Asianet Suvarna News Asianet Suvarna News

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಕೊರೋನಾ; ಆತಂಕದಲ್ಲಿ ರಾಜಸ್ಥಾನ!

ಕೊರೋನಾ ವೈರಸ್ ಭೀಕರತೆ ಒಂದೊಂದೆ ರಾಜ್ಯಗಳು ಸಂಪೂರ್ಣ ಲಾಕ್‌ ಆಗುತ್ತಿದೆ.  ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರಗಳು ಸಾಗರೋಪಾದಿಯಲ್ಲಿ ಕೆಲಸ ಮಾಡತ್ತಿದೆ. ಇದರ ನಡುವೆ ರಾಜಸ್ಥಾನ ಮುಖ್ಯಮಂತ್ರಿಗೆ ಕೊರೋನಾ ಅಂಟಿಕೊಂಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Rajasthan Chief Minister Ashok Gehlot tested coronavirus positive ckm
Author
Bengaluru, First Published Apr 29, 2021, 2:38 PM IST

ಜೈಪುರ(ಏ.29):  ಕೊರೋನಾ ವೈರಸ್ ಪ್ರಕರಣಗಳು ದೇಶವನ್ನೇ ಬೆಚ್ಚಿ ಬೀಳಿಸುತ್ತಿದೆ. ಹಲವು ಸಮಸ್ಯೆಗಳ ನಡುವೆ ಕೊರೋನಾ ನಿಯಂತ್ರಣ ಕೂಡ ಇದೀಗ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೊರೋನಾ ವಕ್ಕರಿಸಿದೆ. ಇದೀಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿದೆ.

ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..?

69 ವರ್ಷದ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಪತ್ನಿಗೆ ಕೊರೋನಾ ವಕ್ಕರಿಸಿದೆ. ಪತ್ನಿಯಿಂದ ಇದೀಗ ಸಿಎಂಗೂ ಅಂಟಿಕೊಂಡಿದೆ. ಕೊರೋನಾ ದೃಢಪಡುತ್ತಿದ್ದಂತೆ ಅಶೋಕ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಈ ಕುರಿತು ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 

ನನ್ನ ಕೊರೋನಾ ವರದಿ ಪಾಸಿಟೀವ್ ಆಗಿದೆ. ಆದರೆ ನನಗೆ ಯಾವುದೇ ರೋಗಲಕ್ಷಣಗಳು ಇಲ್ಲ. ಐಸೋಲೇಶನ್‌ನಿಂದಲೇ ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದೇನೆ. ಜೊತೆಗೆ ಕೊರೋನಾ ನಿಯಮ ಪಾಲಿಸುತ್ತೇನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಮೊದಲ ಡೋಸ್‌ನಿಂದ ಸೋಂಕು ಪ್ರಸರಣ ಶೇ.50ರಷ್ಟು ಇಳಿಕೆ!

ಗೆಹ್ಲೋಟ್‌ಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಳ್ಳುವ ಮೊದಲು ಅವರ ಪತ್ನಿಗೆ ಕೊರೋನಾ ಕಾಣಿಸಿಕೊಂಡಿತ್ತು. ಈ ವೇಳೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. ಇಷ್ಟೇ ಅಲ್ಲ ಮುಂಜಾಗ್ರತ ಕ್ರಮವಾಗಿ ತಾನು ಕೂಡ ಪರೀಕ್ಷೆ ಮಾಡಿಸಿದ್ದೇನೆ. ಜೊತೆಗೆ ಐಸೋಲೇಶನ್‌ಗೆ ಒಳಗಾಗಿದ್ದೇನೆ ಎಂದಿದ್ದರು. ಇದರ ಮರುದಿನವೇ ಗೆಹ್ಲೋಟ್ ವರದಿ ಬಂದಿದ್ದು, ಕೊರೋನಾ ಪಾಸಿಟೀವ್ ಆಗಿದೆ.

ರಾಜಸ್ಥಾನದಲ್ಲಿ ಬುಧವಾರ(ಏ.28) 16,613 ಕೊರೋನಾ ಪ್ರಕರಣಗಳು ದಾಖಲಾಗಿದೆ. 120 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ರಾಜಸ್ಥಾನದಲ್ಲಿ ಒಟ್ಟು 5,63,577 ಮಂದಿಗೆ ಸೋಂಕು ತಗುಲಿದೆ. ಇನ್ನು 3,926 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಕ್ರೀಯ ಪ್ರಕರಣಗಳ ಸಂಖ್ಯೆ 1,63,372 ಕ್ಕೆ ಏರಿಕೆಯಾಗಿದೆ.

Follow Us:
Download App:
  • android
  • ios