ರೈತ ಪ್ರತಿಭಟನೆ ಬೆಂಬಲಿಸಿರುವ ಕಾಂಗ್ರೆಸ್ ಇದೀಗ ಎಲ್ಲಾ ರಾಜ್ಯಗಳಲ್ಲಿ ರೈತ ಸಮಾವೇಶ ಮಾಡೋ ಮೂಲಕ ಕೇಂದ್ರದ ವಿರುದ್ಧ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ. ಆದರೆ ಕೆಲ ರಾಜ್ಯದಲ್ಲಿ ರೈತ ಪ್ರತಿಭಟನೆ ಸಮಾವೇಶದಿಂದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡಿದೆ.

ಜೈಪುರ(ಫೆ.21): ರೈತ ಪ್ರತಿಭಟನೆ ಬೆಂಬಲಿ ರೈತ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಇದರಂತೆ ಆಯಾ ರಾಜ್ಯದ ಕಾಂಗ್ರೆಸ್ ರೈತ ಸಮಾವೇಶ ಆಯೋಜಿಸುತ್ತಿದೆ. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ರೈತ ಸಮಾವೇಶ ಪಕ್ಷಕ್ಕೆ ಇರಿಸುಮುರಿಸು ತಂದಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ವಿಡಿಯೋ ವೈರಲ್

ಇದಕ್ಕೆ ಮುಖ್ಯ ಕಾರಣ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಹಾಗೂ ಬಂಡಾಯ ಎದ್ದು ಮತ್ತೆ ಪಕ್ಷದಲ್ಲಿ ಮುಂದುವರಿದಿರುವ ಸಚಿನ್ ಪೈಲೆಟ್ ಬಣ. ರಾಹುಲ್ ಗಾಂಧಿ ಸೂಚನೆಯಂತೆ ರಾಜಸ್ಥಾನದಲ್ಲಿ ಫೆಬ್ರವರಿ 13 ರಿಂದ 23ರವರೆಗೆ ಹಲವು ಜಿಲ್ಲೆಗಳಲ್ಲಿ ರೈತ ಸಮಾವೇಶ ಹಾಗೂ ರ್ಯಾಲಿಯನ್ನು ಕಾಂಗ್ರೆಸ್ ಆಯೋಜಿಸಿದೆ. ಈ ಸಮಾವೇಶಕ್ಕೆ ಒಂದು ಬಣ ಹಾಜರಾದರೆ ಮತ್ತೊಂದು ಬಣ ಗೈರಾಗಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಾಳತ್ವ ವಹಿಸಿದ ರ್ಯಾಲಿಗೆ ಸಚಿನ್ ಪೈಲೆಟ್ ಬಣ ಗೈರಾಗಿದೆ. ಇನ್ನು ಸಚಿನ್ ಪೈಲೆಟ್ ಮುಂದಾಳತ್ವ ವಹಿಸಿ ಆಯೋಜಿಸಿದ ಸಮಾವೇಶಗಳಲ್ಲಿ ಅಶೋಕ್ ಗೆಹ್ಲೋಟ್ ಬಣ ಗೈರಾಗಿದೆ. ಇತ್ತೀಚೆಗೆ ಸಚಿನ್ ಪೈಲೆಟ್ ಆಯೋಜಿಸಿದ ರ್ಯಾಲಿಗೆ ರಾಜ್ಯ ಕಾಂಗ್ರೆಸ್‌ನಿಂಗ ಕೇವಲ 17 ಮಂದಿ ಭಾಗವಿಸಿದ್ದರು.

ಇನ್ನು ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಆಯೋಜಿಸಿದ ರೈತ ಸಮಾವೇಶಕ್ಕೆ, ಸಚಿನ್ ಪೈಲೆಟ್ ಬಣ ಸಂಪೂರ್ಣ ಗೈರಾಗಿದೆ. ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿನ್ ಪೈಲೆಟ್, ಕಾಂಗ್ರೆಸ್ ಸರ್ಕಾರಕ್ಕೆ ಪರ್ಯಾವಾಗಿ ಯಾವುದೇ ರ್ಯಾಲಿ ಆಯೋಜಿಸುತ್ತಿಲ್ಲ. ನಾವು ರೈತರನ್ನು ಬೆಂಬಲಿಸಲು ರ್ಯಾಲಿ ಆಯೋಜಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.