್ನು ಶೇರ್ ಮಾಡಿದ್ದು ಐವರು ಹುಡುಗರು ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ಈಗಾಗಲೇ ಅವರನ್ನು ಬಂಧಿಸಿದ್ದಾರೆ.


ವಿಡಿಯೋ ಲೀಕ್‌ ಆಗಿದ್ದು ಹೇಗೆ?:  ಸಂತ್ರಸ್ತೆ ಡಿಸೆಂಬರ್ 5 ರಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಜೋಧ್‌ಪುರದ ಶೇರ್‌ಗಢ್ ಪೊಲೀಸ್ ಠಾಣಾಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ. ತನ್ನ ಅಶ್ಲೀಲ ವೀಡಿಯೊವನ್ನು ಅಕಸ್ಮಾತ್‌ ಆಗಿ ಫಾರ್ವರ್ಡ್‌ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆಕೆಯ 7 ವರ್ಷದ ಮಗಳು ಫೋನ್‌ನಲ್ಲಿ ಗೇಮ್‌ ಆಡುತ್ತಿದ್ದ ವೇಳೆ ಈ ವಿಡಿಯೋವನ್ನು ಬೇರೆಯವರಿಗೆ ಫಾರ್ವರ್ಡ್‌ ಮಾಡಿದ್ದಾಳೆ. ಆದರೆ, ಆ ಸಮಯದಲ್ಲಿ ಈ ವಿಡಿಯೋ ಫಾರ್ವರ್ಡ್‌ ಆಗಿರುವ ಬಗ್ಗೆ ತನಗೆ ಮಾಹಿತಿ ಇದ್ದಿರಲಿಲ್ಲ ಎಂದಿದ್ದಾರೆ.

ಎರಡು ತಿಂಗಳ ಹಿಂದೆ ತನ್ನ ಸಂಬಂಧಿಕರ ಬಳಿಗೆ ಹೋದಾಗ ಆರೋಪಿಗಳು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಹೇಳಿದ್ದಾರೆ. ಅಲ್ಲದೆ 25 ಲಕ್ಷ ರೂಪಾಯಿ ನೀಡುವಂತೆ ಒತ್ತಾಯ ಮಾಡಿದ್ದಲ್ಲದೆ, ತಮ್ಮೊಂದಿಗೂ ಸಂಬಂಧ ಬೆಳೆಸುವಂತೆ ಒತ್ತಾಯ ಹೇರಿದ್ದರು. ಇದರಿಂದ ಮನನೊಂದಿದ್ದ ನಾನು, ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಸು ಕೂಡ ಮಾಡಿದ್ದೆ ಎಂದು ಹೇಳಿದ್ದಾರೆ.  ಮಹಿಳೆಯ ದೂರಿನ ಮೇರೆಗೆ ಪೊಲೀಸರು ಬ್ಲ್ಯಾಕ್‌ಮೇಲರ್‌ಗಳಾದ ಪಂಕಜ್ ವಿಷ್ಣೋಯ್, ವಿಕಾಸ್, ರಾಮಜಾಸ್ ವಿಷ್ಣೋಯ್, ಸುಮಿತ್ ವಿಷ್ಣೋಯ್, ರವೀಂದ್ರ ವಿಷ್ಣೋಯ್ ಅವರನ್ನು ಪೋಖ್ರಾಣ್‌ನಿಂದ ಬಂಧಿಸಿದ್ದಾರೆ.

ಸೆಕ್ಸ್‌ಗಾಗಿ ಮೂವರು ಸಚಿವರ ಒತ್ತಾಯ, ಸ್ಪಪ್ನಾ ಸುರೇಶ್ ಬಿಚ್ಚಿಟ್ಟ ರಹಸ್ಯಕ್ಕೆ ಪಿಣರಾಯಿ ಸರ್ಕಾರ ಗಡಗಡ!

ಗ್ಲೆಹೋಟ್‌ ಸರ್ಕಾರದ 2ನೇ ಸಚಿವನ ಎಂಎಂಎಸ್‌ ಪ್ರಕರಣ:  ಈ ವರ್ಷದ ಜನವರಿಯಲ್ಲಿ ಸಚಿವ ರಾಮಲಾಲ್ ಜಾಟ್ ಅವರನ್ನು ಲೈಂಗಿಕ ಹಗರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿತ್ತು. ಇದನ್ನು ಜೋಧಪುರ ಪೊಲೀಸರು ಬಹಿರಂಗಪಡಿಸಿದ್ದರು. ರೂಪದರ್ಶಿಯ ಮೂಲಕ ರಾಜಸ್ಥಾನದ ಕಂದಾಯ ಸಚಿವ ರಾಮಲಾಲ್ ಜಾಟ್ ಅವರನ್ನು ಹನಿ ಟ್ರ್ಯಾಪ್‌ನಲ್ಲಿ ಸಿಲುಕಿಸುವ ಸಂಚು ರೂಪಿಸಲಾಗಿತ್ತು. ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸುವ ಯೋಜನೆ ಯಶಸ್ವಿಯಾಗುವ ಮೊದಲು ಮಾಡೆಲ್‌ ಭಿಲ್ವಾರಾವನ್ನು ತೊರೆದಿದ್ದು ಮಾತ್ರವಲ್ಲದೆ, ಜೋಧ್‌ಪುರದ ಹೋಟೆಲ್‌ನ 7 ನೇ ಮಹಡಿಯಿಂದ ಜಿಗಿದಿದ್ದಳು. ಇದರಿಂದಾಗಿ ಅವರು ಸಂಚು ವಿಫಲವಾಗಿತ್ತು. ಸಂಚುಕೋರರಾದ ರೂಪದರ್ಶಿ ದೀಪಿಕಾ (30) ಮತ್ತು ಅಕ್ಷತ್ (32) ಅವರನ್ನು ಭಿಲ್ವಾರಾ ಪೊಲೀಸರು ಬಳಿಕ ಬಂಧಿಸಿದ್ದರು. ಸ್ವತಃ ಸಚಿವರೇ ಷಡ್ಯಂತ್ರವನ್ನು ಒಪ್ಪಿಕೊಂಡಿದ್ದರು.

Love Triangle: ತನ್ನೆದುರೇ ಸೆಕ್ಸ್‌ ಮಾಡುವಂತೆ ಹೇಳಿ ಅವರ ಮೇಲೆ ಫೆವಿಕ್ವಿಕ್‌ ಸುರಿದು ಕೊಂದ ಮಂತ್ರವಾದಿ!

ಯಾರಿವರು ಶೇಲ್‌ ಮೊಹಮ್ಮದ್‌: ಶೇಲ್‌ ಮೊಹಮ್ಮದ್ ಸಿಂಧಿ ಮುಸ್ಲಿಮರ ಧಾರ್ಮಿಕ ಮುಖಂಡ ಗಾಜಿ ಫಕೀರ್ ಅವರ ಹಿರಿಯ ಮಗ. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶೈತಾನ್ ಸಿಂಗ್ ಅವರು ಕಾಂಗ್ರೆಸ್‌ ಶಾಸಕ ಶೇಲ್‌ ಮೊಹಮ್ಮದ್ ಅವರನ್ನು 34 ಸಾವಿರದ 444 ಮತಗಳಿಂದ ಸೋಲಿಸಿದ್ದರು. 2008 ರ ವಿಧಾನಸಭಾ ಚುನಾವಣೆಯಲ್ಲಿ, ಶೇಲ್‌ ಮೊಹಮ್ಮದ್ 339 ಮತಗಳ ಕಡಿಮೆ ಅಂತರದಿಂದ ಬಿಜೆಪಿಯ ಶೈತಾನ್ ಸಿಂಗ್ ಅವರನ್ನು ಸೋಲಿಸಿದರು. ಆದರೆ, 2018ರಲ್ಲಿ ಶೇಲ್‌ ಮೊಹಮ್ಮದ್ ಅವರು ಬಿಜೆಪಿಯ ಮಹಂತ್ ಪ್ರತಾಪ್ ಪುರಿ ಅವರನ್ನು 872 ಮತಗಳಿಂದ ಸೋಲಿಸಿದರು. ಈಗ ಶೇಲ್‌ ಮೊಹಮ್ಮದ್ ಅವರು ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ.

Follow Us:
Download App:
  • android
  • ios