ರಾಜಸ್ಥಾನದಲ್ಲಿ ಉಗ್ರರ ದಾಳಿ ಎಚ್ಚರಿಕೆ; 144 ಸೆಕ್ಷನ್, ನೈಟ್ ಕರ್ಫ್ಯೂ ಜಾರಿ!
- ದೇಶದ ಅಂತಾರಾಷ್ಟ್ರೀಯ ಗಡಿ ಪ್ರದೇಶ ಹಾಗೂ ಗಡಿ ರಾಜ್ಯದಲ್ಲಿ ಟೆರರ್ ಅಲರ್ಟ್
- ರಾಜಸ್ಥಾನದ ಮೇಲೆ ಉಗ್ರರ ದಾಳಿ ಕುರಿತು ಎಚ್ಚರಿಕೆ, 144 ಸೆಕ್ಷನ್, ನೈಟ್ ಕರ್ಫ್ಯೂ ಜಾರಿ
- ಹೆಚ್ಚುವರಿ ಸೇನೆ ನಿಯೋಜನೆ, ಪೊಲೀಸ್ ಬಿಗಿ ಬಂದೋಬಸ್ತ್
ರಾಜಸ್ಥಾನ(ಜು.13): ಜಮ್ಮು ಕಾಶ್ಮೀರ, ಉತ್ತರ ಪ್ರದೇಶ ಸೇರಿದಂತೆ ಭಾರತದೆ ಕೆಲ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆಯನ್ನು ಹತ್ತಿಕ್ಕಲಾಗಿದೆ. ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದವರ ಬಂಧವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ರಾಜಸ್ಥಾನದ ಮೇಲೆ ಉಗ್ರರ ದಾಳಿ ಮಾಡುವ ಸಾಧ್ಯತೆ ಕುರಿತು ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನಕ್ಕೆ ತಿರುಗುಬಾಣ; ಉಗ್ರರ ದಾಳಿಯಲ್ಲಿ ಪಾಕ್ ಸೇನಾ ಕ್ಯಾಪ್ಟನ್, 11 ಯೋಧರು ಹತ್ಯೆ!
ಗಡಿ ಪ್ರದೇಶಗಳ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದೆ. 114 ಸೆಕ್ಷನ್, ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ಶ್ರೀಗಂಗನಗರ, ಕರಣಪುರ, ರೈಸಿಂಗ್ ನಗರ, ಅನೂಪ್ ಗರ್, ಘರ್ಸಾನಾ ಬ್ಲಾಕ್ ಪ್ರದೇಶದಲ್ಲಿ ಸುಮಾರು 2 ಕಿ.ಮೀ ವ್ಯಾಪ್ತಿ ವರೆಗೆ ನಿರ್ಬಂಧ ಹೇರಲಾಗಿದೆ.
ಶರಣಾದ 22 ಆಫ್ಘಾನಿಸ್ತಾನ ಯೋಧರ ಮೇಲೆ ಗುಂಡಿನ ಸುರಿಮಳೆಗೈದ ತಾಲಿಬಾನ್ ಉಗ್ರರು!
ಗಡಿಯೊಳಗೆ ಉಗ್ರರ ಒಳ ನುಸುಳುವಿಕೆ ಹಾಗೂ ದಾಳಿ ಮಾಹಿತಿ ಪಡೆದ ರಾಜಸ್ಥಾನ ಸರ್ಕಾರ ತಕ್ಷಣ ಅಲರ್ಟ್ ಆಗಿದೆ. ರಾತ್ರಿ 7 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಜನರ ಚಲನವಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಆ ಸಮಯದಲ್ಲಿ ಯಾವುದೇ ಕ್ರ್ಯಾಕರ್ ಸಿಡಿಸಲು ಅವಕಾಶವಿಲ್ಲ. ರೈತರು ಸಶಸ್ತ್ರ ಪಡೆ ಅಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.