ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಳುಕುವ ಬಳ್ಳಿಯನ್ನು ಕರೆತಂದು ತಮ್ಮ ಮುಂದೆ ಲೈಲಾ ಮೇ ಲೈಲಾ ಡ್ಯಾನ್ಸ್ ಮಾಡಿಸಿದ್ದಾರೆ. ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Laila dance at congress rally against farm bill in Jharkhand ckm

ಜಾರ್ಖಂಡ್(ಫೆ.21):  ಕೇಂದ್ರ ಸರ್ಕಾರದ ಕೃಷಿ ಮಸೂದೆ ಅಸ್ತ್ರವನ್ನು ಮುಂದಿಟ್ಟುಕೊಂಡಿರುವ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನಾ ರ್ಯಾಲಿ ಆಯೋಜಿಸುತ್ತಿದೆ. ಹೀಗೆ ಜಾರ್ಖಂಡ್ ಸರೈಕೇಲಾದಲ್ಲಿ ಕಾಂಗ್ರೆಸ್ ಬಹುದೊಡ್ಡ ರ್ಯಾಲಿ ಆಯೋಜಿಸಿದೆ. ಈ ರ್ಯಾಲಿಗೆ ಕಾಂಗ್ರೆಸ್ ಮುಖಂಡರು, ಬಳುಕುವ ಬಳ್ಳಿ ಡ್ಯಾನ್ಸರ್ ಕರೆತಂದು ವೇದಿಕೆಯಲ್ಲಿ ಡ್ಯಾನ್ಸ್ ಮಾಡಿಸಿದ್ದಾರೆ. ಇದು ವಿವಾದಕ್ಕೂ ಕಾರಣವಾಗಿದೆ.

ರಾಜ್ ಕುಮಾರ್ ಪ್ರತಿಮೆ ಬಗ್ಗೆ ನಾಲಿಗೆ ಹರಿಬಿಟ್ಟ ಹ್ಯಾರಿಸ್, ಬಳಿಕ ಕ್ಷಮೆಯಾಚನೆ.

ಕಾಂಗ್ರೆಸ್ ನಾಯಕರು ಇದ್ದ ವೇದಿಕೆಯಲ್ಲಿ ಯುವತಿ ಬಾಲಿವುಡ್‌ನ ಲೈಲಾ ಮೇ ಲೈಲಾ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಇತ್ತ ಪ್ರತಿಭಟನಾ ರ್ಯಾಲಿಯಲ್ಲಿ ಸೇರಿದ ಜನರು ಶಿಳ್ಳೆ ಹೊಡೆದು ಆನಂದಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗಿದೆ. ಇತ್ತ ಜಾರ್ಖಂಡ್ ಬಿಜೆಪಿ  ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಇದು ಕಾಂಗ್ರೆಸ್ ಸಂಸ್ಕೃತಿ, ಮಹಿಳಾ ಸಬಲೀಕರಣ ಎಂದು ವ್ಯಂಗ್ಯವಾಡಿದೆ.

 

ಪೆಟ್ರೋಲ್ ಬೆಲೆ ಏರಿಕೆ: ವಿರೋಧಿಸದ್ದಕ್ಕೆ ಬಿಗ್‌ಬಿ, ಅಕ್ಷಯ್‌ಗೆ ಕಾಂಗ್ರೆಸ್ ಬೆದರಿಕೆ

ಮುಂದಿನ ಕಾಂಗ್ರೆಸ್ ರ್ಯಾಲಿಯಲ್ಲಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಬರುತ್ತಾರಾ ಎಂದು ಬಿಜೆಪಿ ಪ್ರಶ್ನಿಸಿದೆ. ಇನ್ನು ಕೃಷಿ ಕಾಯ್ದೆ ವಿರೋಧಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆಯೋಜಿಸಿದ ಜನಾಕ್ರೋಶ ರ್ಯಾಲಿಯ ವಿಡಿಯೋ ಎಂದು ಬಿಜೆಪಿ ನಾಯಕ ಸುರೇಶ್ ನಕುವಾ ಟ್ವೀಟ್ ಮಾಡಿದ್ದಾರೆ.

ಇನ್ನು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ ಈ ರ್ಯಾಲಿಯಲ್ಲಿ ಯುವತಿಯರನ್ನು ಕರೆಸಿ ಈ ರೀತಿ ಡ್ಯಾನ್ಸ್ ಮಾಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios