Asianet Suvarna News Asianet Suvarna News

ರಾಜಸ್ಥಾನ ಬಿಜೆಪಿಯಲ್ಲಿ ಕ್ಷಿಪ್ರ ಕ್ರಾಂತಿ ಸುಳಿವು, ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಬಿಗಿಗೊಳಿಸಿದ್ರಾ ರಾಜೆ?

ರಾಜಸ್ಥಾನದಲ್ಲಿ ಸಿಎಂ ಆಯ್ಕೆ ಬಿಜೆಪಿ ತಲೆನೋವು ಹೆಚ್ಚಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ವಸುಂಧರಾ ರಾಜೆಗೆ ಸ್ಪೀಕರ್ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಆದರೆ ರಾಜೆ ಈ ಆಫರ್ ತಿರಸ್ಕರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಜೆಡಿ ನಡ್ಡಾ ಕೆಲ ಸೂಚನೆ ನೀಡಿದ್ದು, ರಾಜಸ್ಥಾನ ಬಿಜೆಪಿಯಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುವ ಸಾಧ್ಯತೆಗಳು ಕಾಣಿಸುತ್ತಿದೆ.

Rajasthan CM Suspense vasundhara raje asked to not meet MLA says report ckm
Author
First Published Dec 11, 2023, 8:15 PM IST

ಜೈಪುರ(ಡಿ.11) ಪಂಚ ರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯ ಗೆದ್ದ ಬಿಜೆಪಿ ಈಗಾಗಲೇ ಛತ್ತೀಸಘಡ ಹಾಗೂ ಮಧ್ಯಪ್ರದೇಶದಲ್ಲಿ ಸಿಎಂ ಆಯ್ಕೆ ಮಾಡಿದೆ. ಆದರೆ ರಾಜಸ್ಥಾನದ ಸಿಎಂ ಆಯ್ಕೆ ಕಗ್ಗಂಟಾಗುತ್ತಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಹೈಕಮಾಂಡ್ ಬಳಿ ಇರುವ ಪಟ್ಟಿಯಲ್ಲಿ ಬಾಬಾ ಬಾಲಕನಾಥ್, ಗಜೇಂದ್ರ ಸಿಂಗ್ ಶೇಖಾವತಿ ಸೇರಿದಂತೆ ಹಲವು ನಾಯಕರ ಹೆಸರಿದೆ. ಮಾಜಿ ಸಿಎಂ ವಸುಂಧರಾ ರಾಜೆಗೆ ಸ್ಪೀಕರ್ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪೀಕರ್ ಸ್ಥಾನ ತಿರಸ್ಕರಿಸಿವು ರಾಜೆ, ತಮ್ಮ ಬೆಂಬಲಿಗರ ಶಾಸಕರ ಜೊತೆ ಸಭೆ ನಡೆಸಲು ಮುಂದಾಗಿದ್ದಾರೆ. ಇದು ಕೇಂದ್ರ ಬಿಜೆಪಿ ತಲೆನೋವು ಹೆಚ್ಚಿಸಿದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಡಿ ನಡ್ಡಾ , ಕೆಲ ಸೂಚನೆ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯನ್ನೂ ಸಿಎಂ ವಸುಂಧರಾ ರಾಜೆ ವಿರುದ್ಧ ಇದ್ದ ಅಲೆಯಿಂದ ಬಿಜೆಪಿ ಸೋತಿದೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಹೀಗಾಗಿ ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಹೋರಾಡಿ ಗೆಲುವು ಸಾಧಿಸಿದೆ. ಹೀಗಾಗಿ ಛತ್ತೀಸಘಡ ಹಾಗೂ ಮಧ್ಯಪ್ರದೇಶದಲ್ಲಿ ಹೊಸಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ರಾಜಸ್ಥಾನದಲ್ಲೂ ಇದೇ ರೀತಿ ನಡೆಗೆ ಹೈಕಮಾಂಡ್ ಒಲವು ತೋರಿದೆ. ಆದರೆ ವಸುಂದರಾ ರಾಜೆ, 30ಕ್ಕೂ ಹೆಚ್ಚು ತಮ್ಮ ಬೆಂಬಲಿಗರ ಶಾಸಕರ ಜೊತೆಗೆ ಸಭೆ ನಡೆಸಿದ್ದಾರೆ. ಈ ಮಾಹಿತಿಗಳು ಬರುತ್ತಿದ್ದಂತೆ, ಯಾರ ಜೊತೆಗೂ ಸಭೆ ಹಾಗೂ ಮಾತುಕತೆ ನಡೆಸದಂತೆ ವಸುಂಧರಾ ರಾಜೆಗೆ ಸೂಚನೆ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಮಧ್ಯಪ್ರದೇಶಕ್ಕೆ ಮೋಹನ್ ಯಾದವ್ ನೂತನ ಸಿಎಂ; ಶಿವರಾಜ್ ಸಿಂಗ್ ಬದಲು ಹೊಸಬರಿಗೆ ಮಣೆಹಾಕಿದ ಬಿಜೆಪಿ!

ರಾಜಸ್ಥಾನದಲ್ಲಿ 3 ಕೇಂದ್ರೀಯ ಬಿಜೆಪಿ ವೀಕ್ಷಕರಾದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಪಕ್ಷದ ಉಪಾಧ್ಯಕ್ಷ ಸರೋಜ್‌ ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ 115 ಬಿಜೆಪಿ ಶಾಸಕರೊಂದಿಗೆ ಸಭೆ ಮಾಡದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ರಾಜಸ್ಥಾನದ ಯೋಗಿ ಎಂದೇ ಕರೆಯಲಾಗುತ್ತಿರುವ ಬಾಬಾ ಬಾಲಕ್‌ನಾಥ್‌, ಗಜೇಂದ್ರ ಸಿಂಗ್‌ ಶೆಖಾವತ್‌, ಅರ್ಜುನ್‌ ಮೇಘ್ವಾಲ್‌ ಮತ್ತು ದಿಯಾ ಕುಮಾರಿ ಸೇರಿ ಹಲವರು ಸಿಎಂ ರೇಸ್‌ನಲ್ಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಜಯಿಸಿರುವ ರಾಜಸ್ಥಾನ ಬಿಜೆಪಿ ಸಂಸದ ಬಾಬಾ ಬಾಲಕನಾಥ್‌ ಹಾಗೂ ಛತ್ತೀಸ್‌ಗಢ ಬಿಜೆಪಿ ಸಂಸದೆ ರೇಣುಕಾ ಸಿಂಗ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಬಾಬಾ ಬಾಲಕನಾಥ್‌ ಅವರು ರಾಜಸ್ಥಾನದ ಅಲ್ವರ್‌, ರೇಣುಕಾ ಸಿಂಗ್‌ ಛತ್ತೀಸ್‌ಗಢದ ಸುರ್ಗುಜಾ ಕ್ಷೇತ್ರದ ಸಂಸದರಾಗಿದ್ದರು.

 

Breaking: ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಸಿಎಂ ಆಗಿ ಘೋಷಣೆ!

Follow Us:
Download App:
  • android
  • ios