Asianet Suvarna News Asianet Suvarna News

ಇಂದು ರಾಜಸ್ಥಾನ ವಿಧಾನಸಭೆಯ 199 ಕ್ಷೇತ್ರಗಳಲ್ಲಿ ಮತದಾನ: ಡಿ.3ರಂದು ಫಲಿತಾಂಶ

ಪಂಚ ರಾಜ್ಯ ಚುನಾವಣೆ ಭಾಗವಾಗಿರುವ ಹಾಗೂ ಬಿಜೆಪಿ-ಕಾಂಗ್ರೆಸ್‌ ನಡುವಿನ ಪ್ರತಿಷ್ಠೆಯ ಸವಾಲಾಗಿರುವ ಮಹತ್ವದ ರಾಜಸ್ಥಾನದ ವಿಧಾನಸಭೆ ಚುನಾವಣೆ ಇಂದು ನಡೆಯಲಿದೆ. 

Rajasthan Assembly Election Today Voting in 199 constituencies Result on 3rd December akb
Author
First Published Nov 25, 2023, 7:02 AM IST

ಜೈಪುರ: ಪಂಚ ರಾಜ್ಯ ಚುನಾವಣೆ ಭಾಗವಾಗಿರುವ ಹಾಗೂ ಬಿಜೆಪಿ-ಕಾಂಗ್ರೆಸ್‌ ನಡುವಿನ ಪ್ರತಿಷ್ಠೆಯ ಸವಾಲಾಗಿರುವ ಮಹತ್ವದ ರಾಜಸ್ಥಾನದ ವಿಧಾನಸಭೆ ಚುನಾವಣೆ ಇಂದು ನಡೆಯಲಿದೆ. 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ  ಇಂದು ಚುನಾವಣೆ ನಡೆಯಲಿದೆ. ಕರಣ್‌ಪುರ ಕ್ಷೇತ್ರದ ಹಾಲಿ ಕಾಂಗ್ರೆಸ್‌ ಶಾಸಕರು ಹಾಗೂ ಅಭ್ಯರ್ಥಿಯಾಗಿದ್ದ ಗುರ್ಮಿತ್‌ ಸಿಂಗ್‌ ನಿಧನರಾದ ಕಾರಣ ಆ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆ ಆಗಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. 1863 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, 5.27 ಕೋಟಿ ಜನ ಮತದಾರರಿದ್ದು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.  ಡಿ.3ರಂದು ಮತ ಎಣಿಕೆ ನಡೆಯಲಿದೆ.

ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ರಾಜಸ್ಥಾನದಲ್ಲಿ ಹಾಲಿ ಸಿಎಂ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್‌ನಲ್ಲಿನ ಗೆಹ್ಲೋಟ್‌-ಸಚಿನ್‌ ಪೈಲಟ್‌ ನಡುವಿನ ಒಡಕು, ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಜಯಗಳಿಸಲು ಬಿಜೆಪಿ ಅವಿರತ ಶ್ರಮ ಪಡುತ್ತಿದೆ.

ರಾಜಸ್ಥಾನ ಚುನಾವಣೆಗೆ 7 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌: ಕರ್ನಾಟಕಕ್ಕಿಲ್ಲದ ಇನ್ನೆರಡು ಗ್ಯಾರಂಟಿ ಯಾವುವು?

95 ವರ್ಷದ ಬಿಜೆಪಿ ಕಾರ್ಯಕರ್ತನ ನೋಡಿ ಮೋದಿ ಭಾವುಕ!
ಜೈಪುರ: ರಾಜಸ್ಥಾನ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ 95 ವರ್ಷದ ಬಿಜೆಪಿ ಮುಖಂಡ ಧರಮ್ ಚಂದ್ ದೇರಸರಿಯಾ ಅವರು ಕಾರ್ಯಕರ್ತರ ಸಾಲಿನಲ್ಲಿ ಕೂತಿರುವುದನ್ನು ಕಂಡು ಭಾವುಕರಾದರು.  ರಾಜ್‌ಸಮಂದ್‌ನಲ್ಲಿ ಮಾತನಾಡಿದ ಮೋದಿ, ತಮ್ಮ ಆರು ದಶಕಗಳನ್ನು ಪಕ್ಷಕ್ಕಾಗಿ ಮುಡಿಪಾಗಿಟ್ಟ ದೇರಸರಿಯಾ ಜಿ ಅವರನ್ನು ನಾನು ಇಂದು ನೋಡಿದ್ದೇನೆ ಮತ್ತು ಈ ವಯಸ್ಸಿನಲ್ಲಿ ಅವರು ಪ್ರೇಕ್ಷಕರ ನಡುವೆ ಕುಳಿತು ನಮ್ಮೆಲ್ಲರನ್ನು ಆಶೀರ್ವದಿಸುತ್ತಿದ್ದಾರೆ. ಇದರಿಂದ ನಮ್ಮ ಪ್ರಚಾರದ ಟೊಪ್ಪಿಗೆಗೆ ಗರಿ ಸೇರಿದಂತಾಗಿದೆ ಎಂದರು. ಆಗ ಪ್ರೇಕ್ಷಕರು ಚಪ್ಪಾಳೆಯ ಮಳೆ ಸುರಿಸಿದರು.

ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

Follow Us:
Download App:
  • android
  • ios