ರಾಜಸ್ಥಾನ(ಜು.07): ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ಕೈಲಾದಷ್ಟು ನೆರವು ನೀಡಿದರೆ ಉತ್ತಮ. ನೆರವು ನೀಡಲು ಸಾಧ್ಯವಾಗಿದ್ದರೆ ಸುಮ್ಮನಿದ್ದರೂ ಉತ್ತಮ. ಆದರೆ ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದು ಮತ್ತು ಮಾಡುವುದು ಅತೀ ದೊಡ್ಡ ತಪ್ಪು. ಇದೀಗ ಕೊರೋನಾ ವೈರಸ್ ಸೋಂಕಿತರ ಚಿಕಿತ್ಸೆ ವಿಚಾರದಲ್ಲೂ ಧರ್ಮ ತೊಡಕಾಗಿದೆ. ರಾಜಸ್ಥಾನದಲ್ಲಿ ವೈದ್ಯರ ವ್ಯಾಟ್ಸ್‌ಆ್ಯಪ್ ಚಾಟ್‌ನಲ್ಲಿ ತಾವು ಮುಸ್ಲಿಂ ಕೊರೋನಾ ಸೋಂಕಿತರನ್ನು ಆರೈಕೆ ಮಾಡುವುದಿಲ್ಲ ಅನ್ನೋ ಚಾಟ್ ವೈರಲ್ ಆಗಿದೆ.

ರಸ್ತೆ ಪಕ್ಕವೇ ಸೋಂಕಿತನ ಅಂತ್ಯಕ್ರಿಯೆ; ಪಿಪಿಇ ಕಿಟ್ ಅಲ್ಲಿಯೇ ಬಿಸಾಡಿ ಹೋದ ಸಿಬ್ಬಂದಿ.

ಚುರು ಜಿಲ್ಲೆಯ ಖಾಸಗಿ ಆಸ್ಪತ್ರೆಯ ವೈದ್ಯರು ವ್ಯಾಟ್ಸ್‌ಆ್ಯಪ್ ಗ್ರೂಪ್‌ ಚಾಟ್ ನಡೆಸಿದ್ದಾರೆ. ಈ ವೇಳೆ ಮುಸ್ಲಿಂ ಕೊರೋನಾ ಸೋಂಕಿತರ ಚಿಕಿತ್ಸೆ, ಆರೈಕೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಸೋಂಕಿತರನ್ನು ಮಸ್ಲಿಂ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ. ಹೀಗಾಗಿ ನಾವು ಕೂಡ ಮುಸ್ಲಿಂ ಸೋಂಕಿತರಿಗೆ ಚಿಕಿತ್ಸೆ ನೀಡಬಾರದು ಎಂದು ಚಾಟ್ ಮಾಡಿದ್ದಾರೆ. 

ಮೈಸೂರು ವ್ಯಕ್ತಿಯಿಂದ ಛತ್ತೀಸ್‌ಗಢ ಪೊಲೀಸರಿಗೆ ಕೊರೋನಾ ವೈರಸ್‌ ಭೀತಿ!.

ವೈದ್ಯರ ಚಾಟಿಂಗ್ ಸ್ಕ್ರೀನ್ ಶಾಟ್ ವೈರಲ್ ಆಗಿದೆ. ಆಸ್ಪ್ರೆತೆ ಮುಖ್ಯಸ್ಥ ಡಾಕ್ಟರ್ ಸುನಿಲ್ ಚೌಧರಿ ಫೇಸ್‌ಬುಕ್ ಮೂಲಕ ಕ್ಷಮೆ ಕೇಳಿದ್ದಾರೆ. ಸಿಬ್ಬಂದಿಗಳು, ವೈದ್ಯರ ಸಂಭಾಷಣೆ ವೈರಲ್ ಆಗುತ್ತಿದೆ. ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ಅಥವಾ ಆರೈಕೆ ಮಾಡದಿರುವ ಯಾವುದೇ ಉದ್ದೇಶವಿಲ್ಲ. ಸಿಬ್ಬಂದಿಗಳ ತಪ್ಪಿಗೆ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದೀಗ ಸಂಭಾಷಣೆಯ ಸತ್ಯಾಸತ್ಯತೆ, ಸ್ಕ್ರೀನ್ ಶಾಟ್ ವಿವರ ಸೇರಿದಂತೆ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖ ನಡೆಸುತ್ತಿದ್ದಾರೆ.